ಹಾವೇರಿ

ಸಂಗೊಳ್ಳಿ ರಾಯಣ್ಣನ ಗುಣ ಪಾಲಿಸಿ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಆ. 17
ಪರಕೀಯರ ದಬ್ಬಾಳಿಕೆಯಿಂದ ಭಾರತೀಯರನ್ನು ಬಿಡುಗಡೆಗೊಳಿಸಿದ ಹೋರಾಟಗಾರರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪಾತ್ರ ಅಮೋಘವಾಗಿದೆ. ಅವನ ಆದರ್ಶ ಗುಣಗಳನ್ನು ನಾವೆಲ್ಲರೂ ಬೆಳೆಸಿಕೊಂಡು ದೇಶದ ಭವಿಷ್ಯ ಕಾಪಾಡಬೇಕಾಗಿದೆ ಎಂದು ಕುರುಬ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಒಡೆಯರ ಕರೆ ನೀಡಿದರು.
ತಾಲೂಕು ಕುರುಬ ಸಮಾಜದ ವತಿಯಿಂದ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215ನೇ ಜನ್ಮ ದಿನಾಚರಣೆ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು, ಬಿಸ್ಕತ್ ಹಾಗೂ ಬ್ರೆಡ್ ವಿತರಿಸಿ, ಪಟ್ಟಣದ ಕನಕ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಪಾಯಿ ದಂಗೆ ಎಂದೇ ಖ್ಯಾತವಾಗಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ದೇಶಭಕ್ತರು ತ್ಯಾಗ-ಬಲಿದಾನ ಮಾಡಿದ್ದಾರೆ. ನಾಡು ಕಂಡ ಅಪೂರ್ವ ದೇಶಭಕ್ತ ಸಂಗೊಳ್ಳಿ ರಾಯಣ್ಣ ತನ್ನ ಜೀವ ಮುಡುಪಾಗಿಟ್ಟು ನಮ್ಮೆಲ್ಲರನ್ನೂ ಪಾರತಂತ್ರ್ಯದಿಂದ ಬಿಡುಗಡೆಗೊಳಿಸಿದರು. ನಾಡಿನ ವೀರ ವನಿತೆ ಕಿತ್ತೂರು ಚನ್ನಮ್ಮನ ಅಂಗರಕ್ಷಕನಾಗಿ ಮುಂಚೂಣಿಯಲ್ಲಿದ್ದ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸುವಾಗ ನಿನ್ನ ಕೊನೆಯ ಆಸೆ ಏನು ಎಂದು ಪ್ರಶ್ನಿಸಿದರು. ಬ್ರಿಟಿಷರನ್ನು ದೇಶದಿಂದ ಹೊರಗಟ್ಟುವುದೇ ನನ್ನ ಕೊನೆಯ ಆಸೆ ಎಂದ ಆತನ ಉಜ್ವಲ ದೇಶಪ್ರೇಮ, ತ್ಯಾಗ ಗುಣಗಳು ಅನುಕರಣೀಯ ಎಂದರು.
ತಾಲೂಕು ಕರುಬರ ಸಂಘದ ಅಧ್ಯಕ್ಷ ಶೇಕಣ್ಣ ಉಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹುಚ್ಚಪ್ಪ ಗೋಣಿಮಠ, ಮರಿಗೋಣೆಪ್ಪ ದೂಳಣ್ಣನವರ, ಪಿ.ಜೆ. ಓಲೆಕಾರ, ಎಂ.ಡಿ. ಕುರುಬರ, ವಿಜಯ ಬಲ್ಮುರಿ, ಮೈಲಾರಪ್ಪ ದಿಂಡೇರ, ಹನುಮಂತಪ್ಪ ದಿಂಡೇರ, ಲಕ್ಷ್ಮಣ ಬಾಗಲಕೋಟಿ, ಕೆ.ಜಿ. ಚೆನ್ನಳ್ಳಿ, ಸಿ.ಎಸ್. ಹಾರ್ನಳ್ಳಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.