ಮಕ್ಕಳನ್ನು ಪರಿಸರ ಸಂರಕಕ್ಷರನ್ನಾಗಿ ಮಾಡಿ: ಕೊಡ್ಲಿ
ಹಾವೇರಿ: ಶಿಕ್ಷಕರು ಶಾಲಾ ಮಕ್ಕಳಲ್ಲಿ ಸ್ವಚ್ಛ ಪರಿಸರ ಮತ್ತು ಮಾಲಿನ್ಯದ ಕುರಿತು ಅರಿವು ಮೂಡಿಸಿ, ಅವರನ್ನು ಪರಿಸರ ಸಂರಕ್ಷಕರನ್ನಾಗಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಬಿ. ಕೊಡ್ಲಿ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಗುರುಭವನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಂಘಟಿಸಿದ ಜಿಲ್ಲಾ ಮಟ್ಟದ ಪರಿಸರಮಿತ್ರ ಶಾಲೆ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆ ಶಿಕ್ಷಣ ಇಲಾಖೆಯಿಂದಲೇ ಆರಂಭಗೊಳ್ಳುತ್ತದೆ. ಎಲ್ಲ ಯೋಜನೆಗಳ ಫಲ ಮಕ್ಕಳಿಗೆ ಸಿಗಬೇಕು. ಶಾಲಾ ಆವರಣದಲ್ಲಿ ವಿವಿಧ ಹಣ್ಣು ಹಾಗೂ ಔಷಧಯುಕ್ತ ಮರಗಳನ್ನು ಬೆಳೆಸಿ, ಮಕ್ಕಳಲ್ಲಿ ಪರಿಸರ ಸ್ನೇಹಿ ಮನೋಭಾವವನ್ನು ಬಿತ್ತಬೇಕು. ಶಾಲಾ ಆವರಣ ಗಿಡ-ಮರ ಮತ್ತು ಹೂಬಳ್ಳಿಗಳಿಂದ ಆಕರ್ಷಣೀಯವಾಗಿರಲಿ. ಇದೊಂದು ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಹಾವೇರಿ ಜಿಲ್ಲಾ ಪರಿಸರ ಅಧಿಕಾರಿ ಈ. ಪ್ರಕಾಶ ಮಾತನಾಡಿ, 2013-14ನೇ ಸಾಲಿನಲ್ಲಿ 10 ಲಕ್ಷ ಪರಿಸರ ಸಂರಕ್ಷಣಾ ಯೋಧರ ಪಡೆ ನಿರ್ಮಾಣಮಾಡುವುದು ಮಂಡಳಿಯ ಗುರಿ. ಜಿಲ್ಲೆಯ 1300 ಶಾಲೆಗಳಿಗೆ ಪತ್ರ ಹಾಗೂ ದೂರವಾಣಿ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಪಡಿಸಿದ್ದರೂ ಶಾಲೆಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗಿರುವುದು ಕಳವಳಕಾರಿಯಾಗಿದೆ. ಸ್ವಮೌಲ್ಯಮಾಪನದ ಪ್ರಶ್ನಾವಳಿಯನ್ನು ಜ. 5ರೊಳಗಾಗಿ ಕಚೇರಿಗೆ ತಲುಪಿಸಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಗೌಡ ಗೊಲ್ಲರ, ಆಶಾಕಿರಣ ಸಂಸ್ಥೆ ಅಧ್ಯಕ್ಷ ಮುತ್ತುರಾಜ ಮಾದರ ಹಾಗೂ ಶಿಕ್ಷಕ ಶಿವಕುಮಾರ ನಡುವಿನಮಠ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ಜಿಲ್ಲೆಯ 52 ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕಿ ಕೆ.ವಿ. ಹಂಜಿ ಪ್ರಾರ್ಥಿಸಿದರು. ಪರಿಸರ ಇಲಾಖೆ ಸಿಬ್ಬಂದಿ ದತ್ತಾತ್ರೇಯ ಶಾನಭಾಗ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

