ಸ್ವಚ್ಛತೆ ಸಂಸ್ಕೃತಿ ಬೆಳೆಸಿಕೊಳ್ಳಿ: ರಾಜಕುಮಾರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಆ. 15
ಸ್ವಚ್ಛತೆಯ ಸಂಸ್ಕೃತಿ ಮತ್ತು ನಾಗರಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಿ, ಉತ್ತಮ ಆರೋಗ್ಯ ಗಳಿಕೆಗೆ ಮುಂದಾಗಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್. ರಾಜಕುಮಾರ ಕರೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನವನ್ನು ಡಬ್ಬಿಗಳಿಗೆ ಕಸ ಹಾಕುವ ಮೂಲಕ ಉದ್ಘಾಟಿಸಿದ ಅವರು, ನಮ್ಮ ಮನೆ ಹಾಗೂ ಬೀದಿಗಳಲ್ಲಿರುವ ಕಸವನ್ನೂ ಸರ್ಕಾರವೇ ಸ್ವಚ್ಛ ಮಾಡುವುದು ಅಸಾಧ್ಯ. ಕಸದ ಡಬ್ಬಗಳಲ್ಲೇ ಕಸ ಹಾಕಬೇಕು. ನಮ್ಮ ಪರಿಸರದ ಸ್ವಚ್ಛತೆ ಕಾಪಾಡಬೇಕು. ಇದರಿಂದಲೇ ನಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದರು.
ಯೋಜನಾಧಿಕಾರಿ ಕೃಷ್ಣಪ್ಪ ಕುಲಾಲ ಮಾತನಾಡಿ, ಈ ದೇಶ ನಮ್ಮದು ಎಂಬ ಆತ್ಮಭಿಮಾನ ಜಾಗೃತವಾದಾಗ ಸುಂದರ ದೇಶದ ಕನಸು ಕಾಣಲು ಸಾಧ್ಯ. ಸ್ವಚ್ಛ-ಸುಂದರ ಪರಿಸರದ ದೀಕ್ಷೆಯನ್ನು ಈ ಕ್ಷಣದಿಂದಲೇ ವಹಿಸಿಕೊಳ್ಳೋಣ ಎಂದರು.
ಯೋಜನೆಯ ಮೇಲ್ವಿಚಾಲಕ ಉಮೇಶ, ಜೆ.ಸಿ. ದುರ್ಗಾ ಹಿರೇಕೆರೂರು ಅಧ್ಯಕ್ಷ ಶ್ರೀಧರ ನಾಯ್ಕ, ನಿಕಟಪೂರ್ವ ಅಧ್ಯಕ್ಷ ಎಂ.ಬಿ. ಅರಳಿ, ಬಿ.ಎಚ್. ನಾಯ್ಕ, ಎಸ್.ಆರ್. ಆಂಗಡಿ, ಬಸವರಾಜ ಪೂಜಾರ, ರೇಖಾ ನಿಂಗನಗೌಡ್ರ, ಜಯಶೀಲಾ ಆನ್ವೇರಿ, ಲಕ್ಷ್ಮಿ ವಿ.ಎಂ., ಗಿರಿಜಾ ಉಮಾಶಂಕರ, ಮಂಜುಳಾ ಶಿದ್ದನಗೌಡ್ರ, ರೇಖಾ ತೆರೆದಹಳ್ಳಿ ಹಾಗೂ ಜೆಸಿಐ ದುರ್ಗಾ ಹಿರೇಕೆರೂರು, ಆಟೋ ಮಾಲೀಕರ-ಚಾಲಕರ ಸಂಘ, ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ನಿವೃತ್ತ ನೌಕರರ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್, ವಕೀಲರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

