ನಿರುದ್ಯೋಗ, ಭಯೋತ್ಪಾದನೆ ತೊಲಗಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ.26
ಹಸಿವು, ಹತಾಶೆ, ನಿರುದ್ಯೋಗ, ಭಯೋತ್ಪಾದನೆ, ಮಹಿಳಾ ದೌರ್ಜನ್ಯದಂತಹ ಸಮಸ್ಯೆಗಳಿಂದ ಭಾರತವನ್ನು ಬಿಡುಗಡೆಗೊಳಿಸುವ ಜವಾಬ್ದಾರಿ ಇಂದಿನ ಅಗತ್ಯವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆ ಈ ಚಿಂತನೆಯೊಂದಿಗೆ ರಾಷ್ಟ್ರ ರಕ್ಷಣೆಯ ಹೊಣೆ ಹೊರಬೇಕೆಂದು ಹಾನಗಲ್ಲ ತಹಸೀಲ್ದಾರ್ ರಮೇಶ ಕೋನರೆಡ್ಡಿ ಕರೆ ನೀಡಿದರು.
ಹಾನಗಲ್ ತಾಲೂಕು ಕ್ರೀಡಾಂಗಣದಲ್ಲಿ 64ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಶ್ರಮಿಸಿ: ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸೂತ್ರ ಅನ್ವಯವಾಗಬೇಕು. ಎಲ್ಲದಕ್ಕೂ ಕಾನೂನುಗಳಿವೆ. ಅವನ್ನು ಜಾರಿಗೆ ತರಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಪ್ರಸಕ್ತ ದೇಶ ಪ್ರಗತಿಯ ಚಿಂತನೆ ಬೇಕಾಗಿದೆ. ದೇಶ ಭಕ್ತರ ಮಾರ್ಗದರ್ಶನ ಅತ್ಯವಶ್ಯಕ. ದೇಶದ ಘನತೆ ಹಾಗೂ ಅಭಿವೃದ್ಧಿಗೆ ಕುಂದಾಗದಂತೆ ನಡುವಳಿಕೆ ಅಗತ್ಯವಿದೆ. ಎಲ್ಲರೂ ಒಂದಾಗಿ ದೇಶದ ಹಿತಕ್ಕೆ ಮುಂದಾಗುವ ಸಂಕಲ್ಪ ನಮ್ಮದಾಗಲಿ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಉಪಾಧ್ಯಕ್ಷೆ ಸರೋಜಾ ಹುಳ್ಳಿಕಾಸಿ, ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಲಕ್ಷ್ಮವ್ವ ಹಳೇಕೋಟಿ, ಸದಸ್ಯರಾದ ಬಲ್ಲಣ್ಣ ಬಂಕಾಪುರ, ವಿದ್ಯಾ ಲಿಂಗೇರ, ಗಣೇಶ ಮೂಡ್ಲಿಯವರ, ರವಿರಾಜ ಕಲಾಲ, ಶಕುಂತಲಾ ಪವಾಡಿ, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಉಪಾಧ್ಯಕ್ಷ ಪಿ.ವೈ. ಗುಡಗುಡಿ, ಅಧಿಕಾರಿಗಳಾದ ಬಿ.ವೈ. ಬಂಡಿವಡ್ಡರ, ಕೆ.ಅರ್. ಮಠದ, ಮನೋಜಕುಮಾರ ಗಣಬಳ್ಳಿ, ಸಿಪಿಐ ಮಂಟೂರ, ಚಂದ್ರಪ್ಪ ನರಸಗೊಂಡರ ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜನತಾ ಬಾಲಕಿಯರ ಪ್ರೌಢಶಾಲೆ ಮಕ್ಕಳು ಪ್ರಾರ್ಥಿಸಿದರು. ವಿ.ವಿ. ಸಾಲಿಮಠ ಸ್ವಾಗತಿಸಿದರು. ನಿರಂಜನ ಗುಡಿ ಹಾಗೂ ಬಿ.ಎಸ್. ಕರೆಣ್ಣನವರ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ತುಮರಿಕೊಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

