ಸುದ್ದಿ ಸಂಕ್ಷೇಪ
ಇಂದಿನಿಂದ ರಾಘವೇಂದ್ರ ಸ್ವಾಮಿಗಳ ಆರಾಧನೆ
ಹಾವೇರಿ: ಶ್ರೀ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ನಗರದಲ್ಲಿ ಆ. 21ರಿಂದ 23ರ ವರೆಗೆ ನಡೆಯಲಿದೆ. ಆ. 21ರಂದು ಪೂರ್ವಾರಾಧನೆ, ಮುಂಜಾನೆ 7ಕ್ಕೆ ಅಷ್ಟೋತ್ತರ, 8ಕ್ಕೆ ಪಂಚಾಮೃತ, ಮಧ್ಯಾಹ್ನ 12ಕ್ಕೆ ನೈವೇದ್ಯ ಹಸ್ತೋದಕ, ಸಂಜೆ 5.30ಕ್ಕೆ ಆನಂದ ಜಮಖಂಡಿ ಅವರಿಂದ ಭಕ್ತಿಗೀತೆಗಳ ಗಾಯನ, 6.30ಕ್ಕೆ ಶ್ರೀ ರಾಯರು ಪಾದಕಟ್ಟೆಗೆ ಬರುವರು. ಆ. 2ರಂದು ಮಧ್ಯಾರಾಧನೆ. ಮುಂಜಾನೆ 6ಕ್ಕೆ ಅಷ್ಟೋತ್ತರ, 8ಕ್ಕೆ ಪಂಚಾಮೃತ, 9ಕ್ಕೆ ಗುರುಗಳ ಪಾದಪೂಜೆ, 10ಕ್ಕೆ ಬೆಳ್ಳಿ ರಥೋತ್ಸವ, ಮಧ್ಯಾಹ್ನ 12ಕ್ಕೆ ನೈವೇದ್ಯ ಹಸ್ತೋದಕ, ಸಂಜೆ 6.30ಕ್ಕೆ ಹೂವಿನ ರಥೋತ್ಸವ. ಆ. 23ರಂದು ಉತ್ತರಾರಾಧನೆ. ಮುಂಜಾನೆ 6ಕ್ಕೆ ಅಷ್ಟೋತ್ತರ, 10ಕ್ಕೆ ಬೆಳ್ಳಿ ರಥೋತ್ಸವ, 11.30ಕ್ಕೆ ಮಹಾರಥೋತ್ಸವ, ಬಳಿಕ ಅನ್ನ ಸಂತರ್ಪಣೆ. ಆ. 24ರಂದು ಮುಂಜಾನೆ 10.30ಕ್ಕೆ ಅವಭೃತ ಸ್ನಾನ ನಡೆಯಲಿವೆ ಎಂದು ಡಾ ರಾಜಣ್ಣ ಎಸ್. ವೈದ್ಯ ಹಾಗೂ ಡಾ ಮುರಳೀಧರ ಎಸ್. ವೈದ್ಯ ತಿಳಿಸಿದ್ದಾರೆ.
ಇಂದು ಕಾಲೇಜು ಸಂಸತ್ತು ಉದ್ಘಾಟನೆ
ಹಾನಗಲ್ಲ: ಹಾನಗಲ್ಲ ವಿರಕ್ತಮಠದ ಆವರಣದಲ್ಲಿರುವ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಂಸತ್ತು ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆ. 21ರಂದು ಬೆಳಗ್ಗೆ 11 ಘಂಟೆಗೆ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಸಿ.ಎಂ. ಉದಾಸಿ ಉದ್ಘಾಟಿಸುವರು. ಪ್ರಾಚಾರ್ಯ ಟಿ.ಎನ್. ಕಾಮನಹಳ್ಳಿ ಅಧ್ಯಕ್ಷತೆ ವಹಿಸುವರು. ನಿರ್ದೇಶಕರಾದ ಎನ್.ಜಿ. ಕುಂಬಾರಿ, ಜಿ.ಎಸ್. ಕೊಂಡೋಜಿ, ನಿವೃತ್ತ ಶಿಕ್ಷಕ ಎಚ್.ಎನ್. ಸವಣೂರ, ವಿದ್ಯಾರ್ಥಿ ಪ್ರತಿನಿಧಿಗಳಾದ ಎಂ. ರಂಜಿತಾ, ಪಾಂಡುರಂಗ ಬೋಡ್ಕೆ ಪಾಲ್ಗೊಳ್ಳುವರು.
ವಿದ್ಯುತ್ ವ್ಯತ್ಯಯ ರದ್ದು
ಹಾವೇರಿ: ಆ. 22ರಂದು ಸವಣೂರು 110/33/11 ಕೆ.ವಿ. ವಿದ್ಯುತ್ ವಿತರಣ ಕೇಂದ್ರದಲ್ಲಿ ನಡೆಯಬೇಕಿದ್ದ ತುರ್ತು ನಿರ್ವಹಣಾ ಕಾಮಗಾರಿಯನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ. ಹೀಗಾಗಿ, ಆ. 22ರಂದು ನಿಗದಿಯಾಗಿದ್ದ ವಿದ್ಯುತ್ ವ್ಯತ್ಯಯ ರದ್ದಾಗಿದೆ ಎಂದು ಹೆಸ್ಕಾಂ ಹಾವೇರಿ ವಿಭಾಗದ ಎಇಅ ಓ.ಎಸ್. ಶಶಿಧರ ತಿಳಿಸಿದ್ದಾರೆ.
ಡಿಕ್ಕಿ: ಬೈಕ್ ಸವಾರ ಸಾವು
ರಾಣಿಬೆನ್ನೂರು: ಕಾರು-ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ರಾಣಿಬೆನ್ನೂರು ಬೈಪಾಸ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ದಾವಣಗೆರೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬ್ಯಾಡಗಿ ಕಡೆಗೆ ಹೋಗಲು ರಸ್ತೆ ಕ್ರಾಸ್ ಮಾಡುವ ಬೈಕ್ ಪರಸ್ಪರ ಡಿಕ್ಕಿ ಹೊಡೆದಿವೆ. ಬೈಕ್ ಸವಾರ, ಬ್ಯಾಡಗಿ ತಾಲೂಕು ತಡಸ ಗ್ರಾಮದ ಹಜರತ್ ಅಲಿ ಮೆಹಬೂಬಸಾಬ್ ಎರೆಸೀಮಿ (20) ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಮಂಜಪ್ಪ ತಿರುಕಪ್ಪ ಹುಣಸಿಹಳ್ಳಿ (40) ಎಂಬುವರ ಎರಡೂ ಕಾಲುಗಳು ಮುರಿದಿವೆ. ಸಂಚಾರ ಠಾಣೆ ಪಿಎಸ್ಐ ಅರಳಿಕಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

