ಹಾವೇರಿ

ಅಭಿವೃದ್ಧಿಪರ, ಕ್ರಿಯಾಶೀಲ ಅಭ್ಯರ್ಥಿಗೆ ಮತ ನೀಡಿ (ಸುದ್ದಿ ಸಂಕ್ಷೇಪ)

Published On :

ಹಾನಗಲ್ಲ: ಆಮಿಷಗಳಿಗೆ ಮನಸೊಡ್ಡಿ ಭಾರತದ ಭವಿಷ್ಯವನ್ನು ಹಾಳು ಮಾಡುವ ದುಸ್ಸಾಹಸಕ್ಕೆ ಮುಂದಾಗದೆ ದೇಶಭಕ್ತರಾಗಿ, ಅಭಿವೃದ್ಧಿ ಚಿಂತನೆಯ ಕ್ರಿಯಾಶೀಲ ವ್ಯಕ್ತಿಗೆ ಮತದಾನ ಮಾಡಬೇಕು ಎಂದು ಉಪನ್ಯಾಸಕ ಎ.ಎಸ್. ಜಗದೀಶಪ್ಪ ಕರೆ ನೀಡಿದರು. ತಾಲೂಕಿನ ಬಾಳಂಬೀಡ ಗ್ರಾಮದ ಸಿ.ಜಿ. ಬೆಲ್ಲದ ಸರ್ಕಾರಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು, ದ್ವೇಷ, ಅಸೂಯೆ, ವಿರಸ, ವಿಕಟತೆಗಳು ಗ್ರಾಮೀಣ ಬದುಕನ್ನು ಅಸ್ಥಿರಗೊಳಿಸುತ್ತಿವೆ. ಸಾಮರಸ್ಯದ ಬದುಕಿಗಾಗಿ ಎಲ್ಲರೂ ಒಂದಾಗಬೇಕು. ನಾಡಿನ ಹಿತವೇ ನಮ್ಮ ಹಿತವಾಗಲಿ ಎಂದರು. ಅತಿಥಿಯಾಗಿದ್ದ ಪ್ರೊ೤ ಮಾರುತಿ ಶಿಡ್ಲಾಪುರ, ಗ್ರಾಮ ಭಾರತ ಸಮೃದ್ಧ ಹಾಗೂ ಸಬಲವಾಗಬೇಕು. ನಾಡಿನ ಹಿತಕ್ಕಾಗಿ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ಮುಖವಾಡದ ಬದುಕಿನಿಂದ ಹೊರಬರಬೇಕು. ಸೇವೆಯನ್ನು ಸಂಪಾದನೆ ಎಂದು ಪರಿಭಾವಿಸಿದಲ್ಲಿ ಅನಾಹುತಗಳೇ ಆಗುತ್ತವೆ ಎಂದರು. ಮುಖಂಡ ಮಿಯ್ಯಾಜಾನ ಕಂಬಳಿ ಮಾತನಾಡಿ, ಗ್ರಾಮೀಣ ಕೃಷಿ ಬದುಕು ಪುನರುತ್ಥಾನವಾಗುತ್ತಿದೆ. ಕೃಷಿ ಲಾಭದಾಯಕವಾಗಿ ಬೆಳೆಯುತ್ತಿದೆ. ಗ್ರಾಮೀಣ ಯುವಕರು ಪಟ್ಟಣಗಳತ್ತ ವಲಸೆ ಹೋಗುವುದನ್ನು ತಡೆದು ಪಾರಂಪರಿಕ ಕೃಷಿಯನ್ನು ವೈಜ್ಞಾನಿಕ ಅನಕೂಲಗಳೊಂದಿಗೆ ನಡೆಸಿದರೆ ಉತ್ತಮ ಲಾಭ ಸಾಧ್ಯ. ಗ್ರಾಮ ಭಾರತ ಮತ್ತೊಮ್ಮೆ ವಿಜೃಂಭಿಸಲಿ ಎಂದರು. ಕೃಷಿ ಪತ್ತಿನ ಸಂಘದ ಅಧ್ಯಕ್ಷ ಈರಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎಂ. ಗುರುದೇವ, ಉಪನ್ಯಾಸಕರಾದ ಬಿ.ಟಿ. ಲಮಾಣಿ, ಎಲ್. ಆರ್. ಬಾರ್ಕಿ, ಡಾ೤ ಸುರೇಶ ದೊಡ್ಡಮನಿ, ಮಂಜುನಾಥ ಬಾರ್ಕಿ ಇದ್ದರು.

ಬಾಲಮಂದಿರದಿಂದ 4 ಮಕ್ಕಳು ಪರಾರಿ
ಹಾವೇರಿ: ಸಕಾರಣವಿಲ್ಲದೆ ನಾಲ್ಕು ಮಕ್ಕಳು ಜಿಲ್ಲೆಯ ರಾಣಿಬೆನ್ನೂರಿನ ಬಾಲಮಂದಿರದಿಂದ ತಪ್ಪಿಸಿಕೊಂಡು ಹೋದ ಘಟನೆ ಜರುಗಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ 4 ಮಕ್ಕಳು ಸೇರಿಕೊಂಡು ಯಾವುದೋ ಉದ್ದೇಶದಿಂದ ಬಾಲಮಂದಿರದ ಕರ್ತವ್ಯದ ಮೇಲಿದ್ದ ಸಿಬ್ಬಂದಿಯನ್ನು ಕೂಡಿ ಹಾಕಿ, ಬಾತ್‌ರೂಮಿನ ಕಿಟಕಿ ಸರಳುಗಳನ್ನು ತೆಗೆದು ಹೊರ ಹೋಗಿ ಕಾಣೆಯಾದ ಕುರಿತಂತೆ ಬಾಲ ಮಂದಿರದ ಸೂಪರಿಟೆಂಡೆಂಟ್ ವಿ.ಎ. ಮನ್ನಂಗಿ ರಾಣಿಬೆನ್ನೂರು ಶಹರ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ವಿಷ ಸೇವಿಸಿ ವೃದ್ಧ ಆತ್ಮಹತ್ಯೆ
ಹಾವೇರಿ: ಏಳೆಂಟು ವರ್ಷಗಳಿಂದ ಉಪಶಮನವಾಗದ ಹೊಟ್ಟೆನೋವಿನಿಂದ ಬಳಲುತ್ತಿದ್ದ ವೃದ್ಧನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾನಗಲ್ಲ ತಾಲೂಕು ಗುಂಡೂರ ಗ್ರಾಮದಲ್ಲಿ ಜರುಗಿದೆ. ಡಾಕಪ್ಪ ಹನುಮಂತಪ್ಪ ಲಮಾಣಿ (60) ಸುಮಾರು 7-8 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಈ ಬಗ್ಗೆ ಮನನೊಂದಿದ್ದ ಈತ ತನ್ನ ಹೊಲದಲ್ಲಿ ವಿಷ ಸೇವಿಸಿದ್ದಾನೆ. ವಿಷಯ ಗೊತ್ತಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟನೆಂದು ಆತನ ಹೆಂಡತಿ ರುಕ್ಮವ್ವ ಡಾಕಪ್ಪ ಲಮಾಣಿ ಹಾನಗಲ್ಲ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.