ಹಾವೇರಿ

ಬೀಜೋತ್ಪಾದನೆ ನಾವೇ ಮಾಡಿಕೊಳ್ಳಬೇಕು: ಬೇವಿನಮರದ

Published On :

ಶಿಗ್ಗಾಂವಿ: ಕೊಟ್ಟಿಗೆ ಗೊಬ್ಬರ ಬಳಸಿ, ಹಿರಿಯರಂತೆ ನಮಗೆ ಸಾಕಾಗುವಷ್ಟು ಬೀಜಗಳನ್ನು ನಾವೇ ಉತ್ಪಾದಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತ, ರೈತ ಮಹಿಳೆಯರಿಗೆ ಕೃಷಿ ತಾಂತ್ರಿಕ ವಿಚಾರ ಸಂಕಿರಣ, ಕಿಸಾನ್ ಗೋಷ್ಠಿ ಉದ್ಘಾಟಿಸಿದ ಅವರು, ಹಿರಿಯರು ಉತ್ತಮವಾಗಿ ಬೆಳೆದ ಪೈರನ್ನು ಬೀಜಕ್ಕಾಗಿ ಬಳಸುತ್ತಿದ್ದರು. ನಾವೂ ಇಂಥ ಪದ್ಧತಿ ಮುಂದುವರಿಸಬೇಕು ಎಂದರು.
2012-13ನೇ ಸಾಲಿನ ಸಮಗ್ರ ಕೃಷಿ ಪದ್ಧತಿ, ಬೆಳೆ ವೃದ್ಧೀಕರಣದಲ್ಲಿ ಕೃಷಿ ಪಂಡಿತ ಪ್ರಶಸ್ತಿಗೆ ಆಯ್ಕೆಯಾದ ಕುನ್ನೂರ ಗ್ರಾಮದ ಜಯದೇವ ಎಲ್ಲಪ್ಪ ಅಗಡಿ ಹಾಗೂ ಕುರ್ಸಾಪುರ ಗ್ರಾಮದ ನಿಂಗಪ್ಪ ಜಿವಾಜಿ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಸುಜಾತಾ ಕಲ್ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ಶಶಿಧರ ಹೊನ್ನಣ್ಣವರ, ಸರೋಜಮ್ಮ ಆಡಿನ, ತಾಪಂ ಉಪಾಧ್ಯಕ್ಷ ನಿಂಗಣ್ಣ ಹರಿಜನ, ಉಷಾ ಬಿಳೆಕುದರಿ, ಉಮಾ ಡವಗಿ, ತಿಪ್ಪಣ್ಣ ಸಾತಣ್ಣವರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನಮರೆಡ್ಡಿ ನಡುವಿನಮನಿ. ಸಿ.ಡಿ. ಪಾಟೀಲ, ಗಣೇಶ ನಾಯಕ, ಶಾಂತಮ ಬಮ್ಮನಹಳ್ಳಿ, ನಿಂಗಪ್ಪ ಜವಳಿ, ಲಕ್ಷ್ಮವ್ವ ತೋಟದ, ಸಹಾಯಕ ಕೃಷಿ ನಿರ್ದೇಶಕ ಜಿ. ಬಸವರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.