ಹಾವೇರಿ

30ಕ್ಕೆ ಶಿವ ಪತ್ತಿನ ಸಹಕಾರ ಸಂಘ ಕಟ್ಟಡ ಉದ್ಘಾಟನೆ: ಬಸವಂತಪ್ಪ

Published On :

ಹಾವೇರಿ: ಅಶ್ವಿನಿ ನಗರದಲ್ಲಿ ನಿರ್ಮಿಸಲಾಗಿರುವ ಶಿವಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆ. 30ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಶ್ರೀ ತರಳುಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಸವಂತಪ್ಪ ಹೆಡಿಯಾಲ ತಿಳಿಸಿದರು.
ನಂತರ ಹಾನಗಲ್‌ನ ಕೃಷ್ಣ ಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಪತ್ತಿನ ಭದ್ರತಾ ಕೊಠಡಿ ಉದ್ಘಾಟಿಸಲಿದ್ದು, ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಕ್ಯಾಶ್ ಕೌಂಟರ್‌ನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಯು.ಬಿ. ಬಣಕಾರ, ಅಖಿಲ ಕರ್ನಾಟಕ ಸಾಧು ಸದ್ಧರ್ಮ ವೀರಶೈವ ಸಂಘದ ರಾಜ್ಯಾಧ್ಯಕ್ಷ ಕೆ.ಆರ್. ಜಯದೇವಪ್ಪ, ಹಿರೇಕೆರೂರು ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಇತರರು ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಅಖಿಲ ಕರ್ನಾಟಕ ಸಾದರ-ಸಮಾಜ ಹಿತವರ್ಧಕ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಬಿ. ಕಳ್ಳಿಹಾಳ, ಸಾಧು ಸದ್ಧರ್ಮ ವೀರಶೈವ ಸಂಘದ ಹಾವೇರಿ ತಾಲೂಕು ಅಧ್ಯಕ್ಷ ಇ.ಎಂ. ಬಾಳಿಕಾಯಿ, ಸಹಕಾರ ಸಂಘಗಳ ಉಪನಿಬಂಧಕ ಪಿ.ಎಂ. ನಾಗಶಯನ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಶಿಕಲಾ ಪಾಳೇದ ಆಗಮಿಸುವರು.
ಇದೇ ಸಂದರ್ಭದಲ್ಲಿ ಗಣ್ಯರಾದ ಸಂಗೂರಿನ ಪರಮಣ್ಣ ಹೂವಪ್ಪ ಬಸೇಗಣ್ಣಿ, ದೇವಗೇರಿಯ ಕೊಟ್ರಪ್ಪ ಉಳಿವೆಪ್ಪ ಕಡ್ಲಿ, ಪುಟ್ಟನಗೌಡ ಮಲ್ಲನಗೌಡ ಪಾಟೀಲ, ಸಂಕಪ್ಪ ನಿಂಗಪ್ಪ ಹಾವೇರಿ, ನಿಂಗಪ್ಪ ಮಲ್ಲಪ್ಪ ಶೀತಾಳದ, ಎಸ್‌ಎಫ್‌ಎನ್ ಗಾಜಿಗೌಡ್ರ, ಗುತ್ತಿಗೆದಾರ ಪರಶುರಾಮ ಬೆಳಲದವರ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಮಲ್ಲೇಶಪ್ಪ ಹಾವೇರಿ, ನಿರ್ದೇಶಕರಾದ ಶೈಲೇಶಗೌಡ ಬಿಷ್ಟನಗೌಡರ, ರವೀಂದ್ರಗೌಡ ಪಾಟೀಲ, ಮಂಜುನಾಥ ಬಸೇಗಣ್ಣಿ, ಮಂಜುನಾಥ ಶೀತಾಳದ, ಕೊಟ್ರಪ್ಪ ಕಡ್ಲೇರ, ಶೇಖರಗೌಡ ಗಿರಿಗೌಡರ, ನಾಗೇಂದ್ರಪ್ಪ ಮುದ್ದಿ, ಪುಷ್ಪಾ ಅಂಗರಗಟ್ಟಿ, ವೆಂಕಟೇಶ ವೆಲ್ಕೂರ ಹಾಗೂ ಚನಬಸಪ್ಪ ಅಂಗರಗಟ್ಟಿ, ಸಂಘದ ವ್ಯವಸ್ಥಾಪಕ ಶಂಕರಗೌಡ ಅಗಸನಹಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.