ಸುದ್ದಿ ಸಂಕ್ಷೇಪ
ಪೊಲೀಸ್ ವೀಕ್ಷಕರು ಕರ್ತವ್ಯಕ್ಕೆ ಹಾಜರು
ಹಾವೇರಿ: ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಪೊಲೀಸ್ ವೀಕ್ಷಕರಾಗಿ ನೇಮಕವಾಗಿರುವ ಐಪಿಎಸ್ ಅಧಿಕಾರಿ ಪರಮಪಾಲ್ ಸಿಂಗ್ ಸಿಧು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಾವೇರಿ ಪ್ರವಾಸಿ ಮಂದಿರದ ಸರ್ಕಿಟ್ ಹೌಸ್ನಲ್ಲಿ ತಂಗಿರುತ್ತಾರೆ. ಚುನಾವಣಾ ಸಂಬಂಧಿ ಸಮಸ್ಯೆಗಳು ಮತ್ತು ದೂರುಗಳಿದ್ದಲ್ಲಿ ಅವರ ಮೊ. 9448902374ಗೆ ಕರೆ ಮಾಡಬಹುದು ಅಥವಾ ಸಾಯಂಕಾಲ 4.30ರಿಂದ 6.30ರೊಳಗೆ ಅವರನ್ನು ಖುದ್ದಾಗಿ ಭೇಟಿ ಮಾಡಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ ತಿಳಿಸಿದ್ದಾರೆ.
ಟೆನಿಸ್ಬಾಲ್ ಮಿನಿ ಕ್ರಿಕೆಟ್ ಟೂರ್ನಮೆಂಟ್
ಶಿಗ್ಗಾಂವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸಹರಾ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಮುಕ್ತ ಹಾರ್ಡ್ ಟೆನಿಸ್ಬಾಲ್ ಮಿನಿ ಕ್ರಿಕೆಟ್ ಟೂರ್ನಮೆಂಟ್ ಗ್ರಾಮದ ದೊಡ್ಡಕೆರೆಯಲ್ಲಿ ನಡೆಯಲಿದೆ. ಹಿರೇಬೆಂಡಿಗೇರಿಯ ರಾಜಶೇಖಯ್ಯ ಕಂಬಾಳಿಮಠ ಸಾನ್ನಿಧ್ಯ ವಹಿಸುವರು ಮಾಜಿ ಶಾಸಕ ಅಜ್ಜೀಂ ಪೀರ್ ಖಾದ್ರಿ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಫಕ್ಕೀರಪ್ಪ ಸಂಗಣ್ಣನವರ ಅಧ್ಯಕ್ಷತೆ ವಹಿಸುವರು. ತಾಪಂ ಸದಸ್ಯ ತಿಪ್ಪಣ್ಣ ಸಾತಣ್ಣವರ ಜ್ಯೋತಿ ಬೆಳಗಿಸುವರು. ಪ್ರಥಮ ಬಹುಮಾನ 10,001, ದ್ವಿತೀಯ 5,001, ಉತ್ತಮ ತಂಡ 2,501 ಬಹುಮಾನ ಕೊಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ದೂರವಾಣಿ-9739810940, 8884877487, 9742485485, 9886689653 ಸಂಪರ್ಕಿಸಬಹುದು.
ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಮತ ಯಾಚನೆ
ಹಿರೇಕೆರೂರು: ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಸರ್ಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗದಂತೆ ನೋಡಿಕೊಂಡು ಅರ್ಹರಿಗೆ ತಲುಪುವಂತೆ ಆಗಲು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಯು.ಬಿ. ಬಣಕಾರ ಭರವಸೆ ನೀಡಿದರು. ನಾಗರಾಜ ಮಳವಳ್ಳಿ, ಬಸವರಾಜ ಹುಲ್ಲಿನಕೊಪ್ಪ, ಗಣೇಶಪ್ಪ ನಿಂಬಿಗೊಂದಿ, ಕೆ.ಸಿ. ಮುದಿಗೌಡ್ರ, ಕರಬಸಪ್ಪ ಹುಲ್ಲಿನಕೊಪ್ಪ, ಹನುಮಂತಪ್ಪ ಕೆಂಚಣ್ಣನವರ, ಶಂಕ್ರಗೌಡ ಮುದಿಗೌಡ್ರ, ಸಿದ್ದನಗೌಡ ಪಾಟೀಲ, ಶಂಕ್ರಪ್ಪ ಮರಿಗೌಡ್ರ, ಹೂವಪ್ಪ ಮುದಿಗೌಡ್ರ, ಹನುಮಂತಪ್ಪ ಮುಚಡಿ, ಕೃಷ್ಣಪ್ಪ ಹುಲ್ಲತ್ತಿ, ಬಸವರಾಜ ದಂಡಿಗೀಹಳ್ಳಿ, ಲೇಶಪ್ಪ ಮುದಿಗೌಡ್ರ, ಪರಮೇಶ ಯಡಚಿ, ಬೂದೇಶ ಯಡಚಿ, ರಾಮಪ್ಪ ಕಡೇಮನಿ, ಚಂದ್ರಪ್ಪ ಕುರುಬರ, ರಂಗಪ್ಪ ದೊಡ್ಡಮನಿ, ಭೈರಪ್ಪ ಮಡಿವಾಳರ, ತಿರಕಪ್ಪ ಹರಿಜನ, ಗೋವಿಂದಪ್ಪ ದೊಡ್ಡಮನಿ, ಹುಚ್ಚಪ್ಪ ಹರಿಜನ, ಗಣೇಶ ದೊಡ್ಡಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

