ಇಂದಿನಿಂದ ಸಚಿವ ಉದಾಸಿ ಪ್ರವಾಸ
ಹಾವೇರಿ: ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಜ. 16ರಂದು ಬೆಳಗ್ಗೆ 9ಕ್ಕೆ ಹಾನಗಲ್ಲ ತಾಲೂಕು ಅರೇಕೊಪ್ಪ ಪಾಳಾ ರಸ್ತೆ ಗುದ್ದಲಿ ಪೂಜೆ, ಅರೆಗೊಪ್ಪ ವಯಾ ಅದರಕೊಪ್ಪ ಗೊಟಗೋಡಿ ರಸ್ತೆ ಗುದ್ದಲಿ ಪೂಜೆ ಹಾಗೂ ಗೊಟಗೋಡಿ ಗ್ರಾಮದ ಕಾಂಕ್ರೀಟ್ ರಸ್ತೆ ಗುದ್ದಲಿ ಪೂಜೆ ಸಮಾರಂಭದಲ್ಲಿ ಭಾಗವಹಿಸುವರು.
ನಂತರ ಹಾನಗಲ್ಲಿನಲ್ಲಿ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸುವರು. ಶೀಗಿಹಳ್ಳಿ- ಸಿಂಗಾಪುರ ರಸ್ತೆ ಗುದ್ದಲಿ ಪೂಜೆ, ಆಡೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ, ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಳಿಕೆ ಕಾಮಗಾರಿ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ನಂತರ ಕೂಡಲದಲ್ಲಿ ಪ್ರೌಢಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಪ್ರೌಢಶಾಲಾ ಕೊಠಡಿ ಉದ್ಘಾಟನೆ ಹಾಗೂ ಮೇಲ್ಮಟ್ಟದ ಜಲಾಗಾರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು. ನರೇಗಲ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಮೇಲ್ಮಟ್ಟದ ಜಲಾಗಾರದ ಶಂಕುಸ್ಥಾಪನೆ ಸಮಾರಂಭಗಳಲ್ಲಿ ಭಾಗವಹಿಸಿ, ಹಾನಗಲ್ಲಿಗೆ ತೆರಳಿ ವಾಸ್ತವ್ಯ ಮಾಡುವರು. 17ರಂದು ಬೆಳಗ್ಗೆ 9ಕ್ಕೆ ಹಾನಗಲ್ಲಿನಿಂದ ಹೊರಟು, 10ಕ್ಕೆ ರಾಣಿಬೆನ್ನೂರು ತಾಲೂಕು ಚಿಕ್ಕಮಾಗನೂರು ಗ್ರಾಮದ ಹತ್ತಿರ ಕುಮುದ್ವತಿ ನದಿಗೆ ನಿರ್ಮಿಸಿರುವ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. 11ಕ್ಕೆ ದೇವರಗುಡ್ಡದಲ್ಲಿ ತುಂಗಾ ಮೇಲ್ದಂಡೆ ಕಾಲುವೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೊಂದಿಗೆ ಭಾಗವಹಿಸಿ, ಮಧ್ಯಾಹ್ನ 3ಕ್ಕೆ ಹಾನಗಲ್ಲಿಗೆ ಆಗಮಿಸಿ, ಸಾರ್ವಜನಿಕರ ಭೇಟಿ, ಕುಂದುಕೊರತೆ ವಿಚಾರಣೆ ನಡೆಸುವರು. ರಾತ್ರಿ 7ಕ್ಕೆ ತಾಲೂಕಿನ ಬಾಳಂಬೀಡದಲ್ಲಿ ಸಿ.ಜಿ. ಬೆಲ್ಲದ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಭಾಗವಹಿಸುವರು. ನಂತರ ಹಾನಗಲ್ಲಿಗೆ ತೆರಳಿ ವಾಸ್ತವ್ಯ ಮಾಡುವರು. 18ರಂದು ಬೆಳಗ್ಗೆ 11ಕ್ಕೆ ಹಾನಗಲ್ಲ ತಾಲೂಕಿನ ಶೇಷಗಿರಿ, ಅರಿಶಿನಗುಪ್ಪಿ, ಶ್ಯಾಡಗುಪ್ಪಿ, ಹೊಂಕಣ ಮತ್ತು ಕೊಂಡೋಜಿ ಗ್ರಾಮಗಳ ಧರ್ಮಸ್ಥಳ ಸ್ವ ಸಹಾಯ ಸಂಘ ವಾರ್ಷಿಕ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1ಕ್ಕೆ ಗೊಟಗೋಡಿಯಲ್ಲಿ ಬಸವೇಶ್ವರ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಬಾಳೂರಿನಲ್ಲಿ ಅಂಗನವಾಡಿ ಕಟ್ಟಡ, ಮುಖ್ಯೋಪಾಧ್ಯಾಯರ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

