ಹಾವೇರಿ

ಗ್ರಾಮೀಣಾಭಿವೃದ್ಧಿಯಿಂದ ದೇಶ ಪ್ರಗತಿ: ಸುರೇಶಗೌಡ ಪಾಟೀಲ್

Published On :

ಹಿರೇಕೆರೂರು: ಗ್ರಾಮೀಣಾಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಆರ್ಥಿಕ ಸ್ವಾವಲಂಬನೆ ಹೊಂದಲು ಶಿಕ್ಷಣ ಅತಿ ಅವಶ್ಯ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಹಳೆಚನ್ನಳ್ಳಿ, ದೂದಿಹಳ್ಳಿ, ಗುಂಡಗಟ್ಟಿ, ಕಿರಗೇರಿ ಹಾಗೂ ಬುಳ್ಳಾಪುರ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಸುವರ್ಣ ಗ್ರಾಮ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿ ಮೇಲೆ ನಿಗಾ ವಹಿಸಿ: ಹಳೆಚನ್ನಳ್ಳಿಯಿಂದ ದೂದಿಹಳ್ಳಿಯವರೆಗಿನ 3.50 ಕಿ.ಮೀ. ರಸ್ತೆ ಸುಧಾರಣೆಗೆ # 140.75, ಗುಂಡಗಟ್ಟಿ ಗ್ರಾಮದಲ್ಲಿ 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯ ಕಾಮಗಾರಿಗಳಿಗೆ # 53 ಲಕ್ಷ, ಕಿರಗೇರಿ, ಬುಳ್ಳಾಪುರ ಗ್ರಾಮಗಳಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ # 179.60 ಲಕ್ಷ, ಮಂಜೂರಾಗಿದೆ. ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರ ವಹಿಸಿ ಎಂದರು.
ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಮುಖಂಡರಾದ ದೊಡ್ಡಗೌಡ ಪಾಟೀಲ, ಎಸ್.ಕೆ. ಕರಿಯಣ್ಣನವರ, ದುರ್ಗಪ್ಪ ನಿರಲಗಿ, ರವಿಶಂಕರ ಬಾಳಿಕಾಯಿ, ಬಿ.ಎಸ್. ಪಾಟೀಲ, ಪರಮೇಶಪ್ಪ ಗವಿಯಪ್ಪನವರ, ತಾಪಂ ಇಓಎಂಎನ್ ಮಾಳಗೇರ, ಅಭಿಯಂತ ಜ. ಸಿದ್ದೇಶ, ತಾಪಂ, ಗ್ರಾಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.