ಗುರುವಿನ ದಯೆಯಿಂದ ನೆಮ್ಮದಿ ಜೀವನ: ಬೊಮ್ಮಾಯಿ
ಶಿಗ್ಗಾಂವಿ: ಪ್ರತಿಯೊಬ್ಬರಲ್ಲಿ ನ್ಯಾಯ, ನಿಷ್ಠುರ ಮತ್ತು ಧರ್ಮದ ಹಾದಿಯಲ್ಲಿ ಬದುಕುವುದು ಕಷ್ಟಕರ. ಆದರೆ, ಗುರುವಿನ ದಯೆ-ಕರುಣೆ ಇದ್ದಲ್ಲಿ ನೆಮ್ಮದಿ ಜೀವನ ಸಾಧ್ಯ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಸಂಗನಬಸವ ಸಭಾ ಭವನದಲ್ಲಿ ತಾಲೂಕು ಜಂಗಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗುರುವಿನ ಹೃದಯದ ಮನೆಯಿಂದ ಮಾತ್ರ ಭಯ, ಭಕ್ತಿ, ನೊಂದ ಜನರ ಕಷ್ಟಕ್ಕೆ ಸ್ಪಂದಿಸುವ ಮನೋಭಾವದಂತಹ ಉತ್ತಮ ಸಂಸ್ಕಾರ ಸಿಗುತ್ತದೆ ಎಂದರು.
ಜಂಗಮರ ಬಹು ವರ್ಷದ ಬೇಡಿಕೆಯಾದ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಸರ್ಕಾರದಿಂದ ಸ್ಪಷ್ಟವಾದ ಆದೇಶ ಹೊರಬಂದಿಲ್ಲ. ಈ ಕುರಿತು ಒತ್ತಡ ತರಲಾಗುವುದು. ಮಠದಲ್ಲಿ ಜನ್ಮ ಪಡೆದು, ಬೆಳೆದ ನನಗೆ ಗುರುಗಳ ನಿರಂತರ ಆಶೀರ್ವಾದ ಸಿಕ್ಕಿದೆ ಎಂದು ಬೊಮ್ಮಾಯಿ ಹೇಳಿದರು.
ಜಂಗಮಾಭಿವೃದ್ಧಿ ಸಂಘದ ಮುಖಂಡ ಬಿ.ಎಸ್. ಹಿರೇಮಠ ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿ ಶಿಗ್ಗಾಂವಿಯಲ್ಲಿ ಸಂಘದ ಸಭೆ ಸಮಾರಂಭ ಆಯೋಜಿಸಲು ಸೂಕ್ತ ನಿವೇಶನ, ಸಭಾ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ವಿರಕ್ತಮಠದ ಸಂಗನಬಸವ ಶ್ರೀಗಳು, ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಂಘದ ತಾಲೂಕಾಧ್ಯಕ್ಷ ಎಸ್.ಎಫ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಉಳವಯ್ಯ ಶಾಸ್ತ್ರಿಗಳು ವೇದಘೋಷ ಹೇಳಿದರು. ಗದಿಗಯ್ಯ ಹಿರೇಮಠ, ಉಪನ್ಯಾಸಕ ಎಲ್.ಎ. ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

