ನಾಳೆ ಸುರೇಶಗೌಡ ಅಭಿಮಾನಿಗಳ ಸಭೆ
ಬ್ಯಾಡಗಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಅಭಿಮಾನಿಗಳ ಸಭೆಯನ್ನು ಎಪಿಎಂಸಿ ಯಾರ್ಡ್ನಲ್ಲಿರುವ ಅವರ ಅಂಗಡಿಯಲ್ಲಿ ಆ. 8ರಂದು ಸಂಜೆ 4 ಗಂಟೆಗೆ ಕರೆಯಲಾಗಿದೆ. ಮಾಜಿ ಶಾಸಕ ಸುರೇಶಗೌಡ ಅಧ್ಯಕ್ಷತೆ ವಹಿಸಲಿದ್ದು, ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಪಕ್ಷಭೇದ ಮರೆತು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸುರೇಶ್ ಅಸಾದಿ ಹಾಗೂ ಮಲ್ಲೇಶ್ ಬಣಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಧರ್ಮಾ ಜಲಾಶಯಕ್ಕೆ ಬಾಗಿನ
ಹಾವೇರಿ: ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿರುವ ಧರ್ಮಾ ಜಲಾಶಯಕ್ಕೆ ಹಾನಗಲ್ ಶಾಸಕ ಮನೋಹರ ತಹಸೀಲ್ದಾರ್ ಆ. 7ರಂದು ಬೆಳಗ್ಗೆ 11 ಗಂಟೆಗೆ ಬಾಗಿನ ಸಲ್ಲಿಸಲಿದ್ದಾರೆ. ಮುಂಡಗೋಡ-ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಎಂ. ಹೆಬ್ಬಾರ್ ಉಪಸ್ಥಿತರಿರುವರು ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಶಿವಯೋಗಿ ಎಚ್. ಹಿರೇಮಠ ಹಾಗೂ ವಕ್ತಾರ ಕೆ.ಎಲ್. ದೇಶಪಾಂಡೆ ತಿಳಿಸಿದ್ದಾರೆ.
ಮಳೆ ಇಳಿಮುಖ
ಹಾವೇರಿ: ಜಿಲ್ಲಾದ್ಯಂತ ಮಳೆ ಮತ್ತಷ್ಟು ಇಳಿಮುಖವಾಗಿದೆ. ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ ಹಾಗೂ ಸವಣೂರು ತಾಲೂಕುಗಳಲ್ಲಿ ಮಂಗಳವಾರ ಮಳೆ ದಾಖಲಾಗಿಲ್ಲ. ಹಿರೇಕೆರೂರಲ್ಲಿ 4.2 ಮಿ.ಮೀ. ಹಾಗೂ ಹಾನಗಲ್ನಲ್ಲಿ 3.2 ಮಿ.ಮೀ. ಮಳೆಯಾಗಿದೆ. ನದಿಗಳ ಪ್ರವಾಹವೂ ತಗ್ಗಿದೆ. ಮಳೆ ಕಡಿಮೆಯಾಗಿದ್ದರಿಂದ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗೂ ಚಾಲನೆ ಸಿಕ್ಕಿದೆ.
ನೌಕರರ ಸಂಘದ ಅಧ್ಯಕ್ಷರಿಗೆ ಅಭಿನಂದನೆ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಾಲೂಕಿನ ರೆಡ್ಡಿಯಲ್ಲಾಪುರ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಹ ಶಿಕ್ಷಕ, ತಾಲೂಕು ಲೋಕ ಶಿಕ್ಷಣ ಸಮಿತಿಯ ಸಂಯೋಜಕ ಆರ್.ಡಿ. ಹೊಂಬರಡಿ ಅವರನ್ನು ತಾಲೂಕಿನ 35 ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಕ್ಷರ ಕಾರ್ಯಕರ್ತರು ಅಂಭಿನಂದಿಸಿದ್ದಾರೆ. ತಾಲೂಕು ಸಾಕ್ಷರ ಸಮಿತಿಯ ಪಂಚಾಯತ್ ಸಂಯೋಜಕರಾದ ಎಚ್.ಎಲ್. ಸಾರಥಿ, ದಿಳ್ಳೆಪ್ಪ ಬಾರ್ಕಿ, ನಾಗನಗೌಡ ಪಾಟೀಲ, ಕೀರ್ತಿಕುಮಾರ ಕರಿಯಲ್ಲಪ್ಪನವರ, ಭಾರತಿ ಸೂರ್ವೆ, ಪರಶುರಾಮ ಬಣಕಾರ, ಚನ್ನಗೌಡ ವೀರಬಸಪ್ಪನವರ, ಬಸವರಾಜ ಕೊಳಜಿ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಮತ ಎಣಿಕೆ
