28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ (ಸುದ್ದಿ ಸಂಕ್ಷೇಪ)
ಹಾವೇರಿ: ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಖ್ಯಾತ ವಿಜ್ಞಾನಿ ಡಾ. ಚನ್ನಬಸವೇಶ್ವರ ಏಳಮಗ್ಗದ ಅವರು 'ಸ್ಪಟಿಕಗಳಲ್ಲಿ ದ್ರವದ ಗುಣಗಳನ್ನು ಕಾಣಬಹುದೇ?' ಕುರಿತು ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11ರಿಂದ 2ರ ವರೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ಭಾಷಣ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳು 'ಇಂಧನ ಅಭಾವ - ಸಂಭವನೀಯ ಪರಿಹಾರಗಳು' ಕುರಿತು ವಿಷಯ ಮಂಡಿಸಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತ 3 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ವಿಜ್ಞಾನ ಸಂಘದ ಕಾರ್ಯಾಧ್ಯಕ್ಷ ಪ್ರೊ. ಗೌಸಮುದ್ದೀನ ಯಣ್ಣಿ ತಿಳಿಸಿದ್ದಾರೆ. ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
'ಲೋಕಾ' ಕೋರ್ಟ್ಗೆ ಹಾಜರಾದ ಓಲೇಕಾರ
ಹಾವೇರಿ: ಮಾಜಿ ಶಾಸಕ ನೆಹರು ಓಲೇಕಾರ ಸೋಮವಾರ ಖುದ್ದಾಗಿ ಹಾವೇರಿ ಜಿಲ್ಲೆಯ ಲೋಕಾಯುಕ್ತ ಕೋರ್ಟ್ಗೆ ಹಾಜರಾಗುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಶಾಸಕ ನೆಹರು ಓಲೇಕಾರ, ಅವರ ಪುತ್ರ ಮಂಜುನಾಥ ಓಲೇಕಾರ, ಪುತ್ರಿ ಲಕ್ಷ್ಮೀ ಓಲೇಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಿರೀಶ ತುಪ್ಪದ ವಿರುದ್ಧ ಅಧಿಕಾರ ದುರ್ಬಳಕೆ ಹಾಗೂ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಕಬಳಿಕೆ ಬಗ್ಗೆ ಮುಖಂಡ ಈರಪ್ಪ ಲಮಾಣಿ ದೂರು ದಾಖಲಿಸಿದ್ದರು. ನ್ಯಾಯಾಲಯ ಶಾಸಕ ಓಲೇಕಾರ ಮತ್ತಿತರರಿಗೆ ಸಮನ್ಸ್ ಜಾರಿ ಮಾಡಿತ್ತು. ಸೋಮವಾರ ಎಲ್ಲರೂ ಖುದ್ದು ಹಾಜರಾಗಿದ್ದು, ಪ್ರಕರಣವನ್ನು ಏ. 4ಕ್ಕೆ ಮುಂದೂಡಲಾಗಿದೆ.
ಪೈಪ್ ಬಿದ್ದು ಸಾವು
ಹಾವೇರಿ: ಕೊಳವೆ ಬಾವಿ ಕೊರೆಯುವಾಗ ಅದನ್ನು ಸಮರ್ಪಕವಾಗಿ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಸಹಾಯಕನೋರ್ವನ ಮೇಲೆ ಕಬ್ಬಿಣದ ಪೈಪ್ ಬಿದ್ದು ಆತ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಓರಿಸ್ಸಾ ರಾಜ್ಯದ ಭಾಸ್ಕರ ಘಾಸಿ ತಾಡಂಗಿ (25)ಎಂದು ಗುರುತಿಸಲಾಗಿದೆ. ಈ ಕುರಿತಂತೆ ಕೊಳವೆ ಬಾವಿ ಕೊರೆಯುತ್ತಿದ್ದ ಜಮೀನಿನ ಮಾಲೀಕ ಆನಂದ ಬಣಕಾರ ಕಾಗಿನೆಲೆ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಬೈಕ್ ಅಪಘಾತ: ಸಾವು
ಹಾವೇರಿ: ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿ ನಿಯಂತ್ರಿಸದೇ ಬಿದ್ದಾಗ ತೀವ್ರವಾಗಿ ಗಾಯಗೊಂಡು ನಂತರ ಉಪಚಾರ ಫಲಿಸದೇ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ರಾಣಿಬೆನ್ನೂರಿನ ಹಲಗೇರಿ-ಇಟಗಿ ರಸ್ತೆಯಲ್ಲಿ ಜರುಗಿದೆ. ಮೃತನನ್ನು ಗುಡ್ಡಪ್ಪ ನೀಲಪ್ಪ ಮಾಳಗಿ (30) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

