ಹಾವೇರಿ

ಬಿಜೆಪಿ ಅಭಿವೃದ್ಧಿಗೆ ಜನಬೆಂಬಲ

Published On :

ಶಿಗ್ಗಾಂವಿ: 50 ವರ್ಷಗಳ ಅಧಿಕಾರವಧಿಯಲ್ಲಿ ಹೇಳಿಕೊಳ್ಳುವ ಕೆಲಸ ನಿರ್ವಹಿಸದ ಕಾಂಗ್ರೆಸ್‌ನವರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಮತ ಕೇಳಲು ಅವರಿಗೆ ಹಕ್ಕಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಯುವಕರು, ಮಹಿಳೆಯರು, ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ಪಾದಯಾತ್ರೆ ಮೂಲಕ ಪುರಸಭೆಯ ವೃತ್ತ, ಹೊಸ ಪೇಟೆ, ಹಳೇ ಪೇಟೆ, ಅಂಬೇಡ್ಕರ್ ನಗರ ಮುಂತಾದ ವಾರ್ಡುಗಳಲ್ಲಿ ಸಂಚರಿಸಿ ಮತ ಯಾಚಿಸಿ ಮಾತನಾಡಿದ ಅವರು, ಕಳೆದ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಜಾತಿ, ಮತ, ಧರ್ಮ ಎನ್ನದೆ ಅಭಿವೃದ್ಧಿ ಆಧಾರದಡಿ ತಮ್ಮನ್ನು ಆರಿಸಿ ಕಳಿಸಿದ್ದೀರಿ. ಅದರಿಂದ ಐದು ವರ್ಷಗಳಲ್ಲಿ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳು, ನೀರಾವರಿ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಮೂರು ಪಟ್ಟಣಗಳಲ್ಲಿ ಬರುವ ಎಲ್ಲ ವಾರ್ಡುಗಳನ್ನು ಸಿ.ಸಿ. ರಸ್ತೆ, ಸಿ.ಸಿ. ಚರಂಡಿ, ಗ್ರಾಮೀಣ ಪ್ರದೇಶಕ್ಕೆ ಹೋಗುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ನಮ್ಮ ಕೆಲಸಗಳು ಮಾತನಾಡಬೇಕು ವಿನಾಕಾರಣ ಟೀಕೆ ಮಾಡುವುದರಿಂದ ಪ್ರಯೋಜನವಿಲ್ಲ. ಕಾಂಗ್ರೆಸ ಅಭ್ಯರ್ಥಿ ಅಧಿಕಾರದಲ್ಲಿದ್ದಾಗ ಯಾವ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಮತ ಕೇಳಲು ಅವರಿಗೆ ಹಕ್ಕಿಲ್ಲ. ಇದೊಂದು ಬಾರಿ ಆಶೀರ್ವದಿಸಿ ತಮಗೆ ತಮ ನೀಡಿ ಆರಿಸಿದರೆ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪಕ್ಷದ ಮುಖಂಡ ಸಣ್ಣಪ್ಪ ಬುಳ್ಳಪ್ಪನ್ನವರ, ತಾಲೂಕಾಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಯಣ್ಣ ಹೆಸರೂರ, ಎಸ್.ಕೆ. ಅಕ್ಕಿ, ಡಾ೤ ಪಿ.ಆರ್. ಪಾಟೀಲ್, ಪುರಸಭೆ ಮಾಜಿ ಸದಸ್ಯ ಬಸೀರಖಾನ್ ಎಳ್ಳುರು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.