ಪತ್ತಿನ ಸಂಘಗಳಿಂದ ಬಡವರು, ಕಾರ್ಮಿಕರಿಗೆ ಸಹಾಯ: ಪ್ರೇಮಾ ಪಾಟೀಲ್
ಶಿಗ್ಗಾಂವಿ: ಸೌಹಾರ್ದ ಸಂಸ್ಥೆಗಳು ಬಡವರಿಗೆ, ಕೂಲಿಕಾರ್ಮಿಕರಿಗೆ ಬಹಳಷ್ಟು ಸಹಾಯಕವಾಗಿವೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ್ ಹೇಳಿದರು. ಹೊಸಪೇಟೆ ಓಣಿಯಲ್ಲಿ ಹಾವೇರಿಯವರ ಕಟ್ಟಡದಲ್ಲಿ ನಡೆದ ಜನಶ್ರೀ ಪತ್ತಿನ ಸೌಹಾರ್ದ ಸಹಕಾರಿ ಹಾಗೂ ಜನಶ್ರೀ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಅವರು, ಸಣ್ಣ ವ್ಯಾಪಾರಸ್ಥರಿಗೆ ಈ ಸಂಘ-ಸಂಸ್ಥೆಗಳು ಅನುಕೂಲಕರವಾಗಿವೆ. ಒಂದು ವರ್ಷದ ಅವಧಿಯಲ್ಲಿ 600 ಸದಸ್ಯರನ್ನು ಹೊಂದಿ, ಸುಮಾರು ರು. 1 ಕೋಟಿ ವಹಿವಾಟು ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು. ವಿರಕ್ತಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಸಂಸ್ಥೆಗಳು ಪ್ರಾರಂಭ ಹಂತ ಉತ್ತಮ ನಿರ್ವಹಣೆ ಇರಬೇಕು. ಈ ಸಂಸ್ಥೆ ಉತ್ತಮ ಬೆಳವಣಿಗೆ ಹೊಂದುತ್ತಿದ್ದು, ಮುಂದಿನ ಬೆಳವಣಿಗೆಯಲ್ಲಿ ಒಳ್ಳೆಯ ಪ್ರಗತಿ ಕಾಣಲೆಂದು ಆಶೀರ್ವದಿಸಿದರು. ಸಂಗನಬಸವ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕ, ವ್ಯವಸ್ಥಾಪಕ ಆರ್.ಎಫ್. ಸ್ಥಾವರ ವರದಿ ಒಪ್ಪಿಸಿದರು. ಸತ್ಯಸಾಯಿ ಛಾಯಾಗ್ರಾಹಕ ಸಂಘದ ಅಧ್ಯಕ್ಷ ರಂಗನಾಥ ಗಾಯಕವಾಡ, ಮಾಜಿ ಅಧ್ಯಕ್ಷ ಉದಯ ಹೊಸಮನಿ, ಹುಸೇನಸಾಬ ನದಾಫ, ರೇಖಾ ನವಲಗುಂದ, ಎಸ್.ಬಿ. ಹಿರೇಮಠ, ಆಡಿನ, ಎಸ್.ಎಫ್. ಕುಂಬಾರಗೇರಿಮಠ, ಚೇತನ ಕುರ್ಸಾಪುರ, ಎ.ವಿ. ಪಾಟೀಲ್ ಇದ್ದರು. ಪ್ರಮೋದ ಆಡಿನ ಸ್ವಾಗತಿಸಿದರು. ಆನಂದ ಪಾಟೀಲ ವಂದಿಸಿದರು. ಗಜಾನನ ಗಂಜಿಗಟ್ಟಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

