ಚಿತ್ರಕಲೆಯಿಂದ ಪರಿಸರ ಪ್ರಜ್ಞೆ
ಹಾನಗಲ್ಲ: ಪರಿಸರ ಪ್ರಜ್ಞೆಯನ್ನು ಪ್ರಾಥಮಿಕ ಶಾಲಾ ಹಂತದಲ್ಲಿರುವ ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಮೂಲಕ ಪರಿಸರ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ನಡೆಸುತ್ತಿದ್ದು, ಈ ಮೂಲಕ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಬಮ್ಮನಹಳ್ಳಿ ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀಕಾಂತ ದೊಡ್ಡಕುರುಬರ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಕಸಾಪ ಬಮ್ಮನಹಳ್ಳಿ ಗ್ರಾಮೀಣ ಘಟಕ ಹಾಗೂ ಅನುಭವ ಮಂಟಪ ವ್ಯಕ್ತಿತ್ವ ವಿಕಸನ ಕೇಂದ್ರ ಹಾನಗಲ್ಲ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಪಾಲಕರು ಹಾಗೂ ಸಂಘ-ಸಂಸ್ಥೆಗಳು ಪರಿಸರದ ಕುರಿತು ನಾಗರಿಕ ಪ್ರಜ್ಞೆ ಬೆಳೆಸಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಮುಖ್ಯೋಪಾಧ್ಯಾಯ ಎಂ.ವಿ. ಪಾಟೀಲ, ಸಹ ಶಿಕ್ಷಕ ಕೆ.ಟಿ. ವಡ್ಡರ, ಮಂಜಪ್ಪ ಯಾಲಕ್ಕಿ, ಎಸ್.ಎಲ್. ಮಣ್ಣವಡ್ಡರ, ಜೆ.ಎಸ್. ಹಿರೇಮಠ, ಎಸ್.ಎಂ. ಕಂಬಾಳಿಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ಪರ್ಧಾ ವಿಜೇತರು: ಸುಮಾರು 35 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಸುಮಾ ಪಾಟೀಲ ಹಾಗೂ ಶ್ವೇತಾ ಕೊಳೂರಗಿ (ಪ್ರಥಮ), ಮಾರ್ಕಂಡೇಯ ಸುಣಗಾರ ಹಾಗೂ ದಾನೇಶ್ವರಿ ಹಾವಣಗಿ (ದ್ವಿತೀಯ), ಸೌಮ್ಯಾ ನಾಗನೂರ (ತೃತೀಯ), ಪ್ರೌಢಶಾಲಾ ವಿಭಾಗದ ರಾಹೀನಾಬಾನು ಕುಂದಗೋಳ (ಪ್ರಥಮ), ಪ್ರಶಾಂತ ಪಂಚಗಟ್ಟಿಮಠ (ದ್ವಿತೀಯ), ಲಕ್ಷ್ಮೀ ಅಡಕೀಹಾಳ (ತೃತೀಯ) ಬಹುಮಾನಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

