ಮತದಾನ ಮಹತ್ವ ಕುರಿತು ಅಭಿಯಾನ
ಹಾವೇರಿ: ಪ್ರಸಕ್ತ ವಿಧಾನ ಸಭಾ ಚುನಾವಣೆಯ ಮತದಾನದಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಬಂಧದಲ್ಲಿ ಭಾರತೀಯ ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.
ಈ ಸಮಿತಿ ಮೊದಲ ಹಂತದಲ್ಲಿ ಈಗಾಗಲೇ ಮತದಾರರ ನೊಂದಣಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೈಗೊಂಡಿದ್ದು, ಪ್ರಾರಂಭವಾದ ಚುನಾವಣಾ ಜಾಗೃತಿ ಮೇ 3ರ ವರೆಗೆ ಜಿಲ್ಲಾದ್ಯಂತ ಜರುಗಲಿದೆ.
ಚುನಾವಣಾ ಪ್ರಚಾರ ಅಭಿಯಾನ: ಈಗಾಗಲೇ ಪ್ರಾರಂಭವಾದ ಚುನಾವಣಾ ಮತದಾನ ಅಭಿಯಾನ ಕಾರ್ಯಕ್ರಮ ಮೇ 3ರ ವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸಲಿರುವ ವಾರ್ತಾ ಇಲಾಖೆಯ ಸಂಚಾರಿ ವಸ್ತು ಪ್ರದರ್ಶನ ವಾಹನ ಪ್ರತಿ ದಿನ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಬೀದಿ ನಾಟಕ (ಎರಡು ಗ್ರಾಮಗಳಲ್ಲಿ) ಹಾಗೂ ಜನಪದ ಗೀತೆಗಳ ಕಾರ್ಯಕ್ರಮ (ಎರಡು ಗ್ರಾಮಗಳಲ್ಲಿ) ಜರುಗುವವು.
ಆಯಾ ಗ್ರಾಮಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ವಯಸ್ಕರ ಶಿಕ್ಷಣ, ಕಣಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಥಾ, ಮತದಾರರ ಮನೆ ಮನೆ ಭೇಟಿಯಂಥ ಕಾರ್ಯಕ್ರಮ ಏರ್ಪಡಿಸಲಾಗಿದೆ. 12 ದಿನಗಳ ಈ ಸಂಚಾರಿ ವಾಹನ ಅಭಿಯಾನದ ಅವಧಿಯಲ್ಲಿ, ಪ್ರತಿ ದಿನ ಪಟ್ಟಣ, ಹೋಬಳಿ ಕೇಂದ್ರ ಮತ್ತು ಗ್ರಾಮ ಸೇರಿದಂತೆ ನಾಲ್ಕು ಕಡೆಗಳಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು. ಕಡಿಮೆ ಮತದಾನವಾದ 48 ಗ್ರಾಮಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ, ಈ ಅಭಿಯಾನ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ. 60ಕ್ಕಿಂತ ಕಡಿಮೆ ಮತದಾನವಾದ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲೂ ಗ್ರಾಮ ಮಟ್ಟದ ತಂಡಗಳ ಮೂಲಕ ಮನೆ ಮನೆ ಭೇಟಿ ಏರ್ಪಡಿಸಲಾಗಿದೆ. ಅಭಿಯಾನದ ಸಂಚಾರಿ ವಸ್ತು ಪ್ರದರ್ಶನ ವಾಹನದಲ್ಲಿ ಕಲಾವಿದ ಪರುಶುರಾಮ ಬಣಕಾರ ನೇತೃತ್ವದ ಜನನಿ ಜಾನಪದ ಕಲಾವೇದಿಕೆಯ 8 ಜನ ಕಲಾವಿದರಿದ್ದು, ಈ ಕಲಾವಿದರು ಅಭಿಯಾನ ಮಾರ್ಗದ ಗ್ರಾಮಗಳಲ್ಲಿ ಬೀದಿನಾಟಕ ಹಾಗೂ ಜಾನಪದ ಗೀತೆ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ತಂಡ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಗ್ರಾಮ ಸಂಚಾರ ಆರಂಭಿಸಿ ಸಂಜೆ 6ಕ್ಕೆ ನಾಲ್ಕು ಪ್ರದರ್ಶನ ನೀಡಿ ಕೊನೆಯ ಗ್ರಾಮದಲ್ಲಿ ವಾಸ್ತವ್ಯ ಮಾಡುವುದು. ಪ್ರತಿದಿನ ಅಭಿಯಾನ ತಂಡ ತಾಲೂಕು ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಹಳ್ಳಿಗಳಿಗೆ ಪ್ರಯಾಣ ಬೆಳೆಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

