ಬೇಡಿದ್ದು ನೀಡುವ ಮಹಾತಾಯಿ ದಾನಮ್ಮ
ರಾಣಿಬೆನ್ನೂರು: 12ನೇ ಶತಮಾನದಲ್ಲಿ ಅವತರಿಸಿದ್ದ ಶರಣ-ಶರಣೆಯರಲ್ಲಿ ಬೇಡಿದ್ದನ್ನು ನೀಡುವಂಥ ಮಹತ್ವದ ಶಕ್ತಿಯನ್ನು ಹೊಂದಿದ್ದ ಮಹಾತಾಯಿ ದಾನಮ್ಮ ಇಂದು ಎಲ್ಲರ ಮನಸ್ಸಿನಲ್ಲಿ ದೇವತೆಯಾಗಿ ಪರಿಣಮಿಸಿದ್ದಾಳೆ ಎಂದುದಾವಣಗೇರಿ ಜಿಲ್ಲೆಯ ಹರುಪನಹಳ್ಳಿ ತಾಲೂಕಿನ ಲಿಂಗನಾಯಕನಹಳ್ಳಿಯ ಜಂಗಮ ಸುಕ್ಷೇತ್ರಮಠದ ಚನ್ನವೀರ ಸ್ವಾಮೀಜಿ ನುಡಿದರು.
ಶ್ರಾವಣ ಮಾಸದ ಅಂಗವಾಗಿ ನಗರದ ಗಂಗಾಪುರ ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಹಾಗೂ ಸಂಗಮೇಶ್ವರ ಮಠದಲ್ಲಿ ಪ್ರಾರಂಭಗೊಂಡಿರುವ ಮಹಾಶರಣೆ ಇಟಗಿ ಭೀಮಾಂಬಿಕಾ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮ 6ನೇ ದಿವಸದ ಕಾರ್ಯಕ್ರಮದ ನಂತರ ಮಠದ ಆವರಣದಲ್ಲಿ ಶಿವಶರಣೆ ದಾನಮ್ಮದೇವಿ ದೇವಸ್ಥಾನ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಹತ್ವದ ಮಾಸವೆಂದು ಕರೆಯಲ್ಪಡುವ ಶ್ರಾವಣ ಮಾಸದಲ್ಲಿ ನಗರ ಮತ್ತು ಸುತ್ತಲಿನ ಗ್ರಾಮಗಳ ಜನರು, ಬಹು ಆಸಕ್ತಿಯಿಂದ ನಿತ್ಯ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ನೋಡಿ ನಮಗೆ ತುಂಬಾ ಸಂತಸವಾಗಿದೆ.
ಪ್ರತಿಯೋಬ್ಬರು ತಮ್ಮ ಧರ್ಮಗುರುಗಳ ಅಥವಾ ಲೋಕ ಕಲ್ಯಾಣಾರ್ಥವಾಗಿ ವಿವಿಧ ಪವಾಡಗಳನ್ನು ಗೈದಿರುವ ಪವಾಡ ಪುರುಷರ ಚರಿತ್ರೆಗಳನ್ನು ಕೇಳುವುದರೊಂದಿಗೆ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಎಲ್ಲ ಜನ್ಮಗಳಲ್ಲಿ ಪವಿತ್ರವೆನ್ನಿಸಿರುವ ಮಾನವರಾಗಿ ಜನಿಸಿರುವ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಾಗಲಿ, ಮನೆ ಸುತ್ತಮುತ್ತಲಿನ ದೇವಸ್ಥಾನ ಮಠ-ಮಂದಿರಗಳಲ್ಲಾಗಲಿ, ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿ ಪುರಾಣ ಕರ್ತರನ್ನು ಕರೆಯಿಸಿ ಅವರಿಂದ ಶರಣರ ಸಂದೇಶಗಳನ್ನು ಹೇಳಿಸಿ ಅವುಗಳನ್ನು ಪಾಲಿಸುವುದರೊಂದಿಗೆ ಮುಂದಿನ ಪಿಳಿಗೆ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಸಾರ್ಥಕ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ಪುರಾಣ ಸಮಿತಿ ಮತ್ತು ಮಠದ ಟ್ರಸ್ಟ್ ಸಮಿತಿ ಕಾರ್ಯದರ್ಶಿ ವಿ.ವಿ. ಹರಪನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಪುರಾಣ ಪ್ರವಚನಕಾರರಾಗಿ ಆಗಮಿಸಿರುವ ಹಾವೇರಿ ತಾಲೂಕಿನ ಚನ್ನೂರು ಗ್ರಾಮದ ಶಿವಬಸವಯ್ಯ ಶಾಸ್ತ್ರಿಗಳು ಹಿರೇಮಠ, ಕೊಟ್ಟೂರೇಶ್ವರ ಮಠದ ಶಾಸ್ತ್ರಿಗಳಾದ ಎಂ.ಕೆ. ಹಾಲಸಿದ್ದಯ್ಯ, ಮುಖಂಡರಾದ ಚಂದ್ರಣ್ಣ ರಾಮಾಳದ, ಸಿದ್ದರಾಮಣ್ಣ ಹೊದ್ದಿಗೇರಿ, ಶಾಂತಮ್ಮ ಬಾದಾಮಿ, ರಾಜಣ್ಣ ಮೂಟಗಿ, ವಿಜಯಲಕ್ಷ್ಮಿ ಉಪಾಸಿ, ನಾಗರತ್ನಮ್ಮ ಹಿರೇಮಠ, ಸರೋಜಮ್ಮ ಅಜ್ಜವಡಿಮಠ, ರತ್ನಮ್ಮ ಬಳ್ಳಾರಿ, ಟ್ರಸ್ಟಿಗಳಾದ ವಿಶ್ವಾರಾಧ್ಯ ಅಜ್ಜವಡಿಮಠ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

