ಹಾವೇರಿ

ಜಿಎಸ್ಸೆಸ್ ಕುವೆಂಪು ಪಡಿಯಚ್ಚು: ಕೋರಗಲ್

Published On :

ಹಾವೇರಿ: ಪ್ರೊ, ಜಿ.ಎಸ್. ಶಿವರುದ್ರಪ್ಪ ಸಾಹಿತ್ಯದ ಯಾವುದೇ ಪಂಗಡದಲ್ಲಿ ಗುರುತಿಸಿಕೊಂಡವರಲ್ಲ. ಕನ್ನಡ ಕಟ್ಟುವ, ಬೆಳೆಸುವ, ಚಿಂತಿಸುವ ಕ್ರಮದಲ್ಲಿ ಕುವೆಂಪು ಪಡಿಯಚ್ಚು ಆಗಿದ್ದರು ಎಂದು ಸಾಹಿತಿ ಪ್ರೊ, ಕೋರಗಲ್ ವಿರೂಪಾಕ್ಷಪ್ಪ ಬಣ್ಣಿಸಿದರು.
ಜಿಲ್ಲಾ ನೌಕರರ ಸಂಘದ ಭವನದಲ್ಲಿ ನಡೆದ ಜಿಎಸ್ಸೆಸ್ ನಿಧನಕ್ಕೆ ಸಂತಾಪ ಸೂಚಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗೆಳೆತನಕ್ಕೆ ಕಣವಿ ಹಾಗೂ ಶಿವರುದ್ರಪ್ಪ ಮಾದರಿಯಾಗಿದ್ದರು. ನಿಷ್ಠುರತೆ ಮೈಗೂಡಿಸಿಕೊಂಡಿದ್ದರೂ ವಿನಯ-ವಿವೇಕವನ್ನು ಜಿಎಸ್ಸೆಸ್ ಎಂದೂ ಬಿಡಲಿಲ್ಲ. ವ್ಯಕ್ತಿತ್ವ ಹಾಗೂ ಬರೆಹದ ಮೂಲಕ ಅವರು ಆದರ್ಶಪ್ರಾಯರಾಗಿದ್ದಾರೆ ಎಂದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಡಿಗೋದಿ ಮಾತನಾಡಿ, ಮನಸ್ಸುಗಳ ಮಧ್ಯೆ ದೀಪ ಹಚ್ಚಿದ ಕವಿ ಜಿಎಸ್ಸೆಸ್. ಕಾವ್ಯ ಮತ್ತು ಸಾಹಿತ್ಯ ವಿಮರ್ಶೆಯನ್ನು ಆಸಕ್ತಿಯ ನೆಲೆಯನ್ನಾಗಿ ಮಾಡಿಕೊಂಡ ಅವರು, ಸಾಂಸ್ಕೃತಿಕ ಕ್ರಿಯಾಶೀಲತೆಯ ಸಮನ್ವಯಕಾರರಾಗಿದ್ದರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಗೌಡ ಗೊಲ್ಲರ, ಹಿರಿಯ ಕವಿ ಗಂಗಾಧರ ನಂದಿ, ಜಿಎಸ್ಸೆಸ್ ಮನುಷ್ಯ ಪ್ರೀತಿ ತುಂಬಿದ ಕವಿ ಎಂದು ಸ್ಮರಿಸಿದರು. ಕದಳಿ ವೇದಿಕೆಯ ಬಸಮ್ಮ ಹಳಕೊಪ್ಪ, ಪಿ.ಸಿ. ಹಿರೇಮಠ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಮುಂತಾದವರು ಜಿಎಸ್ಸೆಸ್ ಸಾಧನೆಗಳನ್ನು ವಿವರಿಸಿದರು.
ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಿ.ಎಸ್. ಹಾಲಪ್ಪನವರಮಠ, ಕಾರ್ಯದರ್ಶಿ ಸಿ.ವಿ. ಹಿರೇಮಠ, ಖಜಾಂಚಿ ಶಂಕರ ಸುತಾರ, ಸವಣೂರು ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ವಿಜಯಲಕ್ಷ್ಮೀ ಶಾಂತಗಿರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಲ್. ಕಾಡದೇವರಮಠ, ನಿವೃತ್ತ ಎಂಜಿನಿಯರ್ ಎಸ್.ಬಿ. ಬಾರ್ಕಿ, ಕಲಾವಿದರಾದ ಕರಿಯಪ್ಪ ಹಂಚಿನಮನಿ, ಪರಮೇಶ್ವರ ಹುಲ್ಲಮನಿ, ಪ್ರಭು ಹಿಟ್ನಳ್ಳಿ, ಕಲಾವಿದರಾದ ಸಿ.ಎ.ಕೂಡಲಮಠ, ಕೆ.ಆರ್. ಹಿರೇಮಠ, ಜಿ.