ಸುದ್ದಿ ಸಂಕ್ಷೇಪ
ಅತ್ಯಾಚಾರ: ಪತ್ರಕರ್ತರ ಸಂಘದಿಂದ ಪ್ರತಿಭಟನೆ
ಹಾವೇರಿ: ಮುಂಬಯಿಯಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಜಿಲ್ಲಾ ಮಟ್ಟದ ಪತ್ರಕರ್ತರು ಹಾವೇರಿಯಲ್ಲಿ ಶನಿವಾರ ಮೌನ ಪ್ರತಿಭಟನೆ ನಡೆಸಿದರು. ಇಲ್ಲಿನ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು 2 ತಾಸು ಪ್ರತಿಭಟನೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ದೌರ್ಜನ್ಯ ತಡೆ ಸಮಿತಿ ರಚನೆಗೆ ಒತ್ತಾಯಿಸಿ ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಅತ್ಯಾಚಾರ ನಡೆಸಿದವರನ್ನು ಬಂಧಿಸಿ ಗಲ್ಲು ವಿಧಿಸಬೇಕು ಎಂದು ಆಗ್ರಹಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳ ಮೇಲಿನ ದೌರ್ಜನ್ಯ ತಡೆಯಲು ಸಮಿತಿ ಇದೆ. ನಾಲ್ಕು ವರ್ಷಗಳಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಒಂದು ಬಾರಿಯೂ ಸಮಿತಿ ಸಭೆ ಕರೆದಿಲ್ಲ. ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ದೌರ್ಜನ್ಯ ತಡೆಯುವುದಕ್ಕಾಗಿ ವಾರದಲ್ಲಿ ಸಮಿತಿ ಸಭೆ ಕರೆಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಗಂಗಾಧರ ಹೂಗಾರ, ಪ್ರಧಾನ ಕಾರ್ಯದರ್ಶಿ ಶಿವಾನಂದ ಗೊಂಬಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ, ಕಾರ್ಯದರ್ಶಿ ಪರಶುರಾಮ ಅಗಡಿ, ಮಿಡಿಯಾ ಕ್ಲಬ್ ಅಧ್ಯಕ್ಷ ಶಿವಕುಮಾರ ಹುಬ್ಬಳ್ಳಿ, ಕಾರ್ಯದರ್ಶಿ ರವಿ ಮುಖಿ, ವಿಜಯ ಹೂಗಾರ, ರಾಜು ನದಾಫ, ವಾಗೀಶ ಪಾಟೀಲ, ವಸಂತಗೌಡ ಪಾಟೀಲ, ರಾಜೇಂದ್ರ ರಿತ್ತಿ, ವಿಜಯಕುಮಾರ ಪಾಟೀಲ, ರವಿ ಹೂಗಾರ, ಷಡಕ್ಷರಯ್ಯ, ನಾಗರಾಜ, ಫಕ್ಕಿರಸ್ವಾಮಿ ಗಣಾಚಾರಿ, ಸಂತೋಷ ಇದ್ದರು.
ಹೋರಾಟಕ್ಕೆ ಬೆಂಬಲ: ಪತ್ರಕರ್ತರ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ಸೂಚಿಸಿದರು. ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ, ರಮೇಶ ಕಡಕೋಳ, ರತ್ನಾ ಭೀಮಕ್ಕನವರ, ಐ.ಯು. ಪಠಾಣ, ಹನುಮಂತ ಶರಶೂರಿ, ಸಚಿನ ಡಂಬಳ, ಮುಖಂಡರಾದ ಜಗದೀಶ ಬಸೇಗಣ್ಣಿ, ಸುನೀಲ ಜಮಾದಾರ, ಅಪ್ಪಾಲಾಲ ಯಾದವಾಡ, ಕರಬಸಪ್ಪ ಹಲಗಣವರ ಇದ್ದರು.
ಟಿಪ್ಪು ವೇದಿಕೆಗೆ ಆಯ್ಕೆ
ಶಿಗ್ಗಾಂವಿ: ಹುನಗುಂದ ಗ್ರಾಮದ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆ ಗ್ರಾಮ ಘಟಕದ ಅಧ್ಯಕ್ಷರಾಗಿ ಖಾಜಾವೈಸ ಗೌ. ಸವಣೂರ, ಉಪಾಧ್ಯಕ್ಷರಾಗಿ ಶೀರಾಜ ಬಾ. ಮುಲ್ಲಾನವರ, ಕಾರ್ಯದರ್ಶಿಯಾಗಿ ಫಯಾಜ ಅಹ್ಮದ ಬ. ಮುಲ್ಲಾನವರ, ಖಜಾಂಚಿಯಾಗಿ ಮಕ್ತುಂಬೇಗ ಗೌ. ಶಿಗ್ಗಾಂವ, ಪ್ರಧಾನ ಕಾರ್ಯದರ್ಶಿಯಾಗಿ, ಬಾಶಾಸಾಬ ಮೈ. ಕಾಡಶೆಟ್ಟಿಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಇರಫಾನ ಅ. ಶಿಗ್ಗಾಂವ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಹಕಾರ್ಯದರ್ಶಿ ಶರೀಫಸಾಬ ಇ. ಬಸರೀಕಟ್ಟಿ, ಶೇರ ಅಲಿ ಮುಲ್ಲಾ ಹಾಗೂ ಮೌಲಾ ಅಲಿಶಾ ಬ. ಚಿಸ್ತಿ, ಮುಳಕೇರಿ, ಅಂಜುಮನ್ ಕಮಿಟಿ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

