ಹಾವೇರಿ

ಅಧಿಕೃತ ವ್ಯಾಪಾರಿಗಳಿಂದ ಗೊಬ್ಬರ-ಬೀಜ ಖರೀದಿಸಿ: ರಡ್ಡಿ

Published On :

ರಾಣಿಬೆನ್ನೂರು: ತಾಲೂಕಾದ್ಯಂತ ಶೇ. 81ರಷ್ಟು ಬಿತ್ತನೆ ಮುಕ್ತಾಯವಾಗಿದ್ದು, ಶೇ.19ರಷ್ಟರಲ್ಲಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆಗಾಗಿ 2008 ಕ್ವಿಂಟಲ್ ಗೋವಿನ ಜೋಳದ ಫ್ಯಾಕೆಟ್‌ಗಳನ್ನು, 21,500 ಕನಕ ಹತ್ತಿ ಬೀಜದ ಡಬ್ಬಿಗಳನ್ನು ಹಾಗೂ ಸೇಂಗಾ, ತೊಗರಿ, ಹೆಸರು ಬೀಜಗಳನ್ನು, 10 ಸಾವಿರ ಟನ್ ರಾಸಾಯನಿಕ ಗೊಬ್ಬರವನ್ನು ವಿತರಿಸಲಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗನಗೌಡರಡ್ಡಿ ಅವರು ಮಾಹಿತಿ ನೀಡಿದರು.
3,200 ಟನ್ ಗೊಬ್ಬರವನ್ನು ಗೋದಾಮುಗಳಲ್ಲಿರಿಸಿದ್ದು, ರೈತರಿಂದ ಹಾಗೂ ಗ್ರಾಮ ಸೇವಾ ಸಹಕಾರಿ ಬ್ಯಾಂಕ್‌ಗಳಿಂದ ಬೇಡಿಕೆ ಬಂದಲ್ಲಿ ವಿತರಿಸುತ್ತೇವೆ. ಅಧಿಕೃತ ಲೈಸನ್ಸ್ ಹೊಂದಿರುವ ಗೊಬ್ಬರ ವ್ಯಾಪಾರಿಗಳ ಹತ್ತಿರ ಗೊಬ್ಬರ-ಬೀಜಗಳನ್ನು ಖರೀದಿಸಿ ರಸೀದಿಗಳನ್ನು ಪಡೆಯಲು ರೈತರು ಮುಂದಾಗಬೇಕೆಂದು ತಿಳಿಸಿದರು.
ಯಂತ್ರಗಳ ಪ್ರಾತ್ಯಕ್ಷಿಕೆ: ಗದ್ದೆಯನ್ನು ಹದಗೊಳಿಸುವುದಕ್ಕಾಗಿ ಟ್ರ್ಯಾಕ್ಟರ್ ಚಾಲಿತ ಯಂತ್ರೋಪಕರಣಗಳನ್ನು ಖರೀದಿಸುವವರಿಗೆ ತಾಲೂಕು ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ ಪ್ರಾತ್ಯಕ್ಷಿಕೆಗಾಗಿ ರಂಟೆ-ಕುಂಟೆ, ನೆಗಿಲು(ಡಿಸ್ಕಹ್ಯಾಸ್), ಕೆಜ್ ವ್ಹಿಲ್ ಹಾಗೂ ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವವರಿಗೆ ಕಾಳನ್ನು ಹಿಟ್ಟು ಮಾಡುವ ಗಿರಣಿ ಖಾರಕುಟ್ಟುವ ಯಂತ್ರಗಳು, ಸಿರಿಧಾನ್ಯಗಳೆಂದು ಕರೆಯುವ ಸಾವಿ, ನವಣಿ, ಸಜ್ಜೆ, ಭರಗು, ಯಳ್ಳು, ಗುರಳ್ಳು, ಹುರಳಿಯಲ್ಲಿನ ಕಲ್ಲುಗಳನ್ನು ಬೇರ್ಪಡಿಸುವ ಯಂತ್ರಗಳನ್ನು ಮತ್ತು ತುಂತುರು ನೀರಾವರಿಗೆ ಬೇಕಾಗುವ ಯಂತ್ರಗಳನ್ನು ಪ್ರಾತ್ಯಕ್ಷಿಕೆಗಾಗಿ ಇಡಲಾಗಿದೆ. ಆಸಕ್ತರು ಖರೀದಿಸುವುದಕ್ಕಾಗಿ ಹಾಗೂ ಮಾಹಿತಿಗಾಗಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಶಿವಾನಂದ ಹಾವೇರಿ ಮೊ-7259005480, 7259005479ಗೆ ಸಂಪರ್ಕಿಸಬೇಕೆಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಾಗನಗೌಡ ರಡ್ಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.