ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ (ಸುದ್ದಿ ಸಂಕ್ಷೇಪ)
ಹಿರೇಕೆರೂರು: ತಾಲೂಕಿನ ಕುಡುಪಲಿ ಗ್ರಾಮದ ಬಸವರಾಜ ತಂದೆ ಚಂದ್ರಪ್ಪ ಕುಸಗೂರ (38) ಈತನು 4 ವರ್ಷಗಳ ಹಿಂದೆ ಕಾಣೆಯಾಗಿದ್ದಾನೆ ಎಂದು ಈತನ ತಂದೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಾಣೆಯಾದ ವ್ಯಕ್ತಿ ಬಸವರಾಜ ಕುಸಗೂರ ಹಿಂದೂ ಲಿಂಗವಂತ, 38 ವರ್ಷದವನಾಗಿದ್ದು, 5 ಅಡಿ, 6 ಇಂಚು, ತೆಳುವಾದ ಮೈಕಟ್ಟು, ಸಾದಾಗಪ್ಪು ಕೋಲುಮುಖ ಕಪ್ಪು ಕೂದಲು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಚಕ್ಸ್ ಶರ್ಟ್ ಮತ್ತು ಚಕ್ಸ್ ಲುಂಗಿ ಧರಿಸಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕವರು ರಟ್ಟಿಹಳ್ಳಿ ಪೊಲೀಸ್ ಠಾಣೆ ದೂರವಾಣಿ-08376-286233, ಇಲ್ಲವೆ ಪೊಲೀಸ್ ಕಂಟ್ರೋಲ್ ರೂಮ್ ಹಾವೇರಿ ದೂರವಾಣಿ 08375-237368ಕ್ಕೆ ತಿಳಿಸಬೇಕೆಂದು ರಟ್ಟಿಹಳ್ಳಿ ಪಿಎಸ್ಐ ಶಿಲ್ಪಾ ವೈ.ಎಸ್. ಮನವಿ ಮಾಡಿದ್ದಾರೆ.
18ರಂದು ಕೃಷಿ ಉತ್ಸವ, ಜಲಾನಯನ ಮೇಳ
ಹಾವೇರಿ: ಜಿಪಂ, ತಾಪಂ, ಜಲಾನಯನ ಇಲಾಖೆ, ಕರ್ಜಗಿ ರೈತ ಸಂದರ್ಶನ ಕೇಂದ್ರದ ಆಶ್ರಯದಲ್ಲಿ ಜ.18ರಂದು ಬೆಳಗ್ಗೆ 11 ಗಂಟೆಗೆ ಕರ್ಜಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ಜಗಿ ಹೋಬಳಿ ಮಟ್ಟದ ಕೃಷಿ ಉತ್ಸವ ಮತ್ತು ಜಲಾನಯನ ಮೇಳ ಜರುಗಲಿದೆ. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಉದ್ಘಾಟಿಸುವರು. ಅತಿಥಿಗಳಾಗಿ ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯ ಶಿವಕುಮಾರ ಮುದ್ದಪ್ಪಳವರ, ವೀರೇಶ್ವರಿ ಸುಳ್ಳಳ್ಳಿ, ಸಾವಿತ್ರಮ್ಮ ರಾಮನಗೌಡ್ರ, ತಾಪಂ ಅಧ್ಯಕ್ಷೆ ಮೆಹರುನ್ನೀಸಾ ಜಿಗಳೂರ, ಉಪಾಧ್ಯಕ್ಷ ಬಸಪ್ಪ ಕಳಸೂರ ಸೇರಿದಂತೆ ಹಲವರು ಆಗಮಿಸುವರು. ಇದೇ ಸಂದರ್ಭದಲ್ಲಿ ಕೃಷಿ ಸಂಬಂಧಿತ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಪೂರ್ಣ ಕುಂಭಮೇಳ, ಮಿಶ್ರ ತಳಿ ಜಾನುವಾರುಗಳ ಸ್ಪರ್ಧೆ ಮತ್ತು ಪ್ರದರ್ಶನವಿದೆ. ಎಲ್ಲ ರೈತ ಬಾಂಧವರು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಪ್ರಕಾಶ ಎನ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಈಶ್ವರಪ್ಪ ಭೇಟಿ
ಹಾವೇರಿ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಜ. 16ರಂದು ಬೆಳಗ್ಗೆ 8ಕ್ಕೆ ಶಿವಮೊಗ್ಗದಿಂದ ಹೊರಟು, 9.30ಕ್ಕೆ ರಾಣಿಬೆನ್ನೂರಿಗೆ ಆಗಮಿಸಿ, ತಾಪಂ ಸದಸ್ಯ ಕಿರಣ ಅವರ ಮನೆಯಲ್ಲಿ ಉಪಾಹಾರ ಸೇವಿಸುವರು. 10.30ಕ್ಕೆ ಹಾವೇರಿ ಸಿಂದಗಿ ಮಠಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸುವರು.
