ಹಾವೇರಿ

ಗೆಲವು ನಮ್ಮದೆ: ಡಾ. ಸುಮಂಗಲಾ

Published On :

ಶಿಗ್ಗಾಂವಿ: ಎಂಟು ದಿನದಿಂದ ಕ್ಷೇತ್ರವನ್ನು ಸುತ್ತುತ್ತಿದ್ದೇನೆ. ಜನತೆ ಐದು ವರ್ಷದಿಂದ ತಾವು ಅನುಭವಿಸಿದ ನೋವು ಸಂಕಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ನೀವು ನನ್ನನ್ನು ಆಯ್ಕೆ ಮಾಡಿದರೆ ಈ ಎಲ್ಲ ಬವಣೆಗಳನ್ನು ನೀಗಿಸುತ್ತೇನೆ ಎಂದು ಪ್ರಮಾಣ ಮಾಡಿದ್ದೇನೆ. ಜನರೂ ಜೆಡಿಎಸ್‌ಗೆ ಮತ ನೀಡುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಗೆಲವು ನಮ್ಮದೇ ಎಂದು ಡಾ. ಸುಮಂಗಲಾ ಮೈಸೂರು ಹೇಳಿದರು.
ಶಿಗ್ಗಾಂವಿ-ಸವಣೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಸುಮಂಗಲಾ ಸವಣೂರಿನಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿದರು. ಮಹಿಳಾ ಅಭ್ಯರ್ಥಿಯನ್ನು ತಮ್ಮ ಮನೆಯೊಳಕ್ಕೆ ಕರೆದೊಯ್ದು ಗೃಹಿಣಿಯರು ತಮ್ಮ ಕಷ್ಟಗಳನ್ನು ಹೇಳಿಕೊಂಡರು.
ಅದಕ್ಕೆ ಸ್ಪಂದಿಸಿದ ಡಾ. ಸುಮಂಗಲಾ ಈ ನಿಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗುವ ಕಾಲ ಬಂದಿದೆ. ಜೆಡಿಎಸ್ ಬೆಂಬಲಸಿದರೆ ಈ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುತ್ತದೆ ಎಂದರು. ತುಂಬು ಹೃದಯದಿಂದ ನಮ್ಮ ಮತ ಜೆಡಿಎಸ್‌ಗೆ ಎಂದು ಘೋಷಿಸಿದರು.
ಪ್ರಕಾಶ ಬಾರಕೇರ, ರೆಡ್ಡಪ್ಪ ಬಸನಾಳ, ಅಕ್ಕಮ್ಮ ಅರಟಾಳ, ಮೀನಾಕ್ಷಿ ಬೋವಿ, ಈರಣ್ಣ ಬಸನಾಳ, ಬಸಣ್ಣ ಹಂಚಿನಮನಿ, ಮುಂತಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.