ಹಾವೇರಿ

ನಾಳೆ ಶಿವಲಿಂಗೇಶ್ವರ ಕಂಪ್ಯೂಟರ್ಸ್ ಬ್ಯಾಡಗಿ ಶಾಖೆ ಉದ್ಘಾಟನೆ

Published On :

ಹಾವೇರಿ: ನಗರದಲ್ಲಿ 1998ರಲ್ಲಿ ಆರಂಭವಾಗಿರುವ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್ಸ್‌ನ ಬ್ಯಾಡಗಿ ಶಾಖೆಯ ಪ್ರಾರಂಭೋತ್ಸವ ಆ. 15ರಂದು ನಡೆಯಲಿದೆ.
ಎಂ.ಜಿ. ರಸ್ತೆಯ ಹುಕ್ಕೇರಿಮಠ ಕಾಂಪ್ಲೆಕ್ಸ್‌ನಲ್ಲಿ ಶಾಖೆ ಹೊಂದಿರುವ ಶಿವಲಿಂಗೇಶ್ವರ ಕಂಪ್ಯೂಟರ್ಸ್ 2007ರಿಂದ ಎಸ್‌ಬಿಎಂ ಶಾಖೆ ಬಳಿ ಒಂದು ಕಚೇರಿಯನ್ನು ಹಾಗೂ 2011ರಿಂದ ಹಾನಗಲ್‌ನ ಎಂ.ಜಿ. ವೃತ್ತದಲ್ಲಿರುವ ಗೋಕಾವಿ ಕಟ್ಟಡದಲ್ಲಿ ಶಾಖೆ ನಡೆಸುತ್ತಿದೆ.
ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಹಾಗೂ ವಿಕಲಾಂಗರಿಗೆ ರಿಯಾಯಿತಿ ದರದಲ್ಲಿ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಪಿಡಿಒಗಳಿಗೆ ಕೆಎಫ್‌ಸಿಎಸ್‌ಸಿ ಸಿಬ್ಬಂದಿಗೆ ತರಬೇತಿ ನಿರ್ವಹಿಸಲಾಗಿದೆ. ಈ ವರ್ಷ ಸಂಸ್ಥೆ ಎಸ್‌ಎಸ್‌ಒ ಮತ್ತು ಬಿಪಿಒ ಸೇವೆ ಆರಂಭಿಸುತ್ತಿದೆ. ಸಂಸ್ಥೆಯಲ್ಲಿ 30 ತರಬೇತಿದಾರರು ಹಾಗೂ 10 ಮಂದಿ ಹಾರ್ಡ್‌ವೇರ್ ತಜ್ಞರು ಸೇರಿ 40 ಸಿಬ್ಬಂದಿ ಇದ್ದಾರೆ. ಈವರೆಗೆ 1000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಈ ಸಾಧನೆಗಾಗಿ ಅಂತಾರಾಷ್ಟ್ರೀಯ ವೀರಶೈವ ಪ್ರತಿಷ್ಠಾನದ 10ನೇ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವೃತ್ತಿಶ್ಚೈತನ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈಗ 15ನೇ ವಾರ್ಷಿಕೋತ್ಸವದ ಅಂಗವಾಗಿ ಆ. 31ರೊಳಗೆ ಯಾವುದೇ ಕೋರ್ಸ್‌ಗೆ ಪ್ರವೇಶ ಪಡೆದಲ್ಲಿ ಶೇ. 15 ರಿಯಾಯಿತಿ, ಶೇ. 10 ನಗದು ರಿಯಾಯಿತಿ ಹಾಗೂ ಶೋರೂಮ್‌ನಲ್ಲಿ ಯಾವುದೇ ವಸ್ತು ಖರೀದಿಸಿದಲ್ಲಿ ಗರಿಷ್ಠ ಶೇ. 15 ರಿಯಾಯಿತಿ ನೀಡಲಾಗುವುದು. ಒಂದು ವರ್ಷದ ಕೋರ್ಸ್ ತೆಗೆದುಕೊಂಡವರಿಗೆ ಶೇ. 25 ರಿಯಾಯಿತಿ ಘೋಷಿಸಲಾಗಿದೆ.
ನಾಳೆ ಶಾಖೆ ಉದ್ಘಾಟನೆ
ಆ. 15ರಂದು ಬೆಳಗ್ಗೆ 11 ಗಂಟೆಗೆ ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಗಣಪತಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ಪೂಜೆ ನೆರವೇರಿಸಲಾಗುತ್ತದೆ. ಲೆನೆವೋ ಶೋರೂಮನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ, ಬ್ಯಾಡಗಿ ಶಾಖೆಯನ್ನು ಹಾವೇರಿ ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ, ಬಿಪಿಒ ಕೇಂದ್ರವನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಉದ್ಘಾಟಿಸುವರು. ಹಾವೇರಿಯ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ೤ ಕೆ.ಬಿ. ಪ್ರಕಾಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.