ಹಾವೇರಿ

ರೈತರ ಸಂಕಷ್ಟ ಪರಿಹರಿಸಲು ಮನವಿ

Published On :

ಹಿರೇಕೆರೂರು: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ನಾಲ್ಕು ವರ್ಷಗಳಿಂದ ರೈತರು ಬರಗಾಲ ಅನುಭವಿಸುತ್ತಿದ್ದಾರೆ. ಈ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿದೆ. ಆಮೇಲೂ ಸತತವಾಗಿ ಮಳೆಯಾಗಿ ಹತ್ತಿ, ಗೋವಿನಜೋಳ ಬೆಳೆ ಹಾಳಾಯಿತು. ಆದರೂ ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕೂಡಲೇ ಈ ಕೆಲಸವಾಗಬೇಕು. ರೈತರು ವಾಣಿಜ್ಯ ಬ್ಯಾಂಕ್‌ನಿಂದ ಪಡೆದ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ರೈತರಿಗೆ ಬೆಳೆ ಸಾಲವನ್ನು ಬ್ಯಾಂಕ್ ಅಧಿಕಾರಿಗಳು ಕಾನೂನಿನ ನೆಪವೊಡ್ಡಿ ಮಂಜೂರು ಮಾಡುತ್ತಿಲ್ಲ. ಪಡಿತರ ಚೀಟಿ ಗೊಂದಲ ನಿವಾರಿಸಬೇಕು ಎಂದರು.
ತಾಲೂಕಿನಾದ್ಯಂತ ವೈದ್ಯಾಧಿಕಾರಿಗಳ ಕೊರತೆ ಇದ್ದು, ತಕ್ಷಣ ನೇಮಕ ಮಾಡಬೇಕು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಚುನಾವಣಾಧಿಕಾರಿ ಆರ್.ಜೆ. ಗೋಖಲೆ ಅವರಿಗೆ ಮನವಿ ಸಲ್ಲಿಸಲಾಯಿತು. ಗೌರವಾಧ್ಯಕ್ಷ ಶಿವನಗೌಡ ಪಾಟೀಲ, ಉಮೇಶಪ್ಪ ಹೊಸಮನಿ, ಉಪಾಧ್ಯಕ್ಷ ಶಿವನಗೌಡ ಹೊಸಗೌಡ್ರ, ಫೀರಪ್ಪ ಪೂಜಾರ, ಕಾರ್ಯದರ್ಶಿ ಮಲ್ಲನಗೌಡ ಸೊರಟೂರ, ಮುಖಂಡರಾದ ಭೀಮಪ್ಪ ನರೇಗೌಡ್ರ, ವಿರೂಪಾಕ್ಷಪ್ಪ ಸಾತೇನಹಳ್ಳಿ, ಬಸನಗೌಡ ಹಿರೇಕೆರೂರ, ವಿಜಯಕುಮಾರ ಹುಡೇದ, ಸುಪುತ್ರಪ್ಪ ಒಡ್ಡಿನಕಟ್ಟಿ, ವೀರಪ್ಪ ಕೆಂಗೆಗೌಡ್ರ, ಜಯಪ್ಪ ಕೋರಿ, ರಮೇಶ ನಾಯಕ, ವೀರಪ್ಪ ಗಿರಿಮಳ್ಳೇರ, ರಾಜಪ್ಪ ಅಜ್ಜಪ್ಪನವರ, ಬಸನಗೌಡ ದೊಡ್ಡಗೌಡ್ರ, ಸೋಮಶೇಖರಪ್ಪ ಪಂಚಾನನ ಇದ್ದರು.
--
ಹನಕನಹಳ್ಳಿ ಗ್ರಾಮದ ಟಿಪ್ಪು ಅಭಿಮಾನಿ ವೇದಿಕೆಗೆ ಆಯ್ಕೆ
ಶಿಗ್ಗಾಂವಿ: ತಾಲೂಕಿನ ಹನಕನಹಳ್ಳಿ ಗ್ರಾಮದ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ಗ್ರಾಮ ಘಟಕದ ಅಧ್ಯಕ್ಷರನ್ನ್ನಾಗಿ ಕಾಶೀಮಸಾಬ ಬಾಬಾಜಾನ ಮುಲ್ಲಾನವರ ಅವರನ್ನು ನೇಮಿಸಿ ಮಹಾವೇದಿಕೆ ರಾಜ್ಯಾಧ್ಯಕ್ಷ ಅಬ್ದುರ್ರಜಾಕ್ ಮೋದಿನಸಾಬ ಮುಲ್ಲಾ ನೀಡಿದ ಆದೇಶವನ್ನು ಜಿಲ್ಲಾ ಸಹ ಕಾರ್ಯದರ್ಶಿ ಶರೀಫ್ ಸಾಬ ಬಸರಿಕಟ್ಟಿ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ಮಹ್ಮದ ಸಾಧಿಕ ಹಂಚಿನಮನಿ, ಕಾರ್ಯದರ್ಶಿಯಾಗಿ ಮದರಸಾಬ ಹಂಚಿನಮನಿ, ಖಜಾಂಚಿಯಾಗಿ ಖಾಜಾಮೊದೀನ ಹಂಚಿನಮನಿ, ಸಂಘಟನಾ ಕಾರ್ಯದರ್ಶಿಯಾಗಿ ರಫೀಕ ಹಂಚಿನಮನಿ, ಪ್ರದಾನ ಕಾರ್ಯದರ್ಶಿಯಾಗಿ ಮಮ್ಮದ ಜಾಫರ ಜಾನಗುಂಡಿ ಆಯ್ಕೆಯಾದರು. ಹಾನಗಲ್ ತಾಲೂಕಿನ ಶರೀಫ್ ಮುಲ್ಲಾ, ದಿವಾನಸಾಬ ಬುಕ್ಕಾನಸಾಬ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.