ಹಾವೇರಿ

ಪ್ರೊ. ಸಿಎನ್ನಾರ್ ರಾವ್ಗೆ ಸನ್ಮಾನ

Published On :

ಹಾವೇರಿ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೊ. ಸಿಎನ್ಆರ್ ರಾವ್ ಅವರನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾವೇರಿ ಘಟಕದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಬಿ. ಹಿರೇಮಠ, ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಆರ್.ಎಸ್. ಪಾಟೀಲ, ಜಿಲ್ಲಾ ಘಟಕದ ಕಾರ್ಯದರ್ಶಿ ಎ.ಎಚ್. ಕಬ್ಬಿಣಕಂತಿಮಠ, ಕೆ.ಸಿ. ಕುಲಕರ್ಣಿ, ಎಂ.ಜಿ. ಹಿರೇಮಠ, ಜಿ.ಎಸ್. ಹತ್ತಿಮತ್ತೂರ, ವಿ.ಎಂ. ಗಡ್ಡದೇವರಮಠ, ರಜಗೌಡ ಪಾಟೀಲ ಇದ್ದರು.
ಬಾಲಚಂದ್ರ ಶಾಸ್ತ್ರಿ ನಿಧನ: ಬ್ರಾಹ್ಮಣ ಸಭಾ ಸಂತಾಪ
ಹಾನಗಲ್ಲ: ಸಂಸ್ಕೃತ ವಿದ್ವಾಂಸ ಧಾರವಾಡದ ಪಂ. ಬಾಲಚಂದ್ರ ಶಾಸ್ತ್ರಿಗಳ ನಿಧನಕ್ಕೆ ಹಾನಗಲ್ಲಿನ ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪಟ್ಟಣದ ದತ್ತ ದೇವಸ್ಥಾನದಲ್ಲಿ ಜಿ.ಆರ್. ಪೋತದಾರ ಅವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮಾತನಾಡಿದ ಸಮಾಜದ ಮುಖಂಡ ಘನಶ್ಯಾಮ ದೇಶಪಾಂಡೆ, ಪಂ. ಗಂಗಾಧರಶಾಸ್ತೀ ಕಾಶೀಕರ, ಇಡೀ ಸಮಾಜ ಪ್ರಕಾಂಡ ಪಂಡಿತರೊಬ್ಬರನ್ನು ಕಳೆದುಕೊಂಡಂತಾಗಿದೆ. ಧಾರವಾಡ ಪಾಠಶಾಲೆ ಬಡವಾದಂತಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪಂಡಿತರು, ಸರ್ವ ಶಾಸ್ತ್ರ ಸ್ವತಂತ್ರರು, ಸಂಸ್ಕೃತ ಅಧ್ಯಾಪಕರು ಆಗಿದ್ದ ಬಾಲಚಂದ್ರ ಶಾಸ್ತ್ರೀಗಳು ವಿಪ್ರ ಸಮುದಾಯಕ್ಕೆ ಕಳಶಪ್ರಾಯರಾಗಿದ್ದರು ಎಂದು ಬಣ್ಣಿಸಿದರು. ಸಭೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇ.ಮೂ. ಮುಕುಂದಭಟ್ರು ಕಾಗಿನೆಲ್ಲಿ, ಮುತ್ತಣ್ಣ ನಾಶಿಕ, ಶಾಂತೇಶ ಕರಗುದರಿ, ಆದಿತ್ಯಭಾರತಿ ದೇಶಪಾಂಡೆ, ಗಿರೀಶ ದೇಶಪಾಂಡೆ, ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಕೆ.ಎಸ್. ಕುಲಕರ್ಣಿ(ಅಪ್ಪಣ್ಣ), ಕಾರ್ಯದರ್ಶಿ ವಿದ್ಯಾಶಂಕರ ದೇಶಪಾಂಡೆ, ಎಂ.ಕೆ. ಪಾರಗಾಂವಕರ, ಕೃಷ್ಣಾ ಪೂಜಾರ, ಲಕ್ಷ್ಮಣ ಪೂಜಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.