ಬಸ್ ಸೌಕರ್ಯಕ್ಕಾಗಿ ವಿದ್ಯಾರ್ಥಿಗಳಿಂದ ಹೆದ್ದಾರಿ ಸಂಚಾರ ತಡೆ
ಹಾವೇರಿ: ಇಲ್ಲಿಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ಮುಂಜಾನೆ ವಿದ್ಯಾರ್ಥಿಗಳು ಎಬಿವಿಪಿ ನಗರ ಶಾಖೆ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಪರದಾಟ ನೋಡಿ ಇಂದು ಇಜಾರಿಲಕಮಾಪುರದಿಂದ ಪ್ರತಿಭಟನೆ ಪ್ರಾರಂಭವಾಗಿ ಸಿ.ಬಿ.ಕೊಳ್ಳಿ ಕಾಲೇಜಿನ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯನ್ನ್ನು ಒಂದೂವರೆ ಗಂಟೆಗಿಂತ ಹೆಚ್ಚು ಕಾಲ ರಸ್ತೆ ತಡೆ ಮಾಡಲಾಯಿತು.
ಪ್ರತಿಭಟನೆಯನ್ನು ಗಮನಿಸಿ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಆದ ಶ್ರೀ ಸತೀಶ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಶಾಂತಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಿದಾಗ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ಬಸ್ಸಿನ ಸೌಲಭ್ಯ ಇರುವುದಿಲ್ಲ ಮತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಂತ್ರಿಕ ವಿದ್ಯಾಲಯದಲ್ಲಿ ಓದುತ್ತಿದ್ದು, ಅದರಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್ಗಳನ್ನ್ನು ಮಾಡಿಸಿಕೊಂಡಿರುತ್ತಾರೆ. ಬಸ್ಸಿನ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಲೋಕಲ್ ಟಮ್ ಟಮ್ ಗಳಿಗೆ ಪ್ರತಿನಿತ್ಯ 20 ರುಪಾಯಿಗಳನ್ನ್ನು ಕೊಟ್ಟು ಹೋಗಬೇಕಾಗಿದೆ. ಅನೇಕ ಸಲ ಡಿಪೋ ಮ್ಯಾನೇಜರ್ ಅವರಿಗೆ ಸಮಸ್ಯೆ ಹೇಳಿಕೊಂಡರೆ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ರಸ್ತೆ ತಡೆ ಮಾಡಬೇಕಾಯಿತು ಎಂದರು. ವಿಭಾಗ ನಿಯಂತ್ರಣಾಧಿಕಾರಿಗಳು ವಿದ್ಯಾರ್ಥಿಗಳೊಡನೆ ಚರ್ಚೆಮಾಡಿ ನಿಮ್ಮ ಸಮಸ್ಯೆ ಕುರಿತು ತಕ್ಷಣ ಬಗೆಹರಿಸುತ್ತೇವೆ ಎಂದರು. ಮುಂಜಾನೆ 8.15ರಿಂದ 9.15ರ ಒಳಗೆ 4 ಬಸ್ಗಳು, ಮಧ್ಯಾಹ್ನ 2.00 ರಿಂದ 2.30ರ ಒಳಗೆ 2 ಬಸ್ಸುಗಳು ಹಾಗೂ ಸಂಜೆ 4.30ರಿಂದ 5.45ರ ಒಳಗೆ 2 ಬಸ್ ಅವಶ್ಯಕತೆ ಇದ್ದು ಈ ಸಮಸ್ಯೆ ಕುರಿತು ವಿಭಾಗ ನಿಯಂತ್ರಣಾಧಿಕಾರಿಗಳು ಹಾಗೂ ಡಿಪೋ ಮ್ಯಾನೇಜರ್ ಸಮ್ಮುಖದಲ್ಲಿ ಈ ಎಲ್ಲಾ ಸಮಸ್ಯೆಯನ್ನ್ನು ಕುರಿತು ನಾಳೆಯಿಂದ ಪ್ರಾರಂಭಿಸುತ್ತೇವೆ ಎಂದು ಹೇಳಿದರು. ಕಾರ್ಯಕರ್ತರಾದ ಮಮತಾ, ರುದ್ರಮ್ಮ, ಅಮೃತಾ, ವಿಜಯಲಕ್ಷ್ಮೀ, ರಮೇಶ ಕೆ, ಕಿರಣ, ಅಭಿ, ಕವಿರಾಜ, ಪುಟ್ಟರಾಜ, ದೀಪಕ ಹೆಬ್ಬಲಿ, ತಾಲೂಕು ಸಂಚಾಲಕ ನಾಗರಾಜ ಹುರಳಿಕುಪ್ಪಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಗಣೇಶ ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

