ಬಾಡ ಅಭಿವೃದ್ಧಿಗೆ ಅನುದಾನ ನೀಡಿ
ಶಿಗ್ಗಾಂವಿ: ಕನಕದಾಸರ ಜನ್ಮಸ್ಥಳ ತಾಲೂಕಿನ ಬಾಡ ಗ್ರಾಮದ ಕನಕರ ಅರಮನೆಯಲ್ಲಿ ದೀಪಾಲಂಕರ, ಡಿಜಿಟಲ್ ಲೈಬ್ರರಿ ಸ್ಥಾಪನೆ ಕಾಮಗಾರಿಗಳಿಗೆ ರು. 1.50 ಕೋಟಿ ಬಿಡುಗಡೆ ಮಾಡುವಂತೆ ಶಾಸಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯಗೆ ಮನವಿ ಅರ್ಪಿಸಿದರು.
ಅರಮನೆಯಲ್ಲಿ ದೀಪಾಲಂಕಾರ ಮಾಡಬೇಕು. ಕರ್ನಾಟಕ ವಿಶ್ವವಿದ್ಯಾಲಯ ಕನಕ ಪೀಠದ ಅಧ್ಯಯನ ಶಾಖೆ ತೆರೆಯಬೇಕು. ಇದಕ್ಕೆ ಪೂರಕವಾಗಿ ಡಿಜಿಟಲ್ ಲೈಬ್ರರಿ ನಿರ್ಮಾಣ ಕಾಮಗಾರಿಗೆ ರು. 1 ಕೋಟಿ ಬಿಡುಗಡೆ ಮಾಡಬೇಕು. ಕನಕರ ಅರಮನೆಯ ದರ್ಬಾರ್ ಹಾಲ್‌ನ್ನು ತತ್ವಜ್ಞಾನಿಗಳ ಸಭಾಂಗಣವಾಗಿ ಪರಿವರ್ತಿಸಿ, ಕನಕದಾಸ ಹಾಗೂ ಸಮಕಾಲಿನ ತತ್ವಜ್ಞಾನಿಗಳನ್ನು ಪರಿಚಯಿಸುವ ಯೋಜನೆಗೆ ರು. 1 ಲಕ್ಷ, ಕನಕದಾಸರ ಜನ್ಮಸ್ಥಳಕ್ಕೆ ಹೋಗುವ ಬಂಕಾಪುರ-ಬಾಡ ಮತ್ತು ಕುರ್ಸಾಪುರ-ಬಾಡ ರಸ್ತೆ ಅಭಿವೃದ್ಧಿಗೆ ರು. 36 ಲಕ್ಷ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ಬಿಡುಗಡೆಗೂ ಒತ್ತಾಯಿಸಿರುವ ಬೊಮ್ಮಾಯಿ, ಕನಕ ಕಳಪೆ ಬೀಜ ಬಿತ್ತನೆಯಿಂದ ಕ್ಷೇತ್ರದಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಅಥವಾ ಕಂಪನಿಯಿಂದ ಪರಿಹಾರ ಕೊಡಿಸಬೇಕು. ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ಅನಿವಾರ್ಯ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

