ಬೆಳೆವಿಮೆ ಬಿಡುಗಡೆ ಮಾಡಿ: ಕೃಷಿ ಸಚಿವರಿಗೆ ಬಸವರಾಜ ಬೊಮ್ಮಾಯಿ ಪತ್ರ
ಶಿಗ್ಗಾಂವಿ: ಕಳೆದ ವರ್ಷ (2012)ದ ಹಾವೇರಿ ಜಿಲ್ಲೆ ರೈತರ ಬೆಳೆ ವಿಮೆ ಮೌಲ್ಯಮಾಪನ ಮಂಜೂರಾತಿ ದೊರೆತಿದೆ. ವಿಮಾ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಶಾಸಕ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಶನಿವಾರ ಈ ಕುರಿತು ಹೇಳಿಕೆ ನೀಡಿದ ಬೊಮ್ಮಾಯಿ, ಜಿಲ್ಲೆಯ 1,05,019 ರೈತರು 1,71,630 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಉದ್ದು, ಹೆಸರು, ಶೇಂಗಾ, ಮೆಕ್ಕೆಜೋಳ, ಬತ್ತ, ಸೂರ್ಯಕಾಂತಿ, ಸೋಯಾಬಿನ್ ಇತ್ಯಾದಿ ಬೆಳೆಗಳಿಗೆ ವಿಮೆ ಕಂತಾಗಿ ರು. 7.25 ಲಕ್ಷ ಪಾವತಿಸಿದ್ದಾರೆ. ತಿಂಗಳ ಹಿಂದೆ ವಿಮೆ ಮೌಲ್ಯಮಾಪನ ಮಂಜೂರಾತಿ ದೊರೆತಿದ್ದರೂ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಬೆಳೆ ಹಾನಿಗೊಳಗಾದ ಶಿಗ್ಗಾಂವಿ-ಸವಣೂರು ತಾಲೂಕಿನ ರೈತರಿಗೆ ರು. 14.88 ಲಕ್ಷ ಪರಿಹಾರ ಬಿಡುಗಡೆ ಆಗಬೇಕಿದೆ. ಆದರೆ, ನಿರ್ಲಕ್ಷ್ಯದಿಂದ ರಾಜ್ಯದ ವಿಮೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಮಂಜೂರಾತಿಗೆ ಕಳುಹಿಸಿಲ್ಲ. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತನ್ನ ಪಾಲಿನ ಶೇ. 50ರಷ್ಟು ವಿಮೆ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸತತ ಎರಡು ವರ್ಷದಿಂದ ಬಿತ್ತನೆ ಮಾಡಿ, ಬೆಳೆ ಬಾರದೇ ಸಂಕಷ್ಟದಲ್ಲಿರುವ ಹಾವೇರಿ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷದ ಮುಂಗಾರು ತೀಕ್ಷ್ಣವಾಗಿದೆ. ಇಷ್ಟರಲ್ಲೇ ವಿಮೆ ಹಣ ಬಿಡುಗಡೆ ಮಾಡಿದ್ದಲ್ಲಿ ಬೀಜ-ರಸಗೊಬ್ಬರ ಖರೀದಿಗೆ ಉಪಯೋಗವಾಗುತ್ತಿತ್ತು ಎಂದು ಕೃಷಿ ಸಚಿವರಿಗೆ ಬರೆದ ಪತ್ರದಲ್ಲಿ ಶಾಸಕ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಈಗಲಾದರೂ ಕ್ರಮ ಕೈಗೊಂಡು ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ರೈತರಿಗೆ ವಿಮೆ ಮೊತ್ತ ಬಿಡುಗಡೆಗೊಳಿಸಬೇಕು ಮತ್ತು ಈ ಕುರಿತು ತಮಗೆ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

