ಹಾವೇರಿ

ಇಂದು ರಾಷ್ಟ್ರಮಟ್ಟದ ಮೌಲ್ಯಮಾಪನ ಪರೀಕ್ಷೆ: ಸಿದ್ಧತೆ ಪೂರ್ಣ

Published On :

ರಾಣಿಬೆನ್ನೂರು: ಆ. 25ರಂದು ಬೆಳಗ್ಗೆ 10ರಿಂದ  ಸಂಜೆ 5ರ ವರೆಗೆ ತಾಲೂಕಿನ 35 ಗ್ರಾಪಂ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತಾಲೂಕು ಲೋಕ ಶಿಕ್ಷಣ ಸಮಿತಿ ರಾಣಿಬೆನ್ನೂರು ಹಾಗೂ ಗ್ರಾಪಂ ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಸರ್ವ ಸಾಕ್ಷರರ ರಾಷ್ಟ್ರಮಟ್ಟದ ಮೌಲ್ಯಮಾಪನ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಸಂಯೋಜಕ ಆರ್.ಡಿ. ಹೊಂಬರಡಿ ತಿಳಿಸಿದರು.
ತಾಪಂನ ತಾಲೂಕು ಲೋಕ ಶಿಕ್ಷಣ ಸಮಿತಿ ಕಾರ್ಯಾಲಯದಲ್ಲಿ ಕರೆದಿದ್ದ ಗ್ರಾಪಂ ಪ್ರೇರಕರು, ಪರೀಕ್ಷಾ ವೀಕ್ಷಕ ಶಿಕ್ಷಕ, ಮುಖ್ಯ ಅಧಿಕ್ಷಕರ ಸಭೆಯಲ್ಲಿಮಾತನಾಡಿದರು.
ತಾಲೂಕಿನ 35 ಗ್ರಾಪಂ ವ್ಯಾಪ್ತಿಯ 35 ಗ್ರಾಮಗಳಲ್ಲಿ 1,160 ನವ ಸಾಕ್ಷರರು ಪರೀಕ್ಷೆ ಬರೆಯಲು ಅರ್ಹರೆಂದು ಪ್ರವೇಶ ಪತ್ರ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಿದ್ದು, ನವ ಸಾಕ್ಷರರು ಪರೀಕ್ಷೆ ಬರೆಯುವಾಗ ಸಹಾಯ ಮಾಡುವಂತಿಲ್ಲ, ಪರೀಕ್ಷೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಹಾಗೂ ಲೋಪ ಕಂಡುಬಂದಲ್ಲಿ ಗ್ರಾಪಂ ಪ್ರೇರಕರೇ ಹೊಣೆ. ಪರೀಕ್ಷೆಗೆ ಹಾಜರಾಗುವ ಸವ ಸಾಕ್ಷರರಿಗೆ ಪಶ್ನೆ ಪತ್ರಿಕೆ ಓದಿಗೆ 50 ಅಂಕ, ಬರಹಕ್ಕೆ 50 ಅಂಕ, ಲೆಕ್ಕಾಚಾರಕ್ಕೆ 50 ಅಂಕ ನೀಡಲಾಗುವುದು. ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದರೆ ಎ ದರ್ಜೆ, ಶೇ. 40ರಿಂದ-60 ಅಂಕ ಪಡೆದರೆ ಬಿ ದರ್ಜೆ, ಶೇ. 40ಕ್ಕಿಂತ ಕಡಿಮೆ ಅಂಕ ಪಡೆದರೆ ಸಿ ದರ್ಜೆ ಎಂದು ಫಲಿತಾಂಶ ಪ್ರಕಟಿಸಿ ರಾಷ್ಟ್ರೀಯ ಮುಕ್ತ ಶಾಲಾ ಮತ್ತು ರಾಷ್ಟ್ರೀಯ ಸಾಕ್ಷರತಾ ಮಿಷನ್ ಅಧಿಕಾರಿಗಳಿಂದ ಪ್ರಮಾಣಪತ್ರ ನೀಡಲಾಗುವುದು ಎಂದು ಲೋಕ ಶಿಕ್ಷಣ ಸಮಿತಿ ಸಂಯೋಜಕ ಹೊಂಬರಡಿ ತಿಳಿಸಿದರು.
ತಾಪಂ ಪ್ರಭಾರಿ ಇಓ ಡಾ೤ ನಾಗನಗೌಡ ರೆಡ್ಡಿ ಸಭೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಹಿಳಾ ಸಂಯೋಜಕಿ ಕವಿತಾ ಎಸ್.ಜಿ, ಸಂಪನ್ಮೂಲ ಶಿಕ್ಷಕರಾದ ವಿ.ವಿ. ಮಣ್ಣಬಸಣ್ಣರ, ಎನ್.ಎನ್. ಅಣ್ಣೇರ, ಆರ್.ಎ. ಪಾಟೀಲ, ಎಸ್.ವಿ. ರಾಚೂಟಿಮಠ ತರಬೇತಿ ನೀಡಿದರು. ಇಟಗಿ ಗ್ರಾಪಂ ಲೋಕ ಶಿಕ್ಷಣ ಸಮಿತಿ ಪ್ರೇರಕ ಚನ್ನಗೌಡ ವೀರಬಸಪ್ಪನವರ, ಗುಡಗೂರು ಗ್ರಾಪಂನ ರೇಣುಕಾ ಚಲವಾದಿ, ಮಾಕನೂರಿನ ಹನುಮಂತಪ್ಪ ಸಾರಧಿ, ರಾಹುತನಕಟ್ಟಿಯ ಪರಶುರಾಮ ಬಣಕಾರ ಇದ್ದರು. ಕವಿತಾ ಸ್ವಾಗತಿಸಿದರು. ಕೀರ್ತಿಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.