ಹಾವೇರಿ

ಗಟಾರುಗಳ ಸ್ವಚ್ಛತೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ರಾಣಿಬೆನ್ನೂರು: ತಾಲೂಕಿನ ಕಮದೋಡ ಗ್ರಾಮ ಪಂಚಾಯಿತಿ ವ್ಯಾಪ್ತಿ ಹುಣಶಿಕಟ್ಟಿ ಗ್ರಾಮದಲ್ಲಿ ಮತ್ತು ಹುಣಶಿಕಟ್ಟಿ ಲಂಬಾಣಿ ತಾಂಡಾದ ಓಣಿಗಳಲ್ಲಿ ತುಂಬಿ ನಿಂತಿರುವ ಗಟಾರಗಳನ್ನು ಸ್ವಚ್ಛಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕಾರಣ ನೂರಾರು ಜನರು ಹಾಗೂ ಚಿಕ್ಕಮಕ್ಕಳು ಡೆಂಘೀ ಜ್ವರ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದು, ನಿರ್ಲಕ್ಷ್ಯ ವಹಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತಾಪಂಗೆ ಪತ್ರ ಬರೆದಿದ್ದಾರೆ.
ಕಮದೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಣಶಿಕಟ್ಟಿ ಗ್ರಾಮದಲ್ಲಿನ ಸಾರ್ವಜನಿಕರಿಗೆ ಮತ್ತು ಲಂಬಾಣಿ ತಾಂಡಾದಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಮೇಲ್ಮಟ್ಟದ ಜಲಾಗಾರಗಳನ್ನು (ಓವರ್ ಹೆಡ್ ಟ್ಯಾಂಕ್) ನಿರ್ಮಿಸಿದ್ದು, ಸುಮಾರು 2 ವರ್ಷಗಳಿಂದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿರುವುದಿಲ್ಲ. ತುಂಬಿ ನಿಂತಿರುವ ಗಟಾರುಗಳನ್ನು ಸ್ವಚ್ಛಗೊಳಿಸಿಲ್ಲದ ಕಾರಣ ಗ್ರಾಮ, ಲಂಬಾಣಿ ತಾಂಡಾಗಳಲ್ಲಿನ ನೂರಾರು ಜನರು ವಿವಿಧ ರೋಗಗಳು, ಮಕ್ಕಳು ಡೆಂಘೀ ಜ್ವರದಿಂದ ನರಳುತ್ತಿದ್ದಾರೆ.
ಮಕ್ಕಳ ಪಾಲಕರು ಜೀವ ಭಯದಿಂದ ಮಕ್ಕಳನ್ನು ದಾವಣಗೆರೆ, ಮಣಿಪಾಲ ಆಸ್ಪತ್ರೆಗಳಿಗೆ ಕರೆದುಕೊಂಡು ಹೊರಟಿರುವುದನ್ನು ನೋಡಿದರೆ ಎಂಥವರಿಗಾದರು ನೋವಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಗಮನಹರಿಸದಿರುವ ಕಾರಣ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸೊಳ್ಳೆ ನಿರ್ಮೂಲನೆಗಾಗಿ ಫಾಗಿಂಗ್ ಮಾಡಿಸಬೇಕು, ತುಂಬಿ ನಿಂತಿರು ಗಟಾರು ಹಾಗೂ ಗ್ರಾಮದ ಸುತ್ತಲಿನ ಪಂಚಾಯಿತಿ ಸರಹದ್ದಿನಲ್ಲಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕೆಂದು ಹುಣಶಿಕಟ್ಟಿ ಗ್ರಾಮಸ್ಥರಾದ ಲೋಕೇಶ ಸುತಾರ, ಹುಚ್ಚಪ್ಪ ಹುಚ್ಚಗರ್ಕಿ, ವೆಂಕಟೇಶ ಲಮಾಣಿ, ಹನುಮಂತಪ್ಪ ದೇವರಗುಡ್ಡ, ಶಿದ್ದಪಗೌಡ್ರ ತಾಪಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.