ಸ್ವಚ್ಛತೆಗೆ ಗ್ರಾಪಂ ಆದ್ಯತೆ
ರಾಣಿಬೆನ್ನೂರು: ಜಿಲ್ಲೆಯಾದ್ಯಂತ ಸಂಶಯಾಸ್ಪದವಾಗಿ ಕಂಡು ಬಂದಿರುವ ಡೆಂಘೀ, ಮಲೇರಿಯಾ ಜ್ವರ ಇತರೆ ರೋಗಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಆದೇಶಿಸಿರುವ ಕಾರಣ ಗ್ರಾಪಂನಿಂದ ಸುಮಾರು ರು. 80 ಸಾವಿರ ಖರ್ಚು ಮಾ ಎಲ್ಲಾ ಹಳ್ಳಿಗಳನ್ನು ಸ್ವಚ್ಛಗೊಳಿಸಿರುವುದಾಗಿ ಹಿರೇಬಿದರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಪುತ್ರಪ್ಪ ಹಲವಾಗಲ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 25 ಕಿ.ಮೀ ಅಂತರದಲ್ಲಿರುವ ಹಿರೇಬಿದರಿ ಗ್ರಾಮವು ತುಂಗಭದ್ರಾ ನದಿ ದಡದಲ್ಲಿದ್ದು, ಈ ಗ್ರಾಮದಲ್ಲಿ ಹೆಚ್ಚಾಗಿ ರೈತರು ಕೂಲಿಕಾರರು ಮತ್ತು ಕುರಿಗಾರರಿದ್ದಾರೆ.
ವಿವಿಧ ಯೋಜನೆಗಳಲ್ಲಿ ಕಟ್ಟಡ: ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ, ಕೆಲಸ ನಿರ್ವಹಿಸುತ್ತಿರುವ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಸರ್ಕಾರದ ಯೋಜನೆಗಳಡಿ ಹಿರೇಬಿದರಿ ಗ್ರಾಮದಲ್ಲಿ ಗ್ರಾಪಂ ಕಾರ್ಯಾಲ, ಸಮುದಾಯ ಭವನ, ರಾಜೀವ ಗಾಂಧಿ ಶ್ರಮಿಕ ಶಕ್ತಿ ಭವನ, ಎಪಿಎಂಸಿ ಗೊದಾಮು, ಅಂಗನವಾಡಿ ಮತ್ತು ಪ್ರಾರ್ಥಮಿಕ ಶಾಲಾ ಕಟ್ಟಡಗಳನ್ನು ಕಟ್ಟಲಾಗಿದೆ.
ಡೆಂಘೀ, ಮಲೇರಿಯಾ ಸರ್ವೆ: ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಆದೇಶದ ಮೇರೆಗೆ ಗ್ರಾಮದಲ್ಲಿರುವ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ತಾಲೂಕು ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಿರೇಬಿದರಿ ಮತ್ತು ಕೋಣನತಂಬಗಿ ಗ್ರಾಮಗಳಲ್ಲಿ ಡೇಂಘೀ ಮತ್ತು ಮಲೇರಿಯಾ ರೋಗಗಳ ಪತ್ತೆ ಕಾರ್ಯ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಪಂ ಆದೇಶದ ಮೇರೆಗೆ ಗ್ರಾಪಂ ಅಧ್ಯಕ್ಷರಾದ ರೇಣುಕವ್ವ ಶಿವಪ್ಪ ಜಾಲಗಾರ ಹಾಗೂ ಉಪಾಧ್ಯಕ್ಷರಾದ ರೇಣುಕವ್ವ ಬಸಪ್ಪ ಕಡೇಮನಿ ಅವರ ಅಧ್ಯಕ್ಷತೆಯಲ್ಲಿ ಕರೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಗ್ರಾಪಂನಿಂದ ಸುಮಾರು ರು. 80 ಸಾವಿರ ಖರ್ಚು ಮಾಡಿ ಜೆಸಿಬಿ ಹಾಗೂ ಕೂಲಿಕಾರರನ್ನು ಬಳಸಿಕೊಂಡು 2 ಗ್ರಾಮಗಳಲ್ಲಿನ ಎಲ್ಲಾ ಗಟಾರು ಗಿಡ-ಗಂಟೆ, ತಿಪ್ಪೆಗುಂಡಿಗಳನ್ನು ಸ್ಥಳಾಂತರಿಸಿದ್ದು, 2 ಗ್ರಾಮಗಳ ಸಾರ್ವಜನಿಕರಿಗೆ ಕುಡಿಯುವ ನೀರೊದಗಿಸುವ ಓವರ್ ಹೆಡ್ ಟ್ಯಾಂಕ್, ಮಿನಿ ಟ್ಯಾಂಕ್ಗಳನ್ನು ಪಿನೈಲ್ನಿಂದ ಸ್ವಚ್ಛಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

