ಹಾವೇರಿ

ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕೆಜೆಪಿ ಗೆಲವು: ಉದಾಸಿ ವಿಶ್ವಾಸ

Published On :

ಹಾನಗಲ್: ಬಿಎಸ್ವೈ ಸಿಎಂ ಆಗಿದ್ದ ಸಂದರ್ಭದಲ್ಲಿ ಕೈಗೊಂಡಿರುವ ಜನೋಪಯೋಗಿ ಕಾರ್ಯಕ್ರಮಗಳು ಜನರ ಮನದಲ್ಲಿದ್ದು, ಪಕ್ಷ ಉದಯಿಸಿದ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿದ ನಂತರ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರಲ್ಲಿ ಜಾಗೃತಿ ಮೂಡಿಸಿದ್ದರ ಫಲವಾಗಿಯೇ ರಾಜ್ಯದಲ್ಲಿ ಹೆಚ್ಚಿನ ಬೆಳೆವಿಮೆಯ ಲಾಭ ತಾಲೂಕಿನ ರೈತರಿಗೆ ಲಭಿಸಿದೆ ಎಂದ ಅವರು, ಕೆಜೆಪಿಯತ್ತ ಜನರ ಒಲವು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತ ಸಾಗಿದೆ. ಹಾನಗಲ್ನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸಲು ಪ್ರಸಕ್ತ ಚುನಾವಣೆಯಲ್ಲಿ ಕೆಜೆಪಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಸಮ್ಮಸಗಿ ಗ್ರಾಮದ ಈಶ್ವರ ದಾಳೇರ, ನನ್ನೆಸಾಬ ಮುಲ್ಲಾ, ಪರಶುರಾಮ ಎಸ್. ಜಾಡರ, ಚಂದ್ರಶೇಖರ ಸಣ್ಣಮನಿ, ನಾಗಪ್ಪ ಪೂಜಾರ, ನೀಲಪ್ಪ ಪೂಜಾರ, ಅಜೀಜ ಮುಲ್ಲಾ, ಮಲೀಕ್ ಮಾರನಬೀಡ, ಬಸಪ್ಪ ಸಣ್ಣಮನಿ, ಗುತ್ತೆಪ್ಪ ಪೂಜಾರ, ಮೈಲಾರಪ್ಪ ಚವಟಿ, ರಾಮಣ್ಣ ಪೂಜಾರ, ಸುಭಾಸ ಬಿದರಕೊಪ್ಪ, ಚಂದ್ರಪ್ಪ ಅರಳೇಶ್ವರ, ಕಾಳಪ್ಪ ಗೊಲ್ಲರ ಸೇರಿದಂತೆ ಮತ್ತಿತರರು ಕಾಂಗ್ರೆಸ್ ತೊರೆದು ಕೆಜೆಪಿಗೆ ಸೇರ್ಪಡೆಗೊಂಡರು.
ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ರಾಜಣ್ಣ ಪಟ್ಟಣದ, ಡಿ.ಸಿ. ಪಾಟೀಲ, ಶಂಭಣ್ಣ ವಡ್ಡರ, ಪಿ.ಪಿ. ಪಾಟೀಲ, ರತ್ನವ್ವ ಗುಡ್ಡದಮತ್ತಿಹಳ್ಳಿ, ಶೇಖಪ್ಪ ಈಳಿಗೇರ, ವೀರಭದ್ರಗೌಡ, ನೀಲಪ್ಪ ಪೂಜಾರ, ಚಂದ್ರಶೇಖರ ಸಣ್ಣಮನಿ, ಸಿದ್ಧು ಪಾಟೀಲ, ಭರಮಣ್ಣ ಜಾಡರ, ಪರಮೇಶ ದೊಡ್ಡಮನಿ, ಶಾಂತಣ್ಣ ಕಲ್ಮಠ, ನಾಗರಾಜಗೌಡ ಪಾಟೀಲ, ಶಿವಣ್ಣ ಮಡಿವಾಳರ, ರುದ್ರೇಶ ಸಾವಿಕೇರಿ, ಶಿವಾನಂದ ವಡ್ಡರ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.