ಹಾವೇರಿ

ಸ್ವಾಭಿಮಾನ ಸಂಕೇತದ ಜಾಥಾ ಸಮಾರೋಪ

Published On :

ಹಾನಗಲ್ಲ:  ಸ್ವಾತಂತ್ರ್ಯ ಬಂದು ಆರು ದಶಕ ಗತಿಸಿದರೂ ಇನ್ನೂ ನಮ್ಮ ಹಕ್ಕುಗಳಿಗಾಗಿ ಪ್ರತಿಪಾದಿಸುವಂತಾಗಿರುವುದು ಖೇದದ ಸಂಗತಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ನಾಲ್ಕರ ಕ್ರಾಸ್ ಸಮೀಪದ ಭೂತೇಶ್ವರ ದೇವಸ್ಥಾನದಲ್ಲಿ ಡಾಣ ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಸ್ವಾಭಿಮಾನ ಸಂಕೇತದ 3 ದಿನಗಳ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಂತೆ ದಲಿತ ಸಮುದಾಯದ ಹಕ್ಕುಗಳು ಜಾರಿಗೆ ಬರಲಿಲ್ಲ. ಸಮುದಾಯವೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಸಾಮರ್ಥ್ಯ ವನ್ನು ಹೊಂದಲಿಲ್ಲ. ಮುಂಬರುವ ದಿನಗಳಲ್ಲಿ ಪಕ್ಷಾತೀತವಾಗಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಬಳೆಸುವ ಆವಶ್ಯಕತೆಯಿದೆ ಎಂದರು.  ಶಂಕ್ರಪ್ಪ ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಡ್ಡಪ್ಪ ಕಾಮನಹಳ್ಳಿ, ಬಸವರಾಜ ತಳವಾರ್, ಗುತ್ತೆಪ್ಪ ಮೂಡೂರ್, ಹನುಮಂತಪ್ಪ ಗೋಣಿಬಸಣ್ಣನವರ್, ಅಜ್ಜಯ್ಯ ಸವಣೂರ, ಮಹದೇವಪ್ಪ, ಪುಟ್ಟಣ್ಣನವರ, ರಾಜೂ ನಾಗನೂರ, ಶಿವು ಜೋಗೇರ, ಪರಮೇಶ್ವರ ನಾಯಕ, ಪ್ರಭು ದೊಡ್ಡಕುರುಬರ, ರಾಮಣ್ಣ ಹರಿಜನ ಇನ್ನಿತರರಿದ್ದರು. ಗುತ್ತೆಪ್ಪ ಕುರ್ಲಿ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.