ಹಾವೇರಿ

ರಾಣಿಬೆನ್ನೂರು: ನಾಳೆ ಭಕ್ತಿ ಸಂಗೀತ ಕಾರ್ಯಕ್ರಮ

Published On :

ರಾಣಿಬೆನ್ನೂರು: ನಗರದ ಎಂ.ಜಿ. ರಸ್ತೆಯ ಬಾವಾನಮಠದ ಆವರಣದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ (ಗೋಕುಲಾಷ್ಟಮಿ) ಪ್ರಯುಕ್ತ ಆ. 28ರಂದು ರಾತ್ರಿ 8.30ರಿಂದ 11.30ರ ವರೆಗೆ ನಗರದ ಕೋಟೆ ಶಾರದಾಂಬಾ ಮಹಿಳಾ ಮಂಡಳದ ಸದಸ್ಯರು ಭಕ್ತಿ ಸಂಗೀತ-ಗೀತಗಾಯನ ಕಾರ್ಯಕ್ರಮ ನಡೆಸಿಕೊಡುವರು. ರಾತ್ರಿ 12 ಗಂಟೆಗೆ ಕೃಷ್ಣ ಜನ್ಮಾಷ್ಟಮಿ ಪೂಜಾ ಕೈಂಕರ್ಯಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿದ್ದು, ಆಸಕ್ತರು ತನು, ಮನ, ಧನಗಳಿಂದ ಸಹಕರಿಸಬೇಕು ಎಂದು ಭಾವಾನಮಠದ ಧರ್ಮದರ್ಶಿಯಾದ ಜಗನ್ನಾಥದಾಸ ಬಾವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶರಣ ಸಾಹಿತ್ಯ ಸಂಗಮ ಕಾರ್ಯಕ್ರಮ
ಹಾನಗಲ್ಲ: ಶ್ರಾವಣ ಮಾಸದ ನಿಮಿತ್ತ ನಡೆಯುತ್ತಿರುವ ಮನೆ-ಮನೆಯಲ್ಲಿ ಶರಣ ಸಾಹಿತ್ಯ ಸಂಗಮ ಕಾರ್ಯಕ್ರಮ ತಾಲೂಕಿನ ಶೇಷಗಿರಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆ. 27ರಂದು ಸಂಜೆ 7ಕ್ಕೆ ನಡೆಯಲಿದೆ. ಮಂಗಳವಾರ ತಾಲೂಕಿನ ಶೇಷಗಿರಿ ಗ್ರಾಮದ ಗಜಾನನ ಯುವಕ ಮಂಡಳ, ತಿಳವಳ್ಳಿ ಮುರುಘರಾಜೇಂದ್ರ ಕಲ್ಮಠ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಿಳವಳ್ಳಿ ಗ್ರಾಮೀಣ ಘಟಕ ಇವುಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಲ್ಮಠದ ಶ್ರೀ ಬಸವ ನಿರಂಜನ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಂಸಾರ ಸಮಸ್ಯೆಯಲ್ಲ-ಸಾಮರಸ್ಯ ಎಂಬ ವಿಷಯದ ಕುರಿತು ಉಪನ್ಯಾಸಕ ಎಂ.ಎಸ್. ವಿಶ್ವನಾಥ ಉಪನ್ಯಾಸ ನೀಡುವರು. ಗಣ್ಯರಾದ ಜಿ.ಎಂ. ಅಪ್ಪಾಜಿ, ಪಿ.ಎನ್. ನೋಟದ, ನಾಗಪ್ಪ ಕೊಂಡೋಜಿ, ಸಿದ್ದಪ್ಪ ಬಣಕಾರ ಪಾಲ್ಗೊಳ್ಳುವರು.
ಇಂದು ವಿದ್ಯುತ್ ವ್ಯತ್ಯಯ
ರಾಣಿಬೆನ್ನೂರು: ನಗರದ ಹಲಗೇರಿ ರಸ್ತೆಯಲ್ಲಿರುವ 220 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-15 ಮತ್ತು ಎಫ್-13 ವಿದ್ಯುತ್ ವಿತರಣಾ ಕೇಂದ್ರದ ಮಾರ್ಗಗಳ ಮೇಲೆ ತುರ್ತು ಬದಲಿ ಮಾರ್ಗಗಳ ನಿರ್ಮಾಣ ಕಾಮಗಾರಿ ನಿರ್ವಹಿಸಲೇಬೇಕಾಗಿರುವ ಕಾರಣ ಈ 2 ಮಾರ್ಗಗಳಿಗೆ ಸಂಬಂಧಿಸಿದ ಪ್ರದೇಶಗಳಾದ ಮಾರುತಿ ನಗರ, ವಿರಭದ್ರೇಶ್ವರ ನಗರ, ಮಿನಿ ವಿಧಾನಸೌಧ, ಸಿದ್ದೇಶ್ವರ ನಗರ, ಕೋಟೆ ಪ್ರದೇಶ ಸೇರಿದಂತೆ ದೇವರಗುಡ್ಡ ರಸ್ತೆಗೆ ಒಳಪಟ್ಟಿರುವ ಮಾರ್ಗಗಳು ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿಯು ಆ. 27ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಕಾರಣ ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.