ಸರ್ಕಾರವೇ ಸಮವಸ್ತ್ರ ವಿತರಿಸಲಿ
ಹಿರೇಕೆರೂರು: ಪ್ರಾಥಮಿಕ ಶಾಲಾ ಮಕ್ಕಳಿಗೆ ಸರ್ಕಾರವೇ ಸಮವಸ್ತ್ರ ವಿತರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಕಾರ್ಯಕರ್ತರು ರಟ್ಟಹಳ್ಳಿ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ವಾಭಿಮಾನಿ ಕರವೇ ತಾಲೂಕಾಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ 2013-14ನೇ ಸಾಲಿನಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ಮಗುವಿಗೆ ರು. 200 ದರದಲ್ಲಿ ಬಟ್ಟೆ ಖರೀದಿಸಿ ಹೊಲಿಸಿ ಕೊಡುವಂತೆ ಎಸ್ಡಿಎಂಸಿ ಸದಸ್ಯರಿಗೂ ಹಾಗೂ ಮುಖ್ಯ ಶಿಕ್ಷಕರಿಗೆ ಸೂಚಿಸಿ ಆದೇಶ ಹೊರಡಿಸಿರುವುದು ಅವೈಜ್ಞಾನಿಕ. ಸರ್ಕಾರ ನೀಡುತ್ತಿರುವ ಹಣ ಪ್ರತಿ ಮಗುವಿಗೆ ಸಮವಸ್ತ್ರ ಖರೀದಿಸಲೂ ಸಾಲದು. ಮಗುವಿಗೆ ಬಟ್ಟೆ ಖರೀದಿಸಿ, ಹೊಲಿಸುವುದು ಹೇಗೆ ಸಾಧ್ಯ? ಈ ಹಿಂದೆ ಸರ್ಕಾರವೇ ಪ್ರತಿಯೊಂದು ಮಗುವಿಗೆ ಸಮವಸ್ತ್ರ ವಿತರಿಸಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿತ್ತು. ಬಟ್ಟೆ ಖರೀದಿಸುವುದು ಮತ್ತು ಹೊಲಿಸುವುದು ಶಿಕ್ಷಕರಿಗೆ ಅಸಾಧ್ಯವಾದ ಮಾತು. ಸರ್ಕಾರ ಮೊದಲಿನಂತೆಯೇ ಸಕಾಲಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ಹೊಲಿಸಿ ಕೊಡುವ ಮೂಲಕ ಶಿಕ್ಷಕರು ಪಾಠ ಬೋಧನೆ ಮಾಡಲು ಅವಕಾಶ ಮಾಡಿಕೊಡಬೇಕು. ಶಿಕ್ಷಕರು ಮುಕ್ತವಾಗಿ ಶಾಲಾ ಪಠ್ಯವಿಷಯದಲ್ಲಿ ತಲ್ಲೀನರಾಗಲು ಸಾದ್ಯವಾಗುತ್ತದೆ ಎಂದರು.
ಈ ಕುರಿತ ಮನವಿಯನ್ನು ಉಪತಹಸೀಲ್ದಾರ್ ಎ.ವಿ. ಶಿಗ್ಗಾವಿ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಸ್ವಾಭಿಮಾನಿ ಕರವೇ ಉಪಾಧ್ಯಕ್ಷ ಶಂಕ್ರಪ್ಪ, ಕಾರ್ಯದರ್ಶಿ ಬಸವರಾಜ ಎ.ಬಿ., ಕಾರ್ಯಕರ್ತರಾದ ರವಿ ಹದಡಿ, ಶಂಕ್ರಪ್ಪ ಚಲುವಾದಿ, ನಾಗರಾಜ ಗಾಮವೇ, ಬಸವರಾಜ ಕಟ್ಟಿಮನಿ, ಮರುಡೆಪ್ಪ ಉಪ್ಪಾರ, ಉಮೇಶ ಸಾಳುಂಕೆ, ಸುರೇಶ, ಲಿಂಗರಾಜ ಚಿ., ಪರಶುರಾಮ, ಸಿದ್ದು ಎಲ್., ನಾಗರಾಜ ಪಿ., ಹನುಮಂತಪ್ಪ ಎಸ್. ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

