ಅಭಿವೃದ್ಧಿ ಆದ್ಯತೆಯೇ ಜಯದ ಗುಟ್ಟು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 26
ಕಾಂಗ್ರೆಸ್ ನೇತೃತ್ವ ಆಡಳಿತದ ಯಶಸ್ಸಿನ ಫಲವಾಗಿಯೇ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಜಯ ಲಭಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಇತರ ಎಲ್ಲ ಕ್ಷೇತ್ರಗಳಿಗೆ ಅಭಿವೃದ್ಧಿ ಆದ್ಯತೆ ನೀಡುತ್ತಿರುವುದೇ ಜಯದ ಗುಟ್ಟು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಾನಪ್ಪ ಗಂಟೇರ ತಿಳಿಸಿದರು.
ಧಾರವಾಡ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಹಾನಗಲ್ನಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಕಾಂಗ್ರೆಸ್ ಪಕ್ಷ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹಿತಕ್ಕಾಗಿ ಶ್ರಮಿಸುತ್ತಿದೆ. ಹಿಂದುಳಿದವರ ಏಳ್ಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಲವು ಯೋಜನೆಗಳು ಯಶಸ್ವಿಯಾಗಿ ಜನರ ಗಮನ ಸೆಳೆದಿವೆ. ಕರ್ನಾಟಕದಲ್ಲಿ ಸ್ವಚ್ಛ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಷ್ಣುಕಾಂತ ಜಾಧವ ಮಾತನಾಡಿ, ಎರಡು ಲೋಕಸಭೆ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲವು ರಾಜ್ಯ ಸರ್ಕಾರದ ಆಡಳಿತಕ್ಕೆ ನೀಡಿರುವ ಮನ್ನಣೆಯಾದರೆ, ವಿಧಾನ ಪರಿಷತ್ನ ಈ ಗೆಲವು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ದಕ್ಷ, ಪಾರದರ್ಶಕ ಆಡಳಿತದ ಮುಂದೆ ವಿರೋಧಿ ಬಣಗಳ ಅಪವಿತ್ರ ಮೈತ್ರಿಯ ಆಟ ನಡೆಯಲಿಲ್ಲ ಎಂದು ಸಾಬೀತುಪಡಿಸಿದೆ ಎಂದರು.
ತಾಪಂ ಮಾಜಿ ಸದಸ್ಯ ಶಿವಾಜಿ ಆರೇರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರರು ಬಿಜೆಪಿ ಭದ್ರಕೋಟೆಯನ್ನೇ ಛಿದ್ರಗೊಳಿಸಿರುವ ಕಾಂಗ್ರೆಸ್ ಮತದಾರರ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದೆ. ಕಾಂಗ್ರೆಸ್ನಿಂದ ಸುಭದ್ರ ಸರ್ಕಾರ ಸಾಧ್ಯ ಎಂಬ ಸಂದೇಶ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡುತ್ತಿದೆ. ಮುಂಬರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿನ ಅಭಿಯಾನ ಮುಂದುವರಿಯಲಿದೆ ಎಂದರು.
ತಾಲೂಕು ಪಂಚಾಯ್ತಿ ಸದಸ್ಯ ಮಧು ಪಾಣಿಗಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ರಾಮಣ್ಣ ಮಾಸನಕಟ್ಟಿ, ಎಂ.ಆರ್. ಗುತ್ತಲ, ಜಿ.ಎಂ. ಮುಲ್ಲಾ, ಪ್ರಶಾಂತ ಗೊಂದಿ, ನಿಂಗಪ್ಪ ಹೊಸಮನಿ, ಎಂ.ಎಂ. ಮುಲ್ಲಾ, ನಜೀರ ಗಿರಸಿನಕೊಪ್ಪ, ನೂರಅಹಮ್ಮದ್ ಮುಕಾಶಿ, ಪ್ರಶಾಂತ ಕಾನಡೆ, ಮೆಹಬೂಬಲಿ ಹೊಂಡದ, ಎಸ್.ಎಂ. ಕೊತಂಬರಿ, ಮೋಹನ ಕೆರೂರ, ಸತೀಶ ಸಾಗರವಳ್ಳಿ, ರಾಜು ಗುಡಿ, ಮಹಮ್ಮದ್ ಆಸೀಫ್ ಸಿಡೇನೂರ, ಶುಕುರ ಮುಕಾಶಿ, ಎಸ್.ಎಸ್. ಖಾದ್ರಿ, ಮಾಲತೇಶ ಸುಂಕದ, ಪರಶುರಾಮ ಡೂಗನವರ, ನಾಗೇಶ ಗೌಂಡಿ, ಎಚ್.ವಿ. ಲಮಾಣಿ ಮತ್ತಿತರರು ವಿಜಯೋತ್ಸವದಲ್ಲಿ ಸೇರಿದ್ದರು.
--
ನಾಗರಾಜ ಛಬ್ಬಿ ಆಯ್ಕೆ: ಸಂಭ್ರಮ
ಶಿಗ್ಗಾಂವಿ: ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ನಾಗರಾಜ ಛಬ್ಬಿ ಗೆಲುವಿಗೆ ಶಿಗ್ಗಾಂವಿ ನಗರದ ಪುರಸಭೆ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಹನುಮರೆಡ್ಡಿ ನಡುವಿನಮನಿ, ಎನ್.ಸಿ. ಪಾಟೀಲ, ಸುಧೀರ ಲಮಾಣಿ, ಗುಡ್ಡಪ್ಪ ಜಲದಿ, ಪುಟ್ಟಪ್ಪ ಜಲದಿ, ಶಂಭುಲಿಂಗಪ್ಪ ಆಜೂರ, ಎಸ್. ಎಫ್. ಮಣಕಟ್ಟಿ, ಪ್ರದೀಪಕುಮಾರ ಗಿರೇಡ್ಡಿ, ಎಫ್. ಸಿ. ಪಾಟೀಲ್, ಶಿವಾನಂದ ಬಾಗೂರ, ಮಕಾಂದರ, ಬಸವರಾಜ ಎಸ್. ಕಾಳೆ, ದೊಡ್ಡಮನಿ, ರವಿ ಗುಡಸಲಮನಿ, ಚಂದ್ರಶೇಖರ ಮಾಣೋಜಿ, ಶೇಕಣ್ಣ ಆರೇರ. ಖಾಜಾ ರಿತ್ತಿ, ಮುಸ್ತಾಕ ಮುಲ್ಲಾ, ಇಬ್ರಾಹಿಮ ಕಳಸಗಿರಿ, ಶಿವಾನಂದ ಮಾದರ, ಕಾಶೀನಾಥ ರಾಯ್ಕರ, ಅಬ್ದುಲ್ ಜಮಾದಾರ, ಮಹ್ಮದ ಹನೀಫ ದುಖಾನದಾರ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

