ಹಿರೇಕೆರೂರು: 25ರಂದು ಮತದಾರರ ದಿನಾಚರಣೆ (ಸುದ್ದಿ ಸಂಕ್ಷೇಪ)
ಹಿರೇಕೆರೂರು: ತಹಸೀಲ್ದಾರ್ ಕಾರ್ಯಾಲಯದ ವತಿಯಿಂದ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರ ದಿನಾಚರಣೆ ಸಮಾರಂಭವನ್ನು ಪಟ್ಟಣದ ಸರ್ವಜ್ಞ ಕಲಾಭವನದಲ್ಲಿ ಜ. 25ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ತಹಸೀಲ್ದಾರ್ ಟಿ.ಬಿ. ಹೊಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಮಾಜಶಾಸ್ತ್ರಬೋಧಕರಿಗೆ ಸಂದರ್ಶನ
ಹಿರೇಕೆರೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2012-13ನೇ ಸಾಲಿನ ಎರಡನೇ ಅವಧಿಗೆ ಸಮಾಜ ಶಾಸ್ತ್ರ ಬೋಧನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅತಿಥಿ ಉಪನ್ಯಾಸಕರ ಒಂದು ಹುದ್ದೆಗೆ ಜ. 24ರಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಶೇ. 55 ಅಂಕಗಳೊಂದಿಗೆ ಸ್ನಾತಕೋತ್ತರ ಪಧವಿ ಪಡೆದಿರುವ ಎನ್ಇಟಿ ಅಥವಾ ಪಿಎಚ್ಡಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕಾಲೇಜಿನ ಪ್ರಾಚಾರ್ಯ ಎಲ್.ಎಂ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರೇಕೆರೂರು: ಇಂದು ಯುವಜನ ಮೇಳ
ಹಿರೇಕೆರೂರು: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ತಾಲೂಕು ಪಂಚಾಯತಿ ಮತ್ತು ಭೋಗಾವಿಯ ಶ್ರೀ ಗಜಾನನ ಯುವಕ ಕ್ರೀಡಾ ಹಾಗೂ ಭಜನಾ ಮಂಡಳಿ ವತಿಯಿಂದ ಜ. 23ರಂದು ಭೋಗಾವಿ ಗ್ರಾಮದಲ್ಲಿ ತಾಲೂಕು ಮಟ್ಟದ ಯುವಜನ ಮೇಳ ಆಯೋಜಿಸಲಾಗಿದೆ. ನೋಂದಾಯಿತ ಯುವಕ, ಯುವತಿ ಸಂಘಗಳ, 18ರಿಂದ 35 ವಯೋವುತಿಯ ಸದಸ್ಯರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9844704856, 9980087115 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 4ರಿಂದಟೇಲರಿಂಗ್ ತರಬೇತಿ
ಹಾವೇರಿ: ಇಲ್ಲಿನ ವಿಜಯಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಅರ್ಹ ವಿದ್ಯಾವಂತ ನಿರುದ್ಯೋಗಿ ಯುವತಿಯರಿಗೆ ಡ್ರೆಸ್ ಡಿಸೈನಿಂಗ್ ಮತ್ತು ಬೇಸಿಕ್ ಟೇಲರಿಂಗ್ ತರಬೇತಿಗಳು ಫೆ. 4ರಿಂದ ಆರಂಭವಾಗಲಿವೆ. ಜಿಲ್ಲೆಯ 18ರಿಂದ 40ವರ್ಷದೊಳಗಿನ ಹಾಗೂ ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಫೆ. 1ರೊಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಜಿಲ್ಲಾ ಆಡಳಿತ ಭವನದ ಹಿಂಭಾಗದಲ್ಲಿರುವ ವಿಜಯ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜ. 30ರಂದು ಸಂದರ್ಶನ ಜರುಗಲಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ಬಯೋಡಾಟಾದೊಂದಿಗೆ ಶಾಲಾ ದಾಖಲಾತಿ, ಭಾವಚಿತ್ರ ಮತ್ತು ಪಡಿತರ ಚೀಟಿಯನ್ನು ಕಡ್ಡಾಯವಾಗಿ ತರಬೇಕೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08375-249160 ಇಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

