ಆಕಸ್ಮಿಕ ಬೆಂಕಿಯಿಂದ ಹತ್ತಿ ಅಂಡಿಗೆ ಭಸ್ಮ (ಸುದ್ದಿ ಸಂಕ್ಷೇಪ)
ರಾಣಿಬೆನ್ನೂರು: ನಗರದ ರೇಲ್ವೆ ನಿಲ್ದಾಣ ಹತ್ತಿರವಿರುವ ಲಕ್ಷ್ಮೀ ನಾರಾಯಣ ಮ್ಯಾನು ಪ್ಯಾಕ್ಟರಿ ಜಿನ್ನ ಹೊರಾಂಗಣದಲ್ಲಿ ಸಂಗ್ರಹಿಸಲಾಗಿದ್ದ ಹತ್ತಿ ಅಂಡಿಗೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸುಮಾರು ರು. 2 ಸಾವಿರ ಡಿಸಿಎಚ್ ಹತ್ತಿ ಅಂಡಿಗೆಗಳು ಬೆಂಕಿಗಾಹುತಿಯಾದ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ. ಲಕ್ಷ್ಮಿ ನಾರಾಯಣ ಜೀನ್ನಲ್ಲಿ ಅರಳೆ ಮಾಡಿಸುವುದಕ್ಕಾಗಿ ಜೀನ್ ಆವರಣದಲ್ಲಿರಿಸಿದ್ದ ಸಮಯದಲ್ಲಿ ಬೆಂಕಿಗಾಹುತಿಯಾಗಿರುವ ಸುಮಾರು 2 ಸಾವಿರ ಅಂಡಿಗೆಗಳು, ನಗರದ ಹತ್ತಿ ವ್ಯಾಪಾರಸ್ಥರಾದ ಟಿ.ಎಸ್. ಜೈನ್ ಮತ್ತು ಕಂಪನಿಗೆ ಸೇರಿದವುಗಳಾಗಿದ್ದು, ಬೆಂಕಿ ಕಾಣಿಸಿದ ತಕ್ಷಣದಿಂದ ಬೆಳಗಿನವರೆಗೆ ಬ್ಯಾಡಗಿ, ಹಾವೇರಿ, ರಾಣಿಬೆನ್ನೂರು ಅಗ್ನಿ ಶಾಮಕ ಸಿಬ್ಬಂದಿ ಶ್ರಮಿಸಿದ್ದರ ಫಲವಾಗಿ ಬೆಂಕಿ ನಿಯಂತ್ರಿಸಲು ಸಾಧ್ಯವಾಯಿತ್ತೆಂದು ಹಾಗೂ ಅಂದಾಜು ರು. ಕೋಟಿ ಮೌಲ್ಯದ ಹತ್ತಿ ಬೆಂಕಿಗಾಹುತಿಯಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಾಲೂಕು ಜಿನ್ನಿಂಗ್ ಮತ್ತು ಪ್ರೇಸ್ಸಿಂಗ್ ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ಸುಜಿತ್ ಜಂಬಗಿ, ಚೆರಮನ್ ಮೋಹನ್ಲಾಲ್ ಜೈನ್, ಕಾರ್ಯದರ್ಶಿ ಕುಮಾರ ಮುಷ್ಠಿ, ಗೋವಿನ ಜೊಳ ವ್ಯಾಪಾರಸ್ಧರಾದ ಬಿ.ಎಸ್. ಸಣ್ಣಗೌಡ್ರ, ಎಪಿಎಂಸಿ ಸದಸ್ಯ ಜಿ.ಜಿ. ಹೂಟ್ಟಿಗೌಡ್ರ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಡಿ ನೀಡಿ ಪರಿಶೀಲಿಸಿದರು.
ಆಟೋರಿಕ್ಷಾ ಪಲ್ಟಿ: ಏಳುವಿದ್ಯಾರ್ಥಿಗಳಿಗೆ ಗಾಯ
ಬ್ಯಾಡಗಿ: ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಪರಿಣಾಮ 7 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಪಟ್ಟಣದ ಬನ್ನಿಹಟ್ಟಿ ರಸ್ತೆಯಲ್ಲಿ ಸೋಮವಾರ ಸಂಜೆ ಜರುಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಪಂಚಾಕ್ಷರಿ ಕೋಟಿಹಾಳ, ಪ್ರಮೋದ ಕೋಟಿಹಾಳ, ಶಿವಲಿಂಗ ಮಳ್ಳಪ್ಪನವರ, ವಿನಾಯಕ ಅಗಡಿ, ಭರತ್ ಶಿಡೇನೂರ, ಋತಿಕ್ ರಾಜ್ ಬ್ಯಾಡಗಿ, ಕೆ.ಎಂ. ಸ್ನೇಹಾ ಎಲ್ಲರೂ ತಾಲೂಕಿನ ಕೊಲ್ಲಾ ಪುರ ಗ್ರಾಮದವರಾಗಿದ್ದು, ಶಾಲೆ ಮುಗಿಸಿ ಸ್ವ-ಗ್ರಾಮಕ್ಕೆ ತೆರಳುತ್ತಿದ್ದರೆಂದು ತಿಳಿದು ಬಂದಿದೆ. ತೀವ್ರ ಗಾಯಗೊಂಡಿದ್ದ ಪಂಚಾಕ್ಷರಿ ಹಾಗೂ ಪ್ರಮೋದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

