ಅಭ್ಯರ್ಥಿಗಳ ಎಲೆಕ್ಷನ್ ವೆಚ್ಚ ಸಲ್ಲಿಸಲು ಸೂಚನೆ
ಹಾವೇರಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಿಯಮ 77(1) ರನ್ವಯ 84-ಹಾವೇರಿ(ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ತಮಗೆ ನೀಡಲಾದ ದಿನಾಂಕಗಳನ್ವಯ ತಮ್ಮ ಚುನಾವಣಾ ವೆಚ್ಚದ ವಿವರವನ್ನು ನಿಗದಿತ ನಮೂನೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಚುನಾವಣಾ ವೆಚ್ಚ ಪರಿಶೀಲಕರಲ್ಲಿ ಸಲ್ಲಿಸಬೇಕೆಂದು ಹಾವೇರಿ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಕೆ. ಚನ್ನಬಸಪ್ಪ ತಿಳಿಸಿದ್ದಾರೆ.
ಮತದಾರರ ನೋಂದಣಿ ಕಾರ್ಯ ಮುಕ್ತಾಯ
ಹಾವೇರಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾರರ ನೋಂದಣಿ ಕಾರ್ಯ ಮುಕ್ತಾಯಗೊಂಡಿದೆ. ಜಿಲ್ಲೆಯಲ್ಲಿ 5,79,542 ಪುರುಷರು, 5,21,428 ಮಹಿಳೆಯರು ಹಾಗೂ ಇತರೆ 39 ಜನ ಸೇರಿ ಒಟ್ಟು 11,01,009 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಪುರುಷ ಹಾಗೂ ಮಹಿಳಾ ಮತದಾರರ ವಿವರ. ಹಾನಗಲ್ಲ ಕ್ಷೇತ್ರ- 92385 ಪುರುಷರು, 81529 ಮಹಿಳೆಯರು ಹಾಗೂ ಇತರೆ ನಾಲ್ಕು ಜನ ಸೇರಿ ಒಟ್ಟು 173918 ಮತದಾರರಿದ್ದಾರೆ. ಶಿಗ್ಗಾಂವಿ ಕ್ಷೇತ್ರ-100172 ಪುರುಷರು, 88157 ಮಹಿಳೆ ಹಾಗೂ ಇತರೆ 4 ಜನ ಸೇರಿ ಒಟ್ಟು 188333 ಮತದಾರರಿದ್ದಾರೆ. ಹಾವೇರಿ ಕ್ಷೇತ್ರ- 104096 ಪುರುಷರು, 94360 ಮಹಿಳೆಯರು ಹಾಗೂ ಇತರೆ 9 ಜನ ಸೇರಿ ಒಟ್ಟು 198456 ಮತದಾರರಿದ್ದಾರೆ. ಬ್ಯಾಡಗಿ ಕ್ಷೇತ್ರ- 94499 ಪುರುಷರು, 85948 ಮಹಿಳೆಯರು ಹಾಗೂ ಇತರೆ 7 ಜನ ಸೇರಿ ಒಟ್ಟು 180454 ಮತದಾರರಿದ್ದಾರೆ. ಹಿರೇಕೆರೂರು ಕ್ಷೇತ್ರ-83990 ಪುರುಷರು, 75116 ಮಹಿಳೆಯರು ಹಾಗೂ ಇತರೆ 4 ಜನ ಸೇರಿ ಒಟ್ಟು 159110 ಮತದಾರರಿದ್ದಾರೆ. ರಾಣಿಬೆನ್ನೂರು ಕ್ಷೇತ್ರದಲ್ಲಿ 104400 ಪುರುಷರು, 96318 ಮಹಿಳೆಯರು ಹಾಗೂ ಇತರೆ 11 ಜನ ಸೇರಿ ಒಟ್ಟು 200729 ಮತದಾರರಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

