ವಿವೇಕಾನಂದರು ವಿಶ್ವಗುರು: ಶಾಂತಲಿಂಗ ಶ್ರೀ
ಹಾವೇರಿ: ಸ್ವಾಮಿ ವಿವೇಕಾನಂದರು ವಿಶ್ವಗುರು. ಅವರ ಪ್ರತಿ ಸಂದೇಶವೂ ರೋಮಾಂಚಕ. ಆದ್ದರಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವಕರ ಜಯಂತಿ ಎಂದು ಗೌರವಿಸುತ್ತಿರುವುದು ಸ್ವಾಗತಾರ್ಹ ಎಂದು ಹೊಸಮಠದ ಶಾಂತಲಿಂಗ ಶ್ರೀಗಳು ನುಡಿದರು.
ಇಲ್ಲಿನ ಎಸ್ಜೆಎಂ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಅತಿಥಿಗಳಾಗಿದ್ದ ಹನುಮಂತಗೌಡ ಗೊಲ್ಲರ, ವಿವೇಕಾನಂದರು ಬದುಕಿದ್ದು ಕೇವಲ 36 ವರ್ಷ. ಆದರೆ ವಿಶ್ವ ಗುರು ಎಂದು ಕರೆಸಿಕೊಳ್ಳುವ ಹಿಂದಿನ ಶ್ರಮ ಅಮೂಲ್ಯ. ಗುರು-ಶಿಷ್ಯರ ಸಂಬಂಧ ದೈವಿಕವಾದುದು. ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಬೇವಿನಮರದ ಮಾತನಾಡಿ, ವಿವೇಕಾನಂದರ ಜಯಂತಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳು ಓದು ಬರಹ ಮಾತ್ರವಲ್ಲದೆ, ದೇಶ ಹಾಗೂ ಸಮಾಜದ ಬಗೆಗೂ ಕಾಳಜಿ ವಹಿಸುವಂತೆ ಸಲಹೆ ಮಾಡಿದರು.
ನಗರ ಘಟಕದ ಅಧ್ಯಕ್ಷ ಪ್ರಕಾಶ ಬಿಷ್ಟೆಂಡೆರ ಮಾತನಾಡಿದರು. ಆರತಿ ಹೊಟ್ಟಿಗಿ ನಿರ್ವಹಿಸಿದರು. ಜೆ.ಎಂ. ಮಾದರ ಸ್ವಾಗತಿಸಿದರು. ಕವಿತಾ ಗೌಡ ನಾಯಕ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