ಹಾವೇರಿ: ಜಿಲ್ಲೆಯ ತೆರವಾದ ವಿವಿಧ ಗ್ರಾಪಂಗಳ ಸದಸ್ಯ ಸ್ಥಾನಗಳಿಗೆ ಆಗಸ್ಟ್ 4ರಂದು ಮತದಾನ ನಡೆದಿತ್ತು. ಶೇ. 75ರಷ್ಟು ಮತದಾನ ದಾಖಲಾಗಿತ್ತು. ಹಾವೇರಿ ತಾಲೂಕಿನ ದೇವಿಹೊಸೂರ, ಕರ್ಜಗಿ, ಬಸಾಪುರ, ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ, ಹಿರೇಕೆರೂರು ತಾಲೂಕಿನ ಹಳ್ಳೂರ, ಶಿಗ್ಗಾಂವಿ ತಾಲೂಕು ತಡಸ, ಹಿರೇಮಲ್ಲೂರು, ಹಾನಗಲ್ಲ ತಾಲೂಕಿನ ಹುಲ್ಲತ್ತಿ, ಕೆಲವರಕೊಪ್ಪ ಹಾಗೂ ಹಿರೇಹುಲ್ಲಾಳ ಗ್ರಾಮ ಪಂಚಾಯಿತಿಗಳ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ಜರುಗಿದೆ. ಈ ಚುನಾವಣೆಯ ಮತ ಎಣಿಗೆ ಆಯಾ ತಾಲೂಕು ಕೇಂದ್ರ ಸ್ಥಳಗಳಲ್ಲಿ ಆ. 7ರಂದು ಮುಂಜಾನೆ 8ರಿಂದ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಕೆಜೋಳ, ಹತ್ತಿಗೆ ರೋಗಬಾಧೆ: ಸಲಹೆ
ಹಿರೇಕೆರೂರು: ತಾಲೂಕಿನ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಹಲವು ರೈತರ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳಿಗೆ ತಗುಲಿರುವ ರೋಗಬಾಧೆ ತಡೆಗಟ್ಟಲು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಹತ್ತಿ ಹಾಗೂ ಮೆಕ್ಕಜೋಳದ ಹೊಲಗಳಲ್ಲಿ ಅಲ್ಲಲ್ಲಿ ನೀರು ನಿಂತಿದ್ದು, ಬಸಿ ಕಾಲುವೆ ಮಾಡುವ ಮೂಲಕ ನೀರು ಹರಿದು ಹೋಗುವಂತೆ ಮಾಡಿ ಜೌಗನ್ನು ತಡೆಗಟ್ಟಬೇಕು. ಮೆಕ್ಕಜೋಳ ಬೆಳೆಯಲ್ಲಿ ಕಾಂಡ ಕೊರೆಯುವ ಹುಳದ ಬಾಧೆ ಕಂಡು ಬಂದಿದ್ದು, ಹತೋಟಿಗೆ ಎಕರೆಗೆ 3 ಕೆಜಿಯಂತೆ ಪೋರಡಾನ್ ಹರಳನ್ನು ಮರಳಿನೊಂದಿಗೆ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಹಾಕಬೇಕು. ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಬಾಧೆಯಿಂದ ಎಲೆಗಳು ಮರುಟಿದಂತಾಗಿ ಒಣಗುವ ಹಂತ ತಲುಪಿವೆ. ಇದರ ಹತೋಟಿಗಾಗಿ 0.25 ಮಿ.ಲೀ. ಇಮಿಡಾಕ್ಲೋಪ್ರೀಡ್ 17.8 ಎಸ್.ಎಲ್.ನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ, ರೋಗಗಳನ್ನು ಹತೋಟಿಗೆ ತರಬೇಕು. ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಜಿಂಕ್ ಸಲ್ಪೇಟ್, ಜಿಪ್ಸಂ ಮತ್ತು ಬೋರಾನ್ ಮೊದಲಾದವುಗಳು ಪ್ರತಿಶತ 50ರ ಸಹಾಯಧನದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ
ಹಿರೇಕೆರೂರು: ತಾಲೂಕಿನ ಹಂಸಬಾವಿ ಗ್ರಾಮದ ಮಹಾಂತ ಸ್ವಾಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 10ನೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಆರ್.ಪಿ. ತ್ರಿಪಾಠಿ ಅವರ ನೇತೃತ್ವದಲ್ಲಿ ವಿಪತ್ತುಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಿತು. ಮಹಾಂತ ಸ್ವಾಮಿ ಕಾಲೇಜಿನ ಎನ್.ಡಿ.ಆರ್.ಎಫ್. ಹಾಗೂ ಎನ್ಸಿಸಿ ಘಟಕಗಳ ಆಶ್ರಯದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಪ್ರವಾಹ, ಭೂಕಂಪ, ಅಗ್ನಿ ದುರಂತ, ಅಪಘಾತ, ರಾಸಾಯನಿಕ, ಅಣುಶಕ್ತಿ ಹಾಗೂ ಜೈವಿಕ ಅವಘಡಗಳ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್. ಯತ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ್ ಸಿ.ಎಸ್. ಹಳ್ಳಳ್ಳಿ, ಡಾ. ಸಂದೀಪ, ಕಂದಾಯ ನಿರೀಕ್ಷಕ ಕೆ.ಜಿ. ಮಠದ, ಎ.ಎಂ. ಕಾಗಿನೆಲ್ಲಿ, ವೈ.ಕೆ. ವಿರೂಪಾಕ್ಷಯ್ಯ, ಡಾ. ಎಂ.ಎಂ. ಅಕ್ಕಿ, ಡಾ. ಎಸ್.ಎಸ್. ಮಠಪತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