ನಾಳೆ ತುಂಗೆಗೆ ಗಂಗಾಪೂಜೆ
ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆಯ 169 ಕಿ.ಮೀ.ವರೆಗೆ ನೀರು ಹರಿಸುವ ಪ್ರಯುಕ್ತ ಗಂಗಾಪೂಜೆ ಕಾರ್ಯಕ್ರಮ ಜ. 17ರಂದು ಮಧ್ಯಾಹ್ನ 12ಕ್ಕೆ ಕುರಗುಂದ ಬಳಿ ಹಾಗೂ 1 ಗಂಟೆಗೆದೇವರಗುಡ್ಡ ಬಳಿ ಜರುಗಲಿದೆ. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯ ಕಾಲುವೆಗೆ ನೀರು ಹರಿಸುವ ಗಂಗಾಪೂಜೆ ನೆರವೇರಿಸುವರು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಉಪಸ್ಥಿತರಿರುವರು. ಶಾಸಕ ಸುರೇಶಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಜಿ. ಶಿವಣ್ಣ, ನೆಹರು ಓಲೇಕಾರ, ಬಿ.ಸಿ. ಪಾಟೀಲ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶಿವರಾಜ ಸಜ್ಜನರ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಭೋಜರಾಜ ಕರೂದಿ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಶಾರದಾ ಲಮಾಣಿ, ಜಿಪಂ ಸದಸ್ಯರು, ತಾಪಂ ಉಪಾಧ್ಯರು, ಸದಸ್ಯರು, ಗ್ರಾಪಂ ಅಧ್ಯಕ್ಷ ಚಿಕ್ಕಪ್ಪ ಚೂರಿ, ಉಪಾಧ್ಯಕ್ಷೆ ಚಿಕ್ಕವ್ವ ನಾಯರ ಪಾಲ್ಗೊಳ್ಳುವರು ಎಂದು ಕಾರ್ಯನಿರ್ವಾಹಕ ಅಭಿಯಂತರ ಬಿ.ವಿ. ಜಗದೀಶ ತಿಳಿಸಿದ್ದಾರೆ.
ಗುತ್ತಲ: ನಾಳೆ ಕೃಷಿ ಉತ್ಸವ
ಹಾವೇರಿ: ಜಿಪಂ, ತಾಪಂ, ಕೃಷಿ ಇಲಾಖೆ ಹಾಗೂ ಗುತ್ತಲ ರೈತ ಸಂದರ್ಶನ ಕೇಂದ್ರದ ಆಶ್ರಯದಲ್ಲಿ ಜ. 17ರಂದು ಬೆಳಗ್ಗೆ 10 ಗಂಟೆಗೆ ಗುತ್ತಲ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಗುತ್ತಲ ಹೋಬಳಿ ಮಟ್ಟದ ಕೃಷಿ ಉತ್ಸವ ಸಮಾರಂಭ ಜರುಗಲಿದೆ. ಗುತ್ತಲ ಕಲ್ಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಉದ್ಘಾಟನೆ ನೆರವೇರಿಸುವರು. ಅತಿಥಿಗಳಾಗಿ ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯ ಶಿವಕುಮಾರ ಮುದ್ದಪ್ಪಳವರ, ವೀರೇಶ್ವರಿ ಸುಳ್ಳಳ್ಳಿ, ಜಿಪಂ ಸದಸ್ಯರಾದ ವಸಂತ ಕಳಸಣ್ಣನವರ, ಯಲ್ಲವ್ವ ಚಪ್ಪರದ, ತಾಪಂ ಅಧ್ಯಕ್ಷೆ ಮೆಹರುನ್ನಿಸಾ ಜಿಗಳೂರ, ಉಪಾಧ್ಯಕ್ಷ ಬಸಪ್ಪ ಕಳಸೂರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮುತ್ತಣ್ಣ ಯಲಿಗಾರ ಆಗಮಿಸುವರು. ಸಹಾಯಕ ಕೃಷಿ ನಿರ್ದೇಶಕ ಡಾ. ಕರಿಯಲ್ಲಪ್ಪ ತಿಳಿಸಿದ್ದಾರೆ.
ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ಶಾರದಾ ಪ್ರಥಮ
ಸವಣೂರು: ಸ್ಥಳೀಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 10ನೇ ವರ್ಗದ ವಿದ್ಯಾರ್ಥಿನಿ ಶಾರದಾ ವಿರೂಪಾಕ್ಷಪ್ಪ ಕುಲಕರ್ಣಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗುಲ್ಬರ್ಗದಲ್ಲಿ ಜರುಗಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾಕೂಟ ವಿಭಾಗದಲ್ಲಿ ವಿದ್ಯಾರ್ಥಿನಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕಳೆದ ಸಾಲಿನಲ್ಲಿಯೂ ಸೃಜನಶೀಲ ಬರವಣಿಗೆಯಲ್ಲಿ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯ ಹಜರೇಸಾಬ ನದಾಫ್, ಶಾಲಾ ಸಮಿತಿ ಅಧ್ಯಕ್ಷರಾದ ಸುಭಾಸ್ ಗಡೆಪ್ಪನವರ್ ಹಾಗೂ ಪದಾಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿ ವಿ.ಎ. ಮಾಳಗಿಮನಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
ಚೌಡಯ್ಯನವರ ವಚನ ಆಹ್ಲಾದಕರ: ವಿರೂಪಾಕ್ಷ ಸ್ವಾಮೀಜಿ
ಹಿರೆಕೆರೂರು: ಬಸವಣ್ಣವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಯಲ್ಲಿ ಭಾಗಿಯಾಗಿದ್ದರು. ಅವರ ವಚನಗಳು ಅನುಕರಣೀಯ ಮತ್ತು ಆಹ್ಲಾದಕರವಾಗಿವೆ ಎಂದು ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪಸ್ವಾಮಿ ಮಠದ ವಿರೂಪಾಕ್ಷ ಮಹಾಸ್ವಾಮಿಗಳು ನುಡಿದರು. ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪಸ್ವಾಮಿ ಮಠದಲ್ಲಿ ನಡೆದ ಗಂಗಾಮತ ಸಮಾಜ ಮತ್ತು ಅಂಬಿಗರ ಚೌಡಯ್ಯ ಸಂಘ ಉದ್ಘಾಟನೆ ಸಮಾರಂಭದಲ್ಲಿ ಸಮಾಜ ಬಾಂಧವರನ್ನುದ್ದೇಶಿಸಿ ಮಾತನಾಡಿದರು. ಸಮಾಜದ ರಾಜ್ಯಾಧ್ಯಕ್ಷ ಮೋಹನಕುಮಾರ, ಜಿಲ್ಲಾಧ್ಯಕ್ಷ ವಾಸಪ್ಪ ಮೂಡಿ, ತಾಲೂಕು ಅಧ್ಯಕ್ಷ ಅಶೋಕ ಬಾರ್ಕಿ, ಕಾರ್ಯದರ್ಶಿ ಚಂದ್ರಶೇಖರ್ ಜಾಡರ, ಉಪಾಧ್ಯಕ್ಷ ಮೈಲಾರಪ್ಪ ಬಾರ್ಕಿ, ರಂಗಪ್ಪ ಮಲೆಬೆನ್ನೂರು, ಶಿವಮೂರ್ತಿ ತೋಟದ, ಕೃಷ್ಣಪ್ಪ ಜೀನಹಳ್ಳಿ, ಪ್ರಕಾಶ ಸುಣಗಾರ, ರಂಗಪ್ಪ ಜಾಡರ, ಮಹದೇವ ಬಾರ್ಕಿ, ಮಾರುತೆಪ್ಪ ಸುಣಗಾರ, ಮಾರುತಿ ಸುಣಗಾರ ಭಾಗವಹಿಸಿದ್ದರು.
20ರಂದು ವಿವಿಧ ಸ್ಪರ್ಧೆ
ರಾಣಿಬೆನ್ನೂರು: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ರಾಣಿಬೆನ್ನೂರು, ಕೆಎಲ್ಇ ಶಿಕ್ಷಣ ಸಂಸ್ದೆಯ ರಾಜ ರಾಜೇಶ್ವರಿ ಮಹಿಳಾ ಮಹಾವಿದ್ಯಾಲಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಜ. 20ರಂದು ಬಸ್ ನಿಲ್ದಾಣ ಹತ್ತಿರವಿರುವ ರಾಜೆರಾಜೇಶ್ವರಿ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಗಳ ವಿವರ: ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವಾಮಿ ವಿವೇಕಾನಂದರ ಜೀವನ ಶೈಲಿ ಮತ್ತು ಸಂದೇಶ ಕುರಿತು 1 ಗಂಟೆ ಅವಧಿಯಲ್ಲಿ ಪ್ರಬಂಧ ಬರೆಯಬೇಕು, ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಎಂಬ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು 5 ನಿಮಿಷ ಮಾತನಾಡಬೇಕು, ಚಿತ್ರಕಲೆಯಲ್ಲಿ ಭಾಗವಹಿಸುವವರು 1 ಗಂಟೆ ಅವಧಿಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಬಿಡಿಸಬೇಕು, ರಸಪ್ರಶ್ನ ಸ್ಪರ್ಧೆಗೆ ಪ್ರತಿ ಕಾಲೇಜಿನಿಂದ 4 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ದೇಶಭಕ್ತಿ ಗೀತೆ ಹಾಡುವುದಕ್ಕೆ 5 ನಿಮಿಷ ನಿಗದಿಪಡಿಸಲಾಗಿದೆ. ರಸಪ್ರಶ್ನೆ ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರತಿ ಕಾಲೇಜಿನ 2 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಚೇತನ ನಂದಿಹಳ್ಳಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

