ಹಾವೇರಿ

ಬ್ಯಾಡ್ಮಿಂಟನ್: ವಿಶಾಲ್ ಜಿಂಗಾಡೆಗೆ ಪ್ರಶಸ್ತಿ

Published On :

ಬ್ಯಾಡಗಿ: ಜೀವ ವಿಮಾ ನಿಗಮದ ಕ್ರೀಡಾ ವಿಭಾಗ ಆಯೋಜಿಸಿದ್ದ ಅಂತರ್ ಶಾಖೆಗಳ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಸ್ಥಳೀಯ ಎಲ್‌ಐಸಿ ಶಾಖೆಯ ವಿಶಾಲ್ ಜಿಂಗಾಡೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಣಿಬೆನ್ನೂರಿನ ಅರುಣೋದಯ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಾಳು ಪೂಜಾರ ವಿರುದ್ಧ 2-0 (21-11, 21-13)ನೇರ ಸೆಟ್‌ಗಳಿಂದ ಜಯಗಳಿಸಿದ ವಿಶಾಲ್, ಇದಕ್ಕೂ ಮುನ್ನ ಜರುಗಿದ ಸೆಮಿಫೈನಲ್‌ನಲ್ಲಿ ಪಿ.ಎಚ್. ಪಾಟೀಲ ಅವರನ್ನು 2-0 (21-14, 24-22) ಸೆಟ್‌ಗಳಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಶಾಖಾ ವ್ಯವಸ್ಥಾಪಕ ಪಿ.ಎಸ್. ಅಚ್ಚಿಗೇರಿ, ಅಭಿವೃದ್ಧಿ ಅಧಿಕಾರಿಗಳಾದ ಎ.ಎಮ್. ಖಾಜಿ, ಆರ್.ಬಿ. ಮಗದುಮ್, ಎಸ್. ಎಸ್. ಜೋಶಿ, ಆಡಳಿತಾಧಿಕಾರಿ ಕೇಶವಮೂರ್ತಿ ಮೃತ್ಯುಂಜಯ ಕೆರೂಡಿ ಹಾಗೂ ಎಂ.ಬಿ. ರಾಮಗೊಂಡನಹಳ್ಳಿ ವಿಶಾಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ದಪ್ಪ ಮುಚ್ಚಂಡಿ ನಿಧನ
ಹಾನಗಲ್ಲ: ತಾಲೂಕಿನ ಅಕ್ಕಿಆಲೂರಿನ ಸಿದ್ದಪ್ಪ ಸಂಗಪ್ಪ ಮುಚ್ಚಂಡಿ (81) ಭಾನುವಾರ ನಿಧನರಾದರು.
ಮೃತರು ಆರು ಜನ ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.