ಹಿರೇಕೆರೂರಲ್ಲೂ ಬೀಗಮುದ್ರೆ
ಹಿರೇಕರೂರು: ರೈತ ಸಂಘದ ಅವಿರತ ಹೋರಾಟದ ಫಲವಾಗಿ ಮಂಜೂರಾಗಿರುವ ಬೆಳೆ ವಿಮೆ ಹಣವನ್ನು ಸಹಕಾರಿ ಸಂಘಗಳ ಮೂಲಕ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೆಸಿಸಿ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳು, ಸಹಕಾರಿ ಸಂಘಗಳ ಮೂಲಕ ರೈತರು ಬೆಳೆ ವಿಮೆ ಕಂತು ಪಾವತಿಸಿದ್ದು, ರೈತರ ಹೋರಾಟದ ಫಲವಾಗಿ ಸರ್ಕಾರ ರು. 88 ಕೋಟಿ ಬೆಳೆ ವಿಮೆ ಮಂಜೂರು ಮಾಡಿದೆ. ಆದರೆ ಕೆಸಿಸಿ ಬ್ಯಾಂಕಿನಲ್ಲೇ ಖಾತೆ ತೆರೆದು, ಬೆಳೆ ವಿಮೆ ಹಣ ಪಡೆಯಬೇಕು ಎಂದು ಆದೇಶಿಸುವ ಮೂಲಕ ರೈತರಲ್ಲಿ ಗೊಂದಲ ಸೃಷ್ಟಿಸಿ, ಅನ್ಯಾಯ ಮಾಡುತ್ತಿದ್ದಾರೆ. ಯಾವ ಬ್ಯಾಂಕ್ನಲ್ಲಿ ಪ್ರೀಮಿಯಂ ತುಂಬಿರುತ್ತಾರೋ, ಅದೇ ಬ್ಯಾಂಕ್ನಲ್ಲಿ ವಿಮೆ ಹಣ ಪಡೆಯುವುದು ರೈತರ ಹಕ್ಕು. ಯಾವ ದುರುದ್ದೇಶದಿಂದ ಕೆಸಿಸಿ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕೆಂದು ಸೂಚಿಸಿದ್ದಾರೆ? ಈ ಸರ್ವಾಧಿಕಾರಿ ಧೋರಣೆಯನ್ನು ಸಂಘ ಖಂಡಿಸುತ್ತದೆ ಎಂದರು.
ಇನ್ನಷ್ಟು ವಿಳಂಬಕ್ಕೆ ಕಾರಣ
ವಿಪರೀತ ಮಳೆ, ಕಳಪೆ ಬೀಜದಿಂದಾಗಿ ಹತ್ತಿ, ಗೋವಿನ ಜೋಳದ ಇಳುವರಿ ಕಡಿಮೆ ಆಗಿದೆ. ದರವೂ ಕುಸಿದಿದ್ದು, ರೈತರು ನಲುಗಿ ದ್ದಾರೆ. ಖಾತೆ ತೆರೆದು, ಬೆಳೆವಿಮೆ ಪಡೆಯುವುದು ಇನ್ನಷ್ಟು ವಿಳಂಬಕ್ಕೆ ಕಾರಣವಾಗಲಿದೆ. ಸಹಕಾರಿ ಸಂಘಗಳ ಮೂಲಕವೇ ರೈತರ ಖಾತೆಗಳಿಗೆ ಬೆಳೆವಿಮೆ ಹಣ ಜಮೆ ಮಾಡಬೇಕು. ಇಲ್ಲದಿದ್ದಲ್ಲಿ ಎಲ್ಲ ಕೆಸಿಸಿ ಬ್ಯಾಂಕ್ಗಳಿಗೆ ಬೀಗ ಜಡಿದು, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ತುಷಾರ ಹೊಸೂರ್ಗೆ ಮನವಿ ಸಲ್ಲಿಸಿದರು. ರೈತಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಪ್ರಧಾನ ಕಾರ್ಯದರ್ಶಿ ಗಂಗನಗೌಡ ಮುದಿಗೌಡ್ರ, ಗೌರವಾಧ್ಯಕ್ಷ ಎಸ್.ವಿ. ಚಪ್ಪರದಳ್ಳಿ, ಸಹ ಕಾರ್ಯದರ್ಶಿ ಶಾಂತನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಶಂಕ್ರಪ್ಪ ಶಿರಗಂಬಿ, ರೈತರಾದ ಮಲ್ಲನಗೌಡ ಮಾಳಗಿ, ಮಲ್ಲೇಶಪ್ಪ ಶಿರಗೇರಿ, ಹೂವನಗೌಡ ಮಳವಳ್ಳಿ, ಮಾದೇಗೌಡ ಪಾಟೀಲ, ಜಗದೀಶ ಶಿರಗಂಬಿ, ಬೂದೇಗೌಡ ಸೊರಟೂರ, ಪರಮೇಶ್ಪ ಮಡಿವಾಳರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

