ಹಾವೇರಿ

ನೂತನ ದಂಪತಿ ಸಾರ್ಥಕ ಜೀವನ ನಡೆಸಿ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 1
ಅತ್ಯಂತ ಶ್ರೇಷ್ಠರೆನ್ನಿಸಿಕೊಂಡಿರುವ ಎಲ್ಲರಿಗೆ ಜನ್ಮ ನೀಡಿರುವ ಪ್ರಾಪಂಚಿಕ ಜೀವನಕ್ಕೆ ಪಾದಾರ್ಪಣೆಗೈಯುತ್ತಿರುವ ನೂತನ ವಧು-ವರರು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವಂತಹ ಸತ್ಪ್ರಜೆಗಳಿಗೆ ಜನ್ಮ ನೀಡುವುದರೊಂದಿಗೆ ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಸಬೇಕೆಂದು ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಹಿರೇಮಠದ ಲಿಂಗೈಕ್ಯ ಗುರುಗಳಾದ ಶಿವಾನಂದ ಶಿವಾಚಾರ್ಯರ 11ನೇ ಪುಣ್ಯಾರಾಧನೆ ನಿಮಿತ್ತ ಬೇಲೂರು ಗ್ರಾಮದ ಸಮಸ್ತ ಸದ್ಭಕ್ತರು ನಡೆಸಿದ ಕುಂಬಾಭಿಷೇಕ ಮತ್ತು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿದ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.
ಅಧ್ಯಾತ್ಮಿಕ ಮತ್ತು ಧಾರ್ಮಿಕವಾಗಿ ಪ್ರಪಂಚದಲ್ಲಿ ಬಾಳಿ ಬದುಕಬೇಕೆಂದೆನ್ನಿಸಿದ ಪ್ರತಿಯೊಬ್ಬ ಮನುಷ್ಯನು ತನ್ನದೆಯಾದ ವಿಚಾರ ಶಕ್ತಿಯಿಂದ ಶ್ರೇಷ್ಠರೆನಿಸಿಕೊಂಡಿದ್ದು ಹಾಗೂ ಎಲ್ಲ ವರ್ಗದ ಜನರಿಗೆ ಜನ್ಮ ನೀಡಿರುವ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಗೈಯುತ್ತಿರುವ ನೂತನ ವಧು-ವರರು ನಾಡಿನ ಸರ್ವತೊಮುಖ ಅಭಿವೃದ್ಧಿಗೆ ದುಡಿಯುವಂತಹ ಮಕ್ಕಳಿಗೆ ಜನ್ಮ ನೀಡುವುದರೊಂದಿಗೆ ತಮ್ಮ ಪ್ರಾಪಂಚಿಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಅಡ್ಡಪಲ್ಲಕ್ಕಿ ಉತ್ಸವ ಭಕ್ತರು ನಡೆಸುವ ಕಾರ್ಯಕ್ರಮವಾಗಿದ್ದು, ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಧಾರ್ಮಿಕ ಭಾವನೆಯುಳ್ಳವರು ಮಾಡುವ ಧರ್ಮಾಚರಣೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವವರನ್ನು ಸರ್ವರು ಸರ್ವ ಕಾಲದಲ್ಲಿ ಗೌರವಿಸುತ್ತಾರೆಂಬುದನ್ನು ನಾಡಿನ ಜನತೆ ತೋರಿಸಿಕೊಡುತ್ತಿದ್ದಾರೆ ಎಂದು ಹೇಳಿದರು. ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಮಠದ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ದುಗ್ಗತ್ತಿ ಹಿರೇಮಠದ ಶ್ರೀಗಳು ಆಶೀರ್ವಚನ ನೀಡಿದರು.  ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ, ಶರಣ ಶಿವಮೂರ್ತೆಪ್ಪ ದಳವಾಯಿಮಠ, ಚನ್ನಬಸಪ್ಪ ಬಣಕಾರ, ರೈತ ಸಂಘದ ಅಧ್ಯಕ್ಷ ದಿಳ್ಳೆಪ್ಪ ಸತ್ಯಪ್ಪನವರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.