ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬೆಳೆಸಿ: ಕಠಾರೆ
ಹಿರೇಕೆರೂರು: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಮಕ್ಕಳಿಗೆ ಶಾಲಾ-ಕಾಲೇಜು ದಿನಗಳಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆ ಬೆಳೆದು ಬರಲು ಶಾಲಾ ಸಂಸತ್ ಚುನಾವಣೆಗಳು ಪೂರಕವಾಗಿವೆ ಎಂದು ರಟ್ಟಿಹಳ್ಳಿ ಶ್ರೀ ಕುಮಾರೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಸಿ. ಕಠಾರೆ ತಿಳಿಸಿದರು. ಕುಡುಪಲಿ ಗ್ರಾಮದ ಜಿ.ಬಿ. ಶಂಕರರಾವ್ ಪದವಿಪೂರ್ವ ಕಾಲೇಜಿನ 2013-14ನೇ ಸಾಲಿನ ಕಾಲೇಜು ಸಂಸತ್ ಉದ್ಘಾಟಿಸಿ, ಜಗಜ್ಯೋತಿ ಬಸವೇಶ್ವರರ ವಚನಗಳು ಮಾನವನ ಬದುಕಿಗೆ ಪೂರಕವಾಗಿವೆ. ನುಡಿದಂತೆ ನಡೆಯಬೇಕು. ಕಾಯಕವೇ ಕೈಲಾಸ ಎಂಬುದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಹಾಗೂ ದೇಶದ ಮಹಾಪುರುಷರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಉಪನ್ಯಾಸಕ ಎಸ್.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಪ್ರಥಮ ಪಿಯು ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಎರಡು ವರ್ಷಗಳ ಕಾಲ ಕಲಿಯುವ ಪಿಯುಸಿ ಹಂತದ ಮಹತ್ವ ಹಾಗೂ ಕಲಿಕೆಯ ವಿಧಾನಗಳನ್ನು ವಿವರಿಸಿದರು. ಸಂಪ್ರದಾಯದಂತೆ ಪ್ರಥಮ ಪಿಯು ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಪ್ರಾಚಾರ್ಯ ಸಿ.ಆರ್. ಮುದಿಗೌಡ್ರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಸಿ.ಬಿ. ಕುಪ್ಪೇಲೂರ, ಎಸ್.ಕೆ. ಕರೇಗೌಡರ, ಎಚ್.ಎಂ. ಕುಪ್ಪೇಲೂರ, ಬಿ.ಎಸ್. ತೋಟಗೇರ, ವಿ.ಸಿ. ಪಾಟೀಲ, ಆರ್.ಎಸ್. ಹೊಸಗೌಡ್ರ, ಎನ್.ಎಫ್. ಜಾಡರ, ವನಿತಾ ಹೆಗಡೆ ಇದ್ದರು. ಪಿ.ಎಸ್. ಮರಾಠಾ ಸ್ವಾಗತಿಸಿದರು. ಎಸ್.ಎಂ. ಗುಡದಳ್ಳಿ ವಂದಿಸಿದರು, ರೇಷ್ಮಾ ದೊಡ್ಮನಿ ನಿರೂಪಿಸಿದರು.
ಜನಪ್ರತಿನಿಧಿಗಳ ಧ್ವನಿಆಗುವೆ: ಪ್ರದೀಪ
ಗದಗ: ಅಭಿವೃದ್ಧಿ ದೃಷ್ಟಿಯಿಂದಾಗಿ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಹೇಳಿದರು. ಭಾನುವಾರ ಲಕ್ಕುಂಡಿ ಗ್ರಾಮದ ಮಹೇಶ ಮುಸ್ಕಿನಬಾವಿ ಅವರ ಮನೆಯಲ್ಲಿ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮತಯಾಚನಾ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ತಂದ ಹಲವಾರು ಜನಪ್ರಿಯ ಯೋಜನೆಗಳಿಗೆ ಕಾಂಗ್ರೆಸ್ ತಡೆ ಹಾಕಿ ಸೇಡಿನ ರಾಜಕೀಯ ಮಾಡುತ್ತಿದೆ. ಬಿಜೆಪಿ ಸರ್ಕಾರದ ಹಲವು ಯೋಜನೆಗಳು ಜನಪ್ರಿಯವಾಗಿರುವುದು ನಮಗೆ ಶ್ರೀರಕ್ಷೆ. ಈ ಭಾಗದ ಜನಪ್ರತಿನಿಧಿಗಳು ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಮಾಜಿ ಅಧ್ಯಕ್ಷೆ ಚಂಬವ್ವ ಪಾಟೀಲ, ವಸಂತ ಮೇಟಿ, ಶಾಂತಪ್ಪ ಕಳಕೇರಿ, ಉಮೇಶಗೌಡ ಪಾಟೀಲ, ವಿ.ಎಸ್. ಪಾಟೀಲ, ಪ್ರಹ್ಲಾದ ಹೊಸಳ್ಳಿ ಮಾತನಾಡಿದರು. ಮಹಾದೇವಪ್ಪ ಚಿಂಚಲಿ, ಚಂದ್ರು ದಂಡಿನ, ಬಿ.ಬಿ. ಐನಾಪೂರ, ಪ್ರದೀಪ ನವಲಗುಂದ, ಸಿದ್ದು ಬಂಡಿವಾಡ, ಗಂಗವ್ವ ಶೆಟ್ಟರ, ನಾಗಮ್ಮ ಹುಡೇದ, ಪ್ರಕಾಶ ಸೂರಣಗಿ, ಕೆಂಚಪ್ಪ ನಾಯ್ಕರ, ಅರವಿಂದ ಹುಲ್ಲೂರ, ಶ್ರೀನಿವಾಸ ಹುಬ್ಬಳ್ಳಿ, ಎಚ್.ಬಿ. ಅಳವಂಡಿ ಮತ್ತಿತರರು ಭಾಗವಹಿಸಿದ್ದರು. ಅಂದಪ್ಪ ತಿಮ್ಮಾಪೂರ ಸ್ವಾಗತಿಸಿ, ನಿರೂಪಿಸಿದರು. ಮರಿಪ್ಪ ವಡ್ಡರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

