ಗ್ರಾಮೀಣ ಕ್ರೀಡೆ ಉಳಿಸಿ, ಬೆಳೆಸಿ
ಹಾನಗಲ್ಲ: ಗ್ರಾಮೀಣ ಕ್ರೀಡೆಗಳು ಜನರಿಂದ ದೂರವಾಗುತ್ತಿರುವ ಈ ದಿನಗಳಲ್ಲಿ ಅವುಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಯುವ ಸಮುದಾಯ ಇಂತಹ ಕ್ರೀಡೆಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿ, ಶಿಸ್ತುಬದ್ಧವಾಗಿ ಆಚರಿಸುವ ಅಗತ್ಯವಿದೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಕಲೆ, ಪರಂಪರೆ ಉಳಿಸಿ: ಯುವ ಸಮುದಾಯ ಕ್ರಿಯಾಶೀಲರಾಗಿ ಗ್ರಾಮೀಣ ಕ್ರೀಡೆ, ಕಲೆ, ಸಾಹಿತ್ಯ-ಸಾಂಸ್ಕೃತಿಕ ಪರಂಪರೆ ಉಳಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಕ್ರೀಡೆಯಿಂದ ಆರೋಗ್ಯ: ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಜಿ.ಎಸ್. ಗಂಟೇರ ಮಾತನಾಡಿ, ಕ್ರೀಡಾ ಮನೋಭಾವನೆ ಅಳವಡಿಸಿಕೊಂಡು ಗ್ರಾಮೀಣ ಭಾಗದ ದೈಹಿಕ ಚಟುವಟಿಕೆಗಳಂತಹ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಕ್ರೀಡೆ, ಸ್ಪರ್ಧೆ ಮತ್ತಿತರ ಚಟುವಟಿಕೆಗಳು ಆರೋಗ್ಯಪೂರ್ಣವಾಗಿರಬೇಕು. ಈ ನಿಟ್ಟಿನಲ್ಲಿ ಯುವಕರ ಪಾತ್ರ ಮಹತ್ವದಾಗಿದೆ ಎಂದರು. ರಾಜ್ಯ ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯರಾದ ಮಂಜುಳಾ ಕಾಮನಹಳ್ಳಿ, ಸುಮಂಗಲಾ ದೊಡ್ಡಮನಿ, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಪುರಸಭೆ ಅಧ್ಯಕ್ಷೆ ಹಸಿನಾಬಿ ನಾಯ್ಕನವರ, ಮಾಜಿ ಅಧ್ಯಕ್ಷರಾದ ಎಂ.ಬಿ. ಕಲಾಲ, ಯಲ್ಲಪ್ಪ ಕಿತ್ತೂರು, ಕಲ್ಯಾಣಕುಮಾರ ಶೆಟ್ಟರ್, ಲಕ್ಷ್ಮವ್ವ ಹಳೆಕೋಟಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಾಲತೇಶ ಬ್ಯಾಗವಾದಿ, ಬಿ.ವೈ. ಬಂಡಿವಡ್ಡರ ವೇದಿಕೆಯಲ್ಲಿದ್ದರು. ಸಂಘಟಕರಾದ ದಾನಪ್ಪ ಗಂಟೇರ, ಮಾರುತಿ ಹರಿಹರ, ರಾಜೂ ಪೇಟಕರ. ಸುರೇಶ ದೊಡ್ಡಕುರುಬರ, ಮಹೇಶ ಪವಾಡಿ, ಪ್ರಕಾಶ ತಳ್ಳಳ್ಳಿ, ಮಾಲತೇಶ ಕುರುಬರ, ಭೀಮಣ್ಣ ಅಗಸಿಬಾಗಿಲ, ಮಲ್ಲೇಶಪ್ಪ ಕೊಣನಕೇರಿ, ಶಂಭು ಶೆಟ್ಟರ್, ನಿಂಗಪ್ಪ ಗಾಜಿ, ಬಂಗಾರೆಪ್ಪ ಕಾಮನಹಳ್ಳಿ, ಜಗದೀಶ ಮಾಯಣ್ಣನವರ, ಗಣಪತಿ ದೇಸಾಯಿ, ಶಂಕರ ಹಂಗರಗಿ, ಅಣ್ಣಪ್ಪ ಜನಗೇರಿ, ಜುಂಜಪ್ಪ ಬಾವಿಮನಿ, ಕುಮಾರ ಕುಲುಮಿಯಲ್ಲಾಪುರ, ನಾಗರಾಜ ಬಡಿಗೇರ ಮುಂತಾದವರಿದ್ದರು. ಎರಡು ದಿನ ನಡೆಯುವ ಟಗರಿನ ಕಾಳಗದಲ್ಲಿ ಭಾನುವಾರ ಹಾಲು ಹಲ್ಲು, ಎರಡು, ನಾಲ್ಕು ಹಲ್ಲುಗಳ ರಾಣಿಬೆನ್ನೂರು, ದಾವಣಗೇರಿ, ಹರಿಹರ, ಗದಗ, ಮುಂಡರಗಿ, ಬ್ಯಾಡಗಿ, ಹಾವೇರಿ, ಶಿಗ್ಗಾಂವಿ, ಸವಣೂರು, ಹಿರೇಕೆರೂರು ಸೇರಿದಂತೆ ಹಾನಗಲ್ಲ ಸುತ್ತಲಿನ ಸುಮಾರು ನೂರು ಟಗರುಗಳು ಕಾಳಗ ನಡೆದವು. ಸೋಮವಾರ ಆರು ಮತ್ತು ಎಂಟು ಹಲ್ಲುಗಳ ಬಲಿಷ್ಠ ಟಗರುಗಳ ಕಾಳಗ ರೋಮಾಂಚನ ನೀಡಲಿದೆ. ನಂತರ ಬಹುಮಾನ ಸಮಾರಂಭ ಜರುಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

