ವ್ಯಕ್ತಿತ್ವ ವಿಕಸನದಿಂದ ಕಾರ್ಯ ಯಶಸ್ವಿ: ಮಾಸಣಗಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 27
ವ್ಯಕ್ತಿತ್ವ ರೂಪಿಸಿಕೊಳ್ಳಲು ಸಿಕ್ಕ ಅವಕಾಶಗಳ ಸದುಪಯೋಗದ ಜೊತೆಗೆ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ವ್ಯಕ್ತಿತ್ವ ವಿಕಸನಗೊಂಡಾಗ ಮನುಷ್ಯನ ಮನಸ್ಸು ವಿಕಾಸಗೊಳ್ಳಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಹೇಳಿದರು.
ಇಲ್ಲಿನ ಮಾಮ್ಲೆದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಜರುಗಿದ ಜೆಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಧಾಟಿಸಿ ಮಾತನಾಡಿದರು.
ಮನುಷ್ಯ ತನ್ನ ಉದ್ಯೋಗ ಮತ್ತು ಅದರೊಂದಿಗಿನ ಪರಿಸರದ ಜೊತೆಗೆ ಹೊಂದಿಕೊಳ್ಳುವ ಮೂಲಕ ಮನಸ್ಸಿನ ಭಾರ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅದರಿಂದ ಹೊರಬಂದು ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಗಮನಹರಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಜನಪರವಾಗಿ ಚಿಂತಿಸುವ ಜೆಸಿ ಹಾಗೂ ಕಸಾಪದಂತಹ ಜನಪರ ಸಂಘಟನೆಗಳು ಅದಕ್ಕೆ ನೆರವಾಗಲಿವೆ. ರಾಷ್ಟ್ರದ ಶ್ರೇಷ್ಠ ಸಂಪತ್ತು ವ್ಯಕ್ತಿತ್ವದಲ್ಲಿ ಅಡಗಿದೆ. ಅದನ್ನು ರೂಪಿಸಿಕೊಂಡು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಗತ್ತನ್ನು ಬದಲಾಯಿಸುವುದರ ಜೊತೆಗೆ ಸಮೃದ್ಧಗೊಳಿಸುವ ಶಕ್ತಿ ಸಂಘ-ಸಂಸ್ಥೆಗಳಿಗಿದೆ. ಆದರೆ, ಅದರ ಸದುಪಯೋಗ ಮುಖ್ಯ. ಸಂಘ-ಸಂಸ್ಥೆಗಳನ್ನ ಕಟ್ಟಿ ಬೆಳೆಸುವುದರ ಜೊತೆಗೆ ಅದನ್ನ ಅಭಿವೃದ್ಧಿಗೊಳಿಸಬೇಕು. ಅಂದಾಗ ಅದರ ಫಲ ಎಲ್ಲರಿಗೂ ತಲುಪಲು ಸಾಧ್ಯ. ಅದರೊಂದಿಗೆ ಅದರಲ್ಲಿ ಪಾಲ್ಗೊಂಡ ವ್ಯಕ್ತಿಯ ವ್ಯಕ್ತಿತ್ವ ಕೂಡ ಬದಲಾವಣೆ ಹೊಂದಲಿದೆ ಎಂದ ಮಾಸಣಗಿ ಬಾಹ್ಯ ಮತ್ತು ಆಂತರಿಕ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡಾಗ ಸಮೃದ್ಧಿ ಜೀವನ ಪಡೆಯಬಹುದಾಗಿದೆ ಎಂದರು.
ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದ ಜೆಸಿಐ ವಲಯ ಅಧ್ಯಕ್ಷ ಚಂದ್ರಾಮಪ್ಪ ವರ್ತಮಾನ ಕಾಲದಲ್ಲಿ ಜೀವಿಸುವುದಕ್ಕೆ ಪ್ರತಿಯೊಬ್ಬರೂ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಅದು ಯಾವ ಶಾಲೆಯಲ್ಲಿಯೂ ದೊರೆಯುವುದಿಲ್ಲ. ಬದಲಾಗಿ ಮಗುವಿನ ಆಟೋಟ ಹಾಗೂ ಮುಗ್ಧ ಮನಸ್ಸಿನ ಮಾತುಗಳಿಂದ ಕಲಿಯಲು ಸಾಧ್ಯ ಎಂದರು.
ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ ವಲಯ ಉಪಾಧ್ಯಕ್ಷ ಪ್ರಕಾಶ ಡಿ, ಪ್ರತಿಯೊಬ್ಬರೂ ನಾಯಕತ್ವ ಗುಣ ಹೊಂದಿರುತ್ತಾರೆ. ಆದರೆ, ಅದನ್ನು ಹೊರ ಹಾಕಲು ಸೂಕ್ತ ವೇದಿಕೆಯನ್ನು ಜೆಸಿಐ ಒದಗಿಸಲಿದೆ. ಸಮಾಜ ಕಟ್ಟುವ ಕೆಲಸ ಪ್ರತಿಯೊಬ್ಬ ಪ್ರಜೆಯ ಹೊಣೆಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರಿಗೆ ತರಬೇತಿ ನೀಡುವ ಉದ್ದೇಶವನ್ನು ಜೆಸಿಐ ಹೊಂದಿದೆ ಎಂದರು.
ತಾಪಂ ಅಧ್ಯಕ್ಷೆ ಉಷಾ ಬಿಳೆಕುದುರಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಜೆ. ಪಾಟೀಲ ಮಾತನಾಡಿದರು. ಜೆಸಿಐ ಅಧ್ಯಕ್ಷ ಜಿ.ಎನ್. ಯಲಿಗಾರ ಅಧ್ಯಕ್ಷತೆ ವಹಿಸಿದ್ದರು.
2013ನೆ ಸಾಲಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಿ.ಸಿ. ನಿಡಗುಂದಿ ಅವರಿಗೆ ಜಿ.ಎನ್. ಯಲಿಗಾರ ಅಧಿಕಾರ ಹಸ್ತಾಂತರಿಸಿದರು. ರೂಪಾ ಯಲಿಗಾರ, ಡಾ. ಲತಾ ನಿಡಗುಂದಿ. ಡಾ. ಡಿ.ಎ. ಗೊಬ್ಬರಗುಂಪಿ, ಡಾ. ಕೆ.ಎಚ್. ಪಾಟೀಲ, ಕೆ.ಬಿ. ಚನ್ನಪ್ಪ, ವಿಜಯಕುಮಾರ ಬುಳ್ಳಕ್ಕಬವರ, ಮಾಂತೇಶ ಬಳಿಗಾರ, ಮಲ್ಲಿಕಾರ್ಜುನ ನೀಲಗುಂದ, ರಾಘವೇಂದ್ರ ದೇಶಪಾಂಡೆ, ಬಾಬಾಜಾನ ಹುಲಗೂರ, ಇನ್ನಿತರರುಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

