ಹಾವೇರಿ

ಸುದ್ದಿ ಸಂಕ್ಷೇಪ

Published On :

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ
ಹಿರೇಕೆರೂರು: ಕೃಷಿ ಇಲಾಖೆಯು 2012-14ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿಗೆ ಹಿರೇಕೆರೂರು ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ ಶುಲ್ಕ ರು. 300, ಪಜಾ, ಪಪಂ ರೈತರಿಗೆ ರು. 75, ಜಿಲ್ಲಾ ಮಟ್ಟಕ್ಕೆ ಸಾಮಾನ್ಯರಿಗೆ ರು. 150 ಪಜಾ, ಪಪಂದವರಿಗೆ ರು. 40 ತಾಲೂಕು ಮಟ್ಟದ ಸಾಮಾನ್ಯ ರೈತರಿಗೆ ರು. 100, ಪಜಾ, ಪಪಂದವರಿಗೆ ರು. 25 ಶುಲ್ಕ ಪಾವತಿಸಬೇಕು. ರಾಜ್ಯ ಮಟ್ಟದ ಕೃಷಿ ಸ್ಪರ್ಧೆಗೆ ಬತ್ತ (ನೀರಾವರಿ), ಮಳೆ ಆಶ್ರಿತ ಬೆಳೆಗಳಾದ ರಾಗಿ, ತೊಗರಿ, ಶೇಂಗಾ, ಸೂರ್ಯಕಾಂತಿ, ಕಡಲೇ, ಮುಂಗಾರು ಜೋಳ, ಹಿಂಗಾರು ಜೋಳ, ನೀರಾವರಿ ಮುಸಕಿನ ಜೋಳ, ಕಬ್ಬು ಗೋದಿ ಈ ಬೆಳೆಗಳನ್ನು ನಿಗಿದಿಪಡಿಸಲಾಗಿದೆ. ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರಿ ಹೈಬ್ರೀಡ್ ಜೋಳ, ಮಳೆ(ಆಶ್ರಿತ), ಜಿಲ್ಲಾ ಮಟ್ಟದ ಸ್ಪರ್ಧೆಗೆ ಮಳೆ ಆಶ್ರಿತ ಗೋವಿನ ಜೋಳ ನಿಗದಿಪಡಿಸಲಾಗಿದೆ. ಪ್ರತಿ ಬೆಳೆಗೂ ಕೃಷಿ ಇಲಾಖೆ ಪ್ರತಿ ಹೆಕ್ಟೇರಿಗೆ ಸ್ಪರ್ಧಾತ್ಮಕ ಇಳುವರಿ ನಿಗದಿಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಮುಂಗಾರು ಹಂಗಾಮಿಗಾಗಿ ಆಗಸ್ಟ್ 31ರೊಳಗಾಗಿ ಹಾಗೂ ಹಿಂಗಾರು ಹಂಗಾಮಿಗಾಗಿ ನವ್ಹಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇಂದು ಗದಗಕ್ಕೆ ಶಂಕ್ರಪ್ಪ
ಗದಗ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಅವರು ಆ. 28ರಂದು ಬೆಳಗ್ಗೆ 9.30 ಗಂಟೆಗೆ ಗದುಗಿಗೆ ಆಗಮಿಸಿ ಆದಿಬಣಜಿಗ ಮತ್ತು ಶಿವಸಿಂಪಿ ಜನಾಂಗದ ಸ್ಥಿತಿಗತಿಯ ಬಗ್ಗೆ ವಿಚಾರಣೆ ಹಾಗೂ ಹಿಂದುಳಿದ ವರ್ಗದ ಮುಖಂಡರುಗಳನ್ನು ಭೇಟಿ ಮಾಡಿ ಚರ್ಚಿಸುವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ವೀಕ್ಷಿಸುವರು. ನಂತರ ಕೊಪ್ಪಳಕ್ಕೆ ಪ್ರಯಾಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಹೊತ್ತಿಗೆ ಬಿಡುಗಡೆ
ಗದಗ: ರಾಜ್ಯದ ನೂತನ ಸರ್ಕಾರವು 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ 100 ದಿನಗಳಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರಗಳನ್ನು ಒಳಗೊಂಡಿರುವ ನೂರು ದಿನ-ನೂರಾರು ನಿರ್ಣಯ ಎನ್ನುವ ಕಿರು-ಹೊತ್ತಿಗೆ ಬಿಡುಗಡೆ ಕಾರ್ಯಕ್ರಮವು ಆ. 28 ರಂದು ಸಂಜೆ 4.30 ಗಂಟೆಗೆ ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಕಿರುಹೊತ್ತಿಗೆ ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಸಕರು, ಜನಪ್ರತಿನಿಧಿಗಳು, ಮತ್ತಿತರರು ಪಾಲ್ಗೊಳ್ಳುವರು. ಸರ್ಕಾರದ ನೂರು ದಿನಗಳ ಈ ಕಿರು-ಹೊತ್ತಿಗೆಯನ್ನು ರಾಜ್ಯ ವಾರ್ತಾ ಇಲಾಖೆ ಹೊರತಂದಿದ್ದು, ಮಹತ್ವದ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ ಉದ್ದೇಶವನ್ನು ಈ ಕಿರುಹೊತ್ತಿಗೆ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.