ಎನ್. ಜಾವೂರ, ಎಸ್.ವೈ. ಗುಬ್ಬಣ್ಣನವರ, ಕಲಾವಿದರ ಬಳಗದ ಎಸ್.ಆರ್. ಹಿರೇಮಠ, ಶಿವಣ್ಣ ಹಟ್ಟಿಯವರ, ವಿ.ಎಂ. ಪತ್ರಿ, ಸಿ.ಎಸ್. ಮರಳಿಹಳ್ಳಿ, ರೇಣುಕಾ ಗುಡಿಮನಿ, ಸುರೇಶ ಹೊಸಮನಿ, ನಾಗರಾಜ ದೇಸಳ್ಳಿ, ಮಹಾಂತೇಶ ಮರಿಗೊಳ್ಳಪ್ಪನವರ, ಎಸ್.ಎಂ. ಬಡಿಗೇರ, ಎಸ್.ಎಲ್. ಬೆನ್ನೂರ, ನಾಗರಾಜ ನಡುವಿನಮಠ, ಆರ್.ಸಿ. ನಂದಿಹಳ್ಳಿ, ಕಿರಣ ಮಾಸಣಗಿ, ಲಿಂಗರಾಜ ಸೊಟ್ಟಪ್ಪನವರ, ಜಿ.ಎಂ. ಓಂಕಾರಣ್ಣನವರ, ಶಿವರಾಜ, ಎಂ. ಪರಶುರಾಮಪ್ಪ. ಬಿ.ಎಂ. ಕಾಡಪ್ಪನವರ ಡಾ, ಜಿಎಸ್ಸೆಸ್‌ಗೆ ಸಂತಾಪ ಸೂಚಿಸಿದರು.
ವಿಮರ್ಶೆಗೆ ಬೌದ್ಧಿಕ ಚೌಕಟ್ಟು ನೀಡಿದ ಜಿಎಸ್ಸೆಸ್: ತವರದ
ಬ್ಯಾಡಗಿ: ಕನ್ನಡ ವಿಮರ್ಶೆಗೆ ಬೌದ್ಧಿಕ ಚೌಕಟ್ಟನ್ನು ಕೊಟ್ಟ ಕೀರ್ತಿ ಪ್ರೊ, ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಲ್ಲುತ್ತದೆ. ಸರಳ-ಸ್ನೇಹಜೀವಿಯಾಗಿದ್ದ ಅವರ ನಿಧನ ಕನ್ನಡ ಸಾಹಿತ್ಯ ಲೋಕವನ್ನು ಬಡವಾಗಿಸಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ. ತವರದ ಹೇಳಿದರು.
ಪಟ್ಟಣದ ಕನ್ನಡಪರ ಸಂಘಟನೆಗಳು ಆಯೋಜಿಸಿದ್ದ ಜಿ.ಎಸ್. ಶಿವರುದ್ರಪ್ಪ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಕಾರ್ಯದರ್ಶಿಗಳಾದ ಬಿ.ಎಫ್. ದೊಡ್ಡಮನಿ, ವಿ.ವಿ. ಮಾತನವರ, ಜಿಲ್ಲಾ ಚುಸಾಪ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ತಾಲೂಕು ಸಹೃದಯ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಬಿ.ಎಂ. ಜಗಾಪುರ, ತಾಲೂಕು ಜನಪದ ಪರಿಷತ್ ಅಧ್ಯಕ್ಷ ವೈ.ಟಿ. ಹೆಬ್ಬಳ್ಳಿ, ಕಲಾವಿದ ಅಡಿವೆಪ್ಪ ಕುರಿಯವರ, ಎಂ.ವಿ. ನೆಲವಿಗಿ, ಡಾ, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಮಂಜುನಾಥ ಶಿರವಾಡಕರ, ಎಂ.ಎಂ. ಪಾಟೀಲ, ಮಲ್ಲಿಕಾರ್ಜುನ ಬಡಿಗೇರ, ಕದಳಿ ವೇದಿಕೆ ಅಧ್ಯಕ್ಷೆ ಶಶಿಕಲಾ ಪಾಟೀಲ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ, ನಾಗರಾಜ ಗುತ್ತಲ, ಪ್ರೊ, ಸಿ. ಶಿವಾನಂದಪ್ಪ, ಡಾ, ಪ್ರೇಮಾನಂದ ಲಕ್ಕಣ್ಣನವರ, ಪ್ರೊ, ಪಿ.ಎಂ. ರಾಮಗಿರಿ, ಶಂಕರಗೌಡ ಪಾಟೀಲ, ವೀರಭದ್ರಗೌಡ ಹೊಮ್ಮರಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.