ಮೂಢನಂಬಿಕೆ ತೊರೆದರೆ ನೆಮ್ಮದಿ
ಹಾವೇರಿ: ರಾಹುಕಾಲ, ಗುಳಿಕಕಾಲ ಬಿಟ್ಟು ಬದುಕಿದರೆ ನಿತ್ಯ ಪ್ರಳಯದಿಂದ ರಕ್ಷಣೆ ಪಡೆದು ನೆಮ್ಮದಿ ಜೀವನ ಸಾಗಿಸಬಹುದು ಎಂದು ಖ್ಯಾತ ಕಾದಂಬರಿಕಾರ ನಾ. ಡಿಸೋಜ ಹೇಳಿದರು.
ನಗರದ ಹೊಸಮಠದ ಆವರಣದಲ್ಲಿ ನೈಘಂಟಿನ ಸಿದ್ಧಬಸವ ಮತ್ತು ಲಿಂ. ಅಥಣಿ ಮುರಘೇಂದ್ರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿರುವ ಶರಣ ಸಂಸ್ಕೃತಿ ಉತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ನಿತ್ಯ ಪ್ರಳಯ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನದಿ ತಿರುಳು ಯೋಜನೆಯಿಂದಾಗಿ ಸಮುದ್ರದಲ್ಲಿನ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಇದರಿಂದ ಕೋಟ್ಯಂತರ ಮೀನುಗಳ ಮಾರಣ ಹೋಮವಾಗುತ್ತಿದ್ದು, ಇದೂ ಒಂದು ರೀತಿಯಲ್ಲಿ ಪ್ರಳಯದ ಮುನ್ಸೂಚನೆ ಆಗಿದೆ. ಪ್ರಳಯ ಎಂದಾದರೊಮ್ಮೆ ಬಂದು ಹೋಗುತ್ತದೆ. ಆದರೆ, ನಿತ್ಯ ಪ್ರಳಯ ನಾವು ತಂದುಕೊಳ್ಳುತ್ತೇವೆ. ನಾವು ತಂದುಕೊಳ್ಳುವ ಪ್ರಳಯ ನಮ್ಮನ್ನು ನಿತ್ಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಧಾರವಾಡ ಸ್ಕೋಪ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಕಾಶ ಭಟ್ ಮಾತನಾಡಿ, ಹಳ್ಳಿಗರು ತಮ್ಮ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುವ ಪರಿಸ್ಥಿತಿ ಬಂದಿದ್ದು, ಇದೂ ಒಂದು ರೀತಿಯ ಪ್ರಳಯವಾಗಿದೆ ಎಂದು ವಿಷಾದಿಸಿದರು. ಮೌಲ್ಯ ಪ್ರಳಯ, ಪರಿಸರ ಪ್ರಳಯ ಒಂದು ನಿಟ್ಟಿನಲ್ಲಿ ಪ್ರತಿ ದಿನವೂ ಪ್ರಳಯವಾಗುತ್ತಿದೆ.
ವಿಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಕಾಯಕ ದಾಸೋಹವನ್ನೇ ಮುರುಘಾ ಶರಣರು ಅನುಸರಿಸಿಕೊಂಡು ಬಂದಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ನೀಡಿದೆ.
ಶ್ರೀಮಠದ ಧ್ಯಾನ ಮಂದಿರಕ್ಕಾಗಿ ರು. 50 ಲಕ್ಷ, ಅನ್ನದಾಸೋಹಕ್ಕಾಗಿ ರು. 1 ಕೋಟಿಯನ್ನು ಪ್ರಸಕ್ತ ಬಜೆಟ್‌ನಲ್ಲಿ ತೆಗೆದಿರಿಸಲು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ತಾವೂ ಮಠದ ಅಭಿವೃದ್ಧಿಗಾಗಿ ತಮ್ಮ ನಿಧಿಯಿಂದ ರು. 5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ಚಿತ್ರದುರ್ಗದ ಡಾ. ಮುರುಘಾ ಶರಣರು, ಮನುಷ್ಯನ ಬದುಕಿನಲ್ಲಿ ಅಸಹನೆ, ಅಪನಂಬಿಕೆ, ಅತೃಪ್ತಿಯಿಂದ ನಿತ್ಯ ಬೌದ್ಧಿಕ ಪ್ರಳಯವಾಗುತ್ತಿದೆ. ಇದರಿಂದ ಹೊರಬರಲು ನಿತ್ಯ ಚಿಂತನೆ, ಉತ್ತಮ ಪುಸ್ತಕ ಓದು, ಸಜ್ಜನರ ಸಂಗ ಮಾಡುವಂತೆ ಕರೆ ನೀಡಿದರು. ಹಡಗಲಿ ಗವಿಮಠದ ಶಾಂತವೀರ ಶ್ರೀ, ಹೊಸಮಠದ ಶಾಂತಲಿಂಗ ಶ್ರೀ ಸಮ್ಮುಖ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